ಗುರುವಾರ, ಮೇ 2, 2024
ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯೋಧರ ಸಾಹಸ ನೆನಪಿಸುವ ‘ಕಾರ್ಗಿಲ್‌ ವಿಜಯ ದಿವಸ್‌’

Twitter
Facebook
LinkedIn
WhatsApp
ಯೋಧರ ಸಾಹಸ ನೆನಪಿಸುವ ‘ಕಾರ್ಗಿಲ್‌ ವಿಜಯ ದಿವಸ್‌’

ದುರ್ಗಮ ಸ್ಥಳದಲ್ಲಿ ಯುದ್ಧ: ಶ್ರೀನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿರುವ ಸುಮಾರು 16,000 ಅಡಿ ಎತ್ತರದ ಹಿಮಚ್ಛಾದಿತ ಪರ್ವತ ಶ್ರೇಣಿಯಲ್ಲಿ, ಕಡಿದಾದ ಕಣಿವೆ ಪ್ರದೇಶದಲ್ಲಿ ಕಾರ್ಗಿಲ್‌ ಯುದ್ಧ ನಡೆದಿತ್ತು. ಇದು ಜಗತ್ತಿನ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಒಂದಾಗಿದೆ. ಪರ್ವತ ಶ್ರೇಣಿಯ ಮೇಲಿದ್ದ ಪಾಕ್‌ ಪಡೆಗಳು ಸುಲಭವಾಗಿ ಭಾರತೀಯ ಸೈನಿಕರ ಚಲನವಲನ ಗುರುತಿಸಿ ಅವರ ಮೇಲೆ ಬಾಂಬ್‌, ಶೆಲ್‌ ದಾಳಿ ನಡೆಸುತ್ತಿದ್ದರು. ಪಾಕ್‌ ಯೋಧರ ಕಣ್ಣಿಗೆ ಬೀಳದಂತೆ ಭೀಕರ ಚಳಿಯಲ್ಲಿ, ಶಸ್ತ್ರಾಸ್ತ್ರಗಳೊಂದಿಗೆ ದುರ್ಗಮ ಪರ್ವತಗಳನ್ನು ಏರುವುದು ಭಾರೀ ಸವಾಲಿನ ಕೆಲಸವಾಗಿತ್ತು. ಆದರೆ ಈ ಎಲ್ಲ ಅಡೆ ತಡೆಗಳನ್ನು ಮೀರಿದ ಭಾರತೀಯ ಯೋಧರು ವೀರಾವೇಶದಿಂದ ಹೋರಾಡಿ ಗೆಲುವು ಸಾಧಿಸಿದರು.

ವಾಯುಪಡೆಯ ಸಾಥ್‌: ಪಾಕಿಸ್ತಾನವನ್ನು ಸದೆಬಡೆಯಲು ಕಾರ್ಗಿಲ್‌ ಯುದ್ಧದಲ್ಲಿ ಭೂಸೇನೆಯೊಂದಿಗೆ ವಾಯುಪಡೆ ಕೂಡ ಕೈಜೋಡಿಸಿತು. ಮೇ 26ರಿಂದ ‘ಆಪರೇಶನ್‌ ಸಫೇದ್‌ ಸಾಗರ್‌’ ಹೆಸರಿನಲ್ಲಿ ವಾಯುಪಡೆ ಕಾರ್ಯಾಚರಣೆ ಆರಂಭಿಸಿತು. ಶ್ರೀನಗರ, ಅವಂತಿಪೊರಾ, ಆದಂಪುರದ ವಾಯುನೆಲೆಯಿಂದ ಕಾರ್ಯ ನಿರ್ವಹಿಸಲು ಅರಂಭಿಸಿತು. ವಾಯುಪಡೆಯ ಸಾಥ್‌, ಭೂಸೇನೆಗೆ ಇನ್ನಷ್ಟು ಬಲ ನೀಡಿತು. ಮಿಗ್‌-21 ವಿಮಾನಗಳು, ಬೋಫೋರ್ಸ್‌ ಬಂದೂಕುಗಳನ್ನು ಯುದ್ಧದಲ್ಲಿ ವ್ಯಾಪಕವಾಗಿ ಬಳಸಲಾಯಿತು. ಆದರೆ ಈ ಕಾರ್ಯಾಚರಣೆಯಲ್ಲಿ ಎಂಐಜಿ 21, 27- ಈ ಎರಡು ಯುದ್ಧ ವಿಮಾನಗಳನ್ನು ಭಾರತ ಕಳೆದುಕೊಂಡಿತು.

ನೌಕಾಪಡೆಯ ‘ತಲವಾರ್‌’: ಕಾರ್ಗಿಲ್‌ ಯುದ್ಧದಲ್ಲಿ ನೌಕಾಪಡೆಯೂ ಧುಮುಕಿತು. ‘ಆಪರೇಶನ್‌ ತಲವಾರ್‌’ ಎಂಬ ಹೆಸರಿನಲ್ಲಿ ಅರಬ್ಬೀ ಸಮುದ್ರದಲ್ಲಿ ತನ್ನ ಹಿಡಿತ ಹೆಚ್ಚಿಸಿಕೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಪೆಟ್ರೋಲಿಯಂ ಉತ್ಪನ್ನಗಳು ತಲುಪದಂತೆ ಮಾಡಿತು. ಆಗಿನ ಪ್ರಧಾನಿ ನವಾಜ್‌ ಷರೀಫ್‌ ಬಹಿರಂಗ ಪಡೆಸಿದಂತೆ ಯುದ್ಧ ಪೂರ್ಣ ಪ್ರಮಾಣದಲ್ಲಿ ಆರಂಭವಾದರೆ ಕೇವಲ 6 ದಿನಗಳಿಗೆ ಸಾಕಾಗುವಷ್ಟುಇಂಧನ ಮಾತ್ರ ಪಾಕಿಸ್ತಾನದಲ್ಲಿತ್ತು. ನೌಕಾಪಡೆಯ ಈ ಅನಿರೀಕ್ಷಿತ ಕ್ರಮಕ್ಕೆ ಪಾಕ್‌ ಅಕ್ಷರಶಃ ತತ್ತರಿಸಿ ಹೋಯಿತು.

ವಿಜಯದ ಹಾದಿ: ಭಾರತದ ಕೆಚ್ಚೆದೆಯ ಯೋಧರು ಸತತ ಹೋರಾಟದ ಬಳಿಕ ಬೆಟಾಲಿಕ್‌ ಸೆಕ್ಟರ್‌ನ ಪ್ರಮುಖ 2 ಭಾಗಗಳನ್ನು ಮರು ವಶಪಡಿಸಿಕೊಂಡರು. ಟೋಲೋಲಿಂಗ್‌ ಪ್ರದೇಶವೂ ಭಾರತದ ಕೈವಶವಾಯಿತು. ಬಳಿಕ 10 ಪಾಕ್‌ ಯೋಧರ ಹತ್ಯೆಗೈದು ಟೈಗರ್‌ ಹಿಲ್ಸ್‌ ಅನ್ನು ವಶಪಡಿಸಿಕೊಂಡಿತು. ಈ ಕಾರ್ಯಾಚರಣೆಯಲ್ಲಿ ಭಾರತದ 5 ಯೋಧರು ಹತರಾದರು. ಜು. 5 ರಂದು ದ್ರಾಸ್‌ ಸೇರಿದಂತೆ ಇನ್ನಿತರ ಪ್ರದೇಶಗಳು ಭಾರತದ ಸ್ವಾಧೀನವಾದವು. ಒಟ್ಟಾರೆ ಸುಮಾರು 2 ತಿಂಗಳ ಕಾರ್ಯಾಚರಣೆ ಬಳಿಕ ಪಾಕ್‌ ಆಕ್ರಮಿತ ಪ್ರದೇಶದ ಶೇ. 75 ರಿಂದ ಶೇ.80ರಷ್ಟುಭಾಗಗಳು ಮತ್ತೆ ಭಾರತದ ತೆಕ್ಕೆಗೆ ಬಂದಿದ್ದವು. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಚತುರ ರಾಜತಾಂತ್ರಿಕ ನಡೆಗಳ ಪರಿಣಾಮಗಾಗಿ ಅಂತಾರಾಷ್ಟ್ರೀಯ ಸಮುದಾಯಗಳ ಒತ್ತಡದಿಂದಾಗಿ ಇನ್ನುಳಿದ ಭಾಗಗಳಿಂದ ಪಾಕ್‌ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಅನಿವಾರ್ಯವಾಯಿತು. ಅಂತಿಮವಾಗಿ 1999ರ ಜುಲೈ 26ರಂದು ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದೆ ಎಂದು ಘೋಷಿಸಲಾಯಿತು. ಈ ಗೆಲುವಿನ ಸ್ಮರಣಾರ್ಥ ‘ಕಾರ್ಗಿಲ್‌ ವಿಜಯ ದಿವಸ’ವನ್ನು ಪ್ರತಿವರ್ಷವೂ ಆಚರಿಸಲಾಗುತ್ತದೆ.

ಯುದ್ಧದ ವಿಶೇಷತೆಗಳು: 2ನೇ ವಿಶ್ವಯುದ್ಧದ ಬಳಿಕ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ ಯುದ್ಧ ಎಂದು ಕಾರ್ಗಿಲ್‌ ಯುದ್ಧ ಖ್ಯಾತಿ ಪಡೆದಿದೆ. ಅಲ್ಲದೇ ದೂರದರ್ಶನದಲ್ಲಿ ದೇಶಾದ್ಯಂತ ಪ್ರಸಾರವಾದ ಮೊದಲ ಯುದ್ಧ ಇದಾಗಿದೆ. ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಡೆದ ಯುದ್ಧಗಳಲ್ಲಿ ಇದು ಕೂಡಾ ಒಂದಾಗಿದೆ. ಕಾರ್ಗಿಲ್‌ ಯುದ್ಧದ ವೇಳೆಯಲ್ಲಿ ಸರ್ಕಾರ ಪ್ರತಿ ನಿತ್ಯ 15 ಕೋಟಿ ರು. ವೆಚ್ಚ ಮಾಡಿದ್ದು, ಒಂದು ದಾಖಲೆಯೆನಿಸಿದೆ. 2 ಪರಮಾಣು ಸಶಸ್ತ್ರ ರಾಷ್ಟ್ರಗಳ ನಡುವೆ ನಡೆದ ಯುದ್ಧ ಇದಾಗಿದೆ.

ನಂಬರ್‌ ಗೇಮ್‌

5000 ಯೋಧರು- ಭಾರತದ ಗಡಿಯೊಳಗೆ ನುಸುಳಿದ ಪಾಕಿಸ್ತಾನಿಗಳ ಸಂಖ್ಯೆ

20000 ಯೋಧರು- ಪಾಕಿಗಳ ಮೇಲೆ ಮುಗಿಬಿದ್ದ ಭಾರತೀಯ ಯೋಧರ ಸಂಖ್ಯೆ

524 ಯೋಧರು- ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಂಖ್ಯೆ

700 ಯೋಧರು- ಯುದ್ಧದಲ್ಲಿ ಮೃತಪಟ್ಟಪಾಕಿಸ್ತಾನಿಗಳ ಸಂಖ್ಯೆ (ಸ್ವತಂತ್ರ ಅಂಕಿಅಂಶಗಳ ಪ್ರಕಾರ)

15 ಕೋಟಿ ರು. – ಯುದ್ಧಕ್ಕಾಗಿ ಭಾರತ ಮಾಡಿದ ಪ್ರತಿನಿತ್ಯದ ವೆಚ್ಚ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..! Twitter Facebook LinkedIn WhatsApp ಮಂಗಳೂರು:ಅಡ್ಯಾರ್‌ನಲ್ಲಿರುವ ಬೋಂಡಾ ಕಾರ್ಖಾನೆಯಿಂದ ಪೂರೈಕೆಯಾಗುವ ತೆಂಗಿನಕಾಯಿ ನೀರು ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ ಎಂಬ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..! Twitter Facebook LinkedIn WhatsApp ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಜತಾ ಕೆ ಕಜೆಕಾರ್ (39

ಅಂಕಣ