ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 2ನೇ ಕ್ವಾಲಿಫೈಯರ್ ಪಂದ್ಯ

Twitter
Facebook
LinkedIn
WhatsApp
19

ಅಹಮದಾಬಾದ್: 15ನೇ ಆವೃತ್ತಿ ಐಪಿಎಲ್‍ನ ಅಂತಿಮ 2 ಪಂದ್ಯಗಳಿಗೆ ಅಹಮದಾಬಾದ್ ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ನಾಳೆ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 
 

ಮೇ 27 ಶುಕ್ರವಾರ ಅಹಮದಾಬಾದ್‍ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯ ಸೋತವರು ಮತ್ತು ಗೆದ್ದವರ ನಡುವಿನ ಕಾದಾಟವಾಗಲಿದೆ. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ರಾಜಸ್ಥಾನ ತಂಡ ಸೋತು ಎರಡನೇ ಕ್ವಾಲಿಫೈಯರ್ ಆಡುವಂತಾದರೆ, ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದ ಆರ್‌ಸಿಬಿ ತಂಡ ಎರಡನೇ ಕ್ವಾಲಿಫೈಯರ್ ಗೆದ್ದು ಫೈನಲ್‍ಗೆ ಎಂಟ್ರಿಕೊಡುವ ಪ್ಲಾನ್‍ನಲ್ಲಿದೆ. ಇದೀಗ ರಾಜಸ್ಥಾನ ತಂಡಕ್ಕೆ ಕಳೆದ ಪಂದ್ಯದ ಹೀರೋ ರಜತ್ ಪಾಟಿದರ್ ಭಯ ಶುರುವಾಗಿದೆ.

ಆರ್‌ಸಿಬಿ ತಂಡದಲ್ಲಿ ಕೆ-ಕೊಹ್ಲಿ, ಜಿ-ಗ್ಲೇನ್ ಮ್ಯಾಕ್ಸ್‌ವೆಲ್, ಎಫ್-ಫಾಫ್ ಡುಪ್ಲೆಸಿಸ್ ಸ್ಟಾರ್ ಆಟಗಾರರು. ಇವರಲ್ಲಿ ಒಬ್ಬ ಆಟಗಾರ ಸಿಡಿದರೆ ಎದುರಾಳಿ ತಂಡಕ್ಕೆ ಉಳಿಗಾಲವಿಲ್ಲ. ಇದೀಗ ಇವರೊಂದಿಗೆ ಇನ್ನೋರ್ವ ಆಟಗಾರ ರಜತ್ ಪಾಟಿದರ್ ಐಪಿಎಲ್‍ನಲ್ಲಿ ಚೊಚ್ಚಲ ಶತಕ ಸಿಡಿಸಿ ಎದುರಾಳಿ ತಂಡಕ್ಕೆ ಭಯ ಹುಟ್ಟಿಸಿದ್ದಾರೆ. ಹಾಗಾಗಿ ರಾಜಸ್ಥಾನ ತಂಡ ಕೊಹ್ಲಿ, ಮಾಕ್ಸ್‌ವೆಲ್‌, ಪ್ಲೆಸಿಸ್ ಜೊತೆ ಪಾಟಿದರ್‌ ಕಡಿವಾಣ ಹಾಕಲು ಪ್ಲಾನ್ ಮಾಡಿಕೊಳ್ಳಬೇಕಾಗಿದೆ. ಇವರೊಂದಿಗೆ ಸ್ಫೋಟಕ ಆಟದ ಮೂಲಕ ಕಂಟಕವಾಗುವ ದಿನೇಶ್ ಕಾರ್ತಿಕ್ ಮೇಲೂ ರಾಜಸ್ಥಾನ ನಿಗಾ ಇಡಬೇಕಾಗಿದೆ. ಬೌಲಿಂಗ್‍ನಲ್ಲಿ ಹರ್ಷಲ್ ಪಟೇಲ್, ಹ್ಯಾಜಲ್‍ವುಡ್, ಹಸರಂಗ ಉತ್ತಮ ಲಯದಲ್ಲಿದ್ದು, ಸಿರಾಜ್ ಕೂಡ ಭರವಸೆಯ ಆಟಗಾರ.

 
20

ಇತ್ತ ರಾಜಸ್ಥಾನ ತಂಡ ಕೂಡ ಬಲಿಷ್ಠ ಬ್ಯಾಟಿಂಗ್ ಲೈನ್‍ಅಪ್ ಹೊಂದಿದ್ದು, ಯಶಸ್ವಿ ಜೈಸ್ವಾಲ್, ಬಟ್ಲರ್, ಸಂಜು ಸ್ಯಾಮ್ಸನ್, ಹೆಟ್ಮೆಯರ್ ಅವರಂತ ಹಿಟ್ಟರ್‌ಗಳ ದಂಡಿದೆ. ಬೌಲಿಂಗ್‍ನಲ್ಲಿ ಆರ್‌ಸಿಬಿಯ ಮಾಜಿ ಆಟಗಾರ ಚಹಲ್, ಅಶ್ವಿನ್, ಬೌಲ್ಟ್, ಪ್ರಸಿದ್ಧ್ ಕೃಷ್ಣ ಘಾತಕವಾಗಿ ದಾಳಿ ನಡೆಸುವ ಸಾಮರ್ಥ್ಯ ಇರುವ ಆಟಗಾರರಾಗಿದ್ದಾರೆ. ಹಾಗಾಗಿ ರಾಜಸ್ಥಾನ ತಂಡವನ್ನು ಕೂಡ ಹಗುರವಾಗಿ ಪರಿಗಣಿಸುವಂತಿಲ್ಲ.

ಲೀಗ್‍ನಿಂದಲೇ ಹೊರ ಬೀಳುವ ಸ್ಥಿತಿಯಲ್ಲಿದ್ದ ಬೆಂಗಳೂರು ತಂಡ ಅದೃಷ್ಟದಾಟದ ಮೂಲಕ ಪ್ಲೇ ಆಫ್‍ಗೆ ಪ್ರವೇಶ ಪಡೆದರೆ, ಇತ್ತ ಲೀಗ್‍ನ ಕೊನೆಯ ಪಂದ್ಯಗಳಲ್ಲಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೆರಿದ ರಾಜಸ್ಥಾನ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ರಾಜಸ್ಥಾನ ವಿರುದ್ಧ ಗೆದ್ದರೇ ಬಹುತೇಕ ಈ ಸಲ ಕಪ್ ನಮ್ದೇ ಎಂಬ ಉತ್ಸಾಹದಲ್ಲಿದ್ದಾರೆ.

ಎರಡು ತಂಡಗಳು ಕೂಡ ಫೈನಲ್ ಪಂದ್ಯವಾಡಲು ಕ್ವಾಲಿಫೈಯರ್ ಪಂದ್ಯ ಗೆಲ್ಲಲೇ ಬೇಕು. ಹಾಗಾಗಿ ಎರಡು ತಂಡಗಳ ಮಧ್ಯೆ ರೋಚಕ ಕಾದಾಟ ಕಾಣಸಿಗುವುದಂತು ಕಂಡಿತಾ. ನಾಳೆ ಗೆದ್ದ ತಂಡ ಮೇ 29 ರಂದು ಗುಜರಾತ್ ಜೊತೆ ಫೈನಲ್ ಪಂದ್ಯವಾಡಲು ತೇರ್ಗಡೆ ಹೊಂದಿದರೆ, ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ