ನ್ಯಾಟೊ ಸದಸ್ಯತ್ವ ಪಡೆಯುವ ಆಸೆ ಕೈಬಿಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡು ಪ್ರಾಂತ್ಯಗಳ ಸ್ವಾಯತ್ತತೆ ಸೇರಿದಂತೆ ರಷ್ಯಾದ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ.
ಉಕ್ರೇನ್ನ ಪರಿಸ್ಥಿತಿ ರಷ್ಯಾ ದಾಳಿಯಿಂದ ಬಿಗಡಾಯಿಸುತ್ತಿದೆ(Russia-Ukraine War). ನ್ಯಾಟೊ(NATO) ಸದಸ್ಯತ್ವ ಪಡೆಯುವ ಆಸೆ ಕೈಬಿಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡು ಪ್ರಾಂತ್ಯಗಳ ಸ್ವಾಯತ್ತತೆ ಸೇರಿದಂತೆ ರಷ್ಯಾದ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ. ನ್ಯಾಟೊ ಸದಸ್ಯತ್ವವನ್ನು ಇನ್ನು ಕೇಳಲು ಆಗುವುದಿಲ್ಲ. ನ್ಯಾಟೊ ಸದಸ್ಯತ್ವ ಪಡೆಯುವ ಅಗತ್ಯವೇ ತಮಗಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಲು ಹಲವು ಕಾರಣಗಳಿವೆ. ಆದರೆ ಉಕ್ರೇನ್ಗೆ ಸದಸ್ಯತ್ವ ಕೊಡಲು ನ್ಯಾಟೊ ಒಲವು ತೋರಿದ್ದು ಸಹ ಕಾರಣ. ನ್ಯಾಟೊ ಕೂಡ ರಷ್ಯಾದ ಮನವಿಯನ್ನು ತಿರಸ್ಕರಿಸುತ್ತಲೇ ಬಂತು. ಹೀಗಾಗಿ ರಷ್ಯಾ ಪುಟ್ಟ ರಾಷ್ಟ್ರ ಉಕ್ರೇನ್ ವಿರುದ್ಧ ಸಮರವನ್ನೇ ಸಾರಿತು. ಆದರೆ ರಷ್ಯಾ ಪಡೆ ಆಕ್ರಮಣ ಮಾಡುತ್ತಿದ್ದಂತೆ ನ್ಯಾಟೊ ಉಕ್ರೇನ್ನಿಂದ ಅಂತರ ಕಾದುಕೊಂಡಿದೆ. ಝೆಲೆನ್ಸ್ಕಿ ಬಹಿರಂಗವಾಗಿಯೇ ಸಹಾಯ ಕೇಳಿದರೂ ನ್ಯಾಟೊ ಅದಕ್ಕೆ ಸ್ಪಂದಿಸಲಿಲ್ಲ. ಇದರ ಬಗ್ಗೆಯೇ ಝೆಲೆನ್ಸ್ಕಿ ಮಾತನಾಡಿದ್ದಾರೆ.
ಯುರೋಪ್ನಲ್ಲಿ ಶೀತಲ ಸಮರ ಎದ್ದಾಗ, ಸೋವಿಯತ್ ಒಕ್ಕೂಟದಿಂದ ಯುರೋಪ್ನ್ನು ರಕ್ಷಣೆ ಮಾಡುವ ಸಲುವಾಗಿ ನ್ಯಾಟೊ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ) ರಚಿಸಲಾಗಿತ್ತು. ಈ ಹಿಂದೆ ಸೋವಿಯತ್ ಒಕ್ಕೂಟದಲ್ಲಿದ್ದು ಬೇರ್ಪಟ್ಟ ದೇಶಗಳಿಗೆ ಸದಸ್ಯತ್ವ ನೀಡುವ ಮೂಲಕ ನ್ಯಾಟೋ ಪೂರ್ವ ಯುರೋಪ್ನಲ್ಲಿ ಮತ್ತಷ್ಟು ಪ್ರಾಬಲ್ಯ ವಿಸ್ತರಿಸುತ್ತಿದೆ. ಇದು ಸಹಜವಾಗಿಯೇ ರಷ್ಯಾವನ್ನು ಕೆರಳಿಸಿತ್ತು. ಯುದ್ಧಕ್ಕೆ ಅದು ಕಾರಣವಾಯಿತು. ಇದೀಗ ಝೆಲೆನ್ಸ್ಕಿ ಒಂದು ಹೆಜ್ಜೆ ಹಿಂದೆ ಇಟ್ಟಿರುವುದರಿಂದ ಯುದ್ಧ ಮುಗಿಯಬಹುದು ಎಂಬ ನಿರೀಕ್ಷೆಗಳು ಕಾಣಿಸಿಕೊಂಡಿವೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist