ಮಂಗಳವಾರ, ಏಪ್ರಿಲ್ 30, 2024
ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಸ್ತೆ ದಾಟುವಾಗ ಬಸ್ ಹರಿದು ಮೂವರು ವಿದ್ಯಾರ್ಥಿಗಳು ದುರ್ಮರಣ

Twitter
Facebook
LinkedIn
WhatsApp
ರಸ್ತೆ ದಾಟುವಾಗ ಬಸ್ ಹರಿದು ಮೂವರು ವಿದ್ಯಾರ್ಥಿಗಳು ದುರ್ಮರಣ

ಬಳ್ಳಾರಿ: ರಸ್ತೆ ದಾಟುವ ವೇಳೆ ವಿದ್ಯಾರ್ಥಿಗಳಿಗೆ (Student) ಸಾರಿಗೆ ಬಸ್ (Bus) ಹರಿದು ಹೊಡೆದು ಮೂವರು ವಿದ್ಯಾರ್ಥಿಗಳು (Student) ಮೃತಪಟ್ಟ ಘಟನೆ ಬಳ್ಳಾರಿ (Ballari) ತಾಲೂಕಿನ ಹಲಕುಂದಿ ಗ್ರಾಮದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ಎಮ್ಮಿಗನೂರಿನ ಕನಕರಾಜು (19), ಮುರುಡಿ ಗ್ರಾಮದ ಶಂಕರ (18), ಸಂಡೂರು ತಾಲೂಕಿನ ನಾಗೇನಹಳ್ಳಿ ಹೊನ್ನೂರ (22) ಎಂದು ಗುರುತಿಸಲಾಗಿದೆ. ಕಡುಬಡತನಲ್ಲಿ ಬೆಳೆದ ಈ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರಿಸಲು ಶಾಲೆಗೆ ರಜೆ ಇರುವಾಗಲೆಲ್ಲ ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕೆಲಸ ಮುಗಿಸಿಕೊಂಡು ಹಾಸ್ಟೆಲ್‍ಗೆ ವಾಪಸ್ ಹೋಗಲು ರಸ್ತೆ ದಾಟುವಾಗ ಕಲಬುರಗಿಗೆ ತೆರಳುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿ ವಿಮ್ಸ್ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದ್ದು, ತಾಲೂಕು ಅಧಿಕಾರಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು. ಮೊಬೈಲ್ ಕಿತ್ತು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು. ಇಲಾಖೆಯ ಅಧಿಕಾರಿಯನ್ನು ನೂಕಾಡಿ ತಳ್ಳಾಡಿ ವಿದ್ಯಾರ್ಥಿಗಳು ಹೈಡ್ರಾಮ ಮಾಡಿದ್ದಾರೆ. ಅಷ್ಟೇ ಅಲ್ಲದೇ ಎಸ್ಸಿ ಎಸ್ಟಿ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳಿಗೆ ಕಿರುಕೊಳ ಕೊಡ್ತೀರಿ. ಸಾವಿಗೀಡಾದ ವಿದ್ಯಾರ್ಥಿಗಳು ಎರಡು ದಿನದಿಂದ ಹಾಸ್ಟೆಲ್‍ನಲ್ಲಿ ಇಲ್ಲವೆಂದು ಸುಳ್ಳು ಹೇಳ್ತಿರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನ ಮಾಡಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ