ಸಾಗರ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಸಂಬಂಧಿ ಯುವತಿಯೊಬ್ಬಳ ಸಾವಿನಿಂದ ಮನನೊಂದ ಯುವಕ, ಆಕೆಯ ಚಿತೆಯ ಮೇಲೆ ಹಾರಿ ಪ್ರಾಣ ಬಿಟ್ಟಿದ್ಧಾನೆ..!
ಯುವಕನ ಹತ್ತಿರದ ಸಂಬಂಧಿಯಾಗಿದ್ದ ಯುವತಿಯ ಸಾವಿನಿಂದ ಯುವಕ ತುಂಬಾನೇ ಬೇಸರಗೊಂಡಿದ್ದ ಎಂದು ತಿಳಿದು ಬಂದಿದೆ. ಆತ ಚಿತೆಗೆ ಹಾರುವ ಮುನ್ನ ಅದಕ್ಕೆ ನಮಸ್ಕರಿಸುತ್ತಿದ್ದ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ಧಾರೆ.
ಮಧ್ಯ ಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯ ಮಜಗಾವ್ ಎಂಬ ಗ್ರಾಮದ ಯುವತಿ ಜ್ಯೋತಿ ದಾಗಾ ಅವರು ಬಾವಿಯೊಂದರ ಪಕ್ಕ ನಡೆದುಕೊಂಡು ಹೋಗುವಾಗ ಅಚಾನಕ್ಕಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದರು. ಇದರಿಂದ ಯುವಕ ತೀವ್ರ ಆಘಾತಕ್ಕೆ ಒಳಗಾಗಿದ್ದ. ಯುವತಿಯ ಸಂಬಂಧಿಕರು ಆಕೆಯ ಅಂತ್ಯಕ್ರಿಯೆ ನೆರವೇರಿಸಿ ಚಿತೆಗೆ ಬೆಂಕಿ ಇಟ್ಟ ಬಳಿಕ ತಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದರು. ಆದರೆ, ಯುವತಿಯ ಸಂಬಂಧಿ ಯುವಕ ಕರಣ್ ಮಾತ್ರ ಸ್ಮಶಾನದಲ್ಲೇ ಇದ್ದ. ಹೊತ್ತಿ ಉರಿಯುತ್ತಿದ್ದ ಚಿತೆಯ ಬಳಿಯಲ್ಲೇ ನಿಂತಿದ್ದ.
ಗ್ರಾಮಸ್ಥರೂ ಕೂಡಾ ಆತ ಚಿತೆಯ ಬಳಿ ನಿಂತಿದ್ದನ್ನು ಗಮನಿಸಿದರು. ನೋವಿನಲ್ಲಿ ಇರಬಹುದು ಎಂದು ಭಾವಿಸಿದ್ದರು. ಆದರೆ, 21 ವರ್ಷ ವಯಸ್ಸಿನ ಯುವಕ ನೋಡ ನೋಡುತ್ತಲೇ ಚಿತೆಗೆ ಹಾರಿಬಿಟ್ಟ. ಈ ವಿಚಾರ ತಿಳಿದ ಕುಟುಂಬಸ್ಥರು ಸ್ಥಳಕ್ಕ ಧಾವಿಸುವಷ್ಟರಲ್ಲಿ ತುಂಬಾನೇ ತಡವಾಗಿತ್ತು. ಸಾಕಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವಕ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಜಗಾವ್ ಗ್ರಾಮದ ಸರಪಂಚ್ ಭರತ್ ಸಿಂಗ್ ಘೋಸಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಪ್ರಕರಣದ ಕುರಿತ ವಿಚಾರಣೆ ನಡೆಯುತ್ತಿದೆ. ತನಿಖೆ ಸಂಪೂರ್ಣ ಆದ ಬಳಿಕ ಸಮಗ್ರ ಮಾಹಿತಿ ನೀಡೋದಾಗಿ ಇಲ್ಲಿನ ಸ್ಥಳೀಯ ಬಹೇರಿಯಾ ಪೊಲೀಸ್ ಠಾಣೆಯ ಮುಖ್ಯಸ್ಥ ದಿವ್ಯ ಪ್ರಕಾಶ್ ತ್ರಿಪಾಠಿ ತಿಳಿಸಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist