ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೋದಿ ಭದ್ರತೆಗೆ ತೆರಳಿದ್ದ ಯೋಧನ ದೇಹದಲ್ಲಿ 30ಕ್ಕೂ ಹೆಚ್ಚು ಗ್ರೆನೇಡ್‌ ಚೂರುಗಳು

Twitter
Facebook
LinkedIn
WhatsApp
ಮೋದಿ ಭದ್ರತೆಗೆ ತೆರಳಿದ್ದ ಯೋಧನ ದೇಹದಲ್ಲಿ 30ಕ್ಕೂ ಹೆಚ್ಚು ಗ್ರೆನೇಡ್‌ ಚೂರುಗಳು

ಕಲಬುರಗಿ: ಹಗಲಿರಳು ದೇಶ ಕಾಯುವ ಮತ್ತು ಪ್ರಧಾನಿ ಮೋದಿ ಅವರ ಏ.24ರ ಜಮ್ಮು-ಕಾಶ್ಮೀರ ಕಾರ್ಯಕ್ರಮದ ಭದ್ರತೆ ಕರ್ತವ್ಯಕ್ಕೆ ನಿಯೋಜನೆಯಾಗಿ ಏ.22ರ ರಾತ್ರಿ ಉಗ್ರರ ಗುಂಡಿಗೆ ಎದೆಯೊಡ್ಡಿ ಗಾಯಗೊಂಡು, ತಿಂಗಳ ಕಾಲ ಕೋಮಾಕ್ಕೆ ತುತ್ತಾಗಿ, ಕೊನೆಗೆ ಸಾವು ಗೆದ್ದು ನೋವಿನಲ್ಲಿರುವ ಸೈನಿಕ ಈಗ ಸರ್ಕಾರದ ಎದುರು ತನಗೆ ಉತ್ತಮ ಚಿಕಿತ್ಸೆ ಕೊಡಿಸಿ ಎಂದು ಮೊರೆ ಇಟ್ಟಿದ್ದಾರೆ.ಉಗ್ರರ ಎರಡು ಗುಂಡು ದೇಹ ಹೊಕ್ಕರೂ ಉಸಿರು ಚೆಲ್ಲದ ಸೈನಿಕ, ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯೂರಿಟಿ ಫೋರ್ಸ್‌ನಲ್ಲಿ (ಸಿಐಎಸ್‌ಎಫ್‌)3ನೇ ಆರ್ಮಿ ಬಟಾಲಿಯನ್‌ ಜವಾನ್‌ ಆಳಂದ ತಾಲೂಕಿನ ಹಿರೋಳ್ಳಿ ಗ್ರಾಮದ ಸೈನಿಕ ವಿಠ್ಠಲ ಶಾಂತಪ್ಪ ವಾಡೇದ್‌ ಸಾವಿಗೆ ಬೆನ್ನು ತೋರಿಸಿಲ್ಲ. ಉಗ್ರರಿಗೆ ತಿರುಗಿ ಉತ್ತರ ಕೊಡಬೇಕೆನ್ನುವಾಗಲೇ ಅನತಿ ದೂರದಲ್ಲಿದ್ದ ಗ್ರೆನೇಡ್‌ ಸಿಡಿದು ದೇಹದ ನಾನಾ ಭಾಗಗಳಲ್ಲಿ ಅದರ ಚೂರುಗಳು ಹೊಕ್ಕಿವೆ. ಇದರಿಂದಾಗಿ ಅವರು ತಿಂಗಳ ಕಾಲ ಕೋಮಾಕ್ಕೆ ಒಳಗಾಗಿದ್ದರು ಎನ್ನುವ ಅಂಶವನ್ನು ಸೇನಾ ಆಸ್ಪತ್ರೆ ವೈದ್ಯರು ಖಾತ್ರಿಪಡಿಸಿದ್ದಾರೆ.


ಏ.22ರ ರಾತ್ರಿ ಕರ್ತವ್ಯ ಮುಗಿಸಿ ಬ್ಯಾರೇಗ್‌ ಕಡೆಗೆ ಹೊರಟಾಗ ಏಕಾಏಕಿ ಉಗ್ರರು ವಿಠ್ಠಲ ವಾಡೇದ್‌ ಇದ್ದ ವಾಹನದ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಅವರಿಗೆ ಉತ್ತರ ಕೊಡುವಾಗ ತಂಡದ ಅಧಿಕಾರಿಯೊಬ್ಬರು ಕಣ್ಣೇದುರೇ ಉಸಿರು ಚೆಲ್ಲಿದ್ದಾರೆ. ಎಲ್ಲ ಗಡಿಬಿಡಿಯಲ್ಲಿ ಇವರಿಗೂ ಎರಡು ಗುಂಡು ದೇಹ ಹೊಕ್ಕಿವೆ. ಇದಾದ ಕೆಲವೇ ಕ್ಷಣದಲ್ಲಿ ಅನತಿ ದೂರದಲ್ಲಿ ಸಿಡಿದ ಗ್ರೆನೇಡ್‌ನ‌ ಚೂರುಗಳು ದೇಹ ಹೊಕ್ಕಾಗ ಸಾವು ಎದೆ ತಟ್ಟಿದೆ. ಮುಂದೆ ಒಂದು ತಿಂಗಳು ಕೋಮಾದಲ್ಲಿದ್ದರು. ಅದಾದ ಬಳಿಕ ಅವರಿಗೆ ಪ್ರಜ್ಞೆ ಮರುಕಳಿಸಿ ಯತಾಸ್ಥಿತಿಗೆ ಬಂದಾಗ ವೈದ್ಯರ ಪ್ರಯತ್ನ ಮುಗಿದಿತ್ತು.ಆಪರೇಷನ್‌ ಮಾಡಿ ಗುಂಡು ಮತ್ತು ಕೆಲವು ಗ್ರೆನೇಡ್‌ ಚೂರುಗಳು ತೆಗೆದಿದ್ದರು. ಆದರೆ, ಬದುಕುಳಿಯುವುದು ಕಷ್ಟ ಎಂದರು. ಆಗ “ಏನೇ ಆಗಲಿ.. ತಮ್ಮ ನಮ್ಮೂರಲ್ಲೇ ಉಸಿರು ಚೆಲ್ಲಲಿ.. ಇದ್ದಷ್ಟು ದಿವಸ ಕಣ್ಣಲ್ಲೇ ಇಟ್ಟು ಕಾಪಾಡಿಕೊಳ್ಳಬೇಕು ಅಂತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿಗೆ ತಂದೀವ್ರಿ, ಏನ್‌ ಮಾಡೋದು.. ಇಲ್ಲಿನ ದವಾಖಾನಿಯೊಳಗ ತಮ್ಮನಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ದೂರದ ದೊಡ್ಡೂರಿನ ದವಾಖಾನೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸೋದು ಕಷ್ಟ. ಇದ್ದ ಹಣದಲ್ಲಿ ಕಳೆದ ಒಂದು ವಾರದಿಂದ ಕಲಬುರಗಿಯ ಇಎಸ್‌ ಎಂ ದವಾಖಾನೆಯಲ್ಲಿ ತೋರಿಸುತ್ತಿದ್ದೇವೆ. ಭರವಸೆ ಇಲ್ಲ, ಆಸರೆ ಇದೆ’ ಎನ್ನುತ್ತಾರೆ ಸಹೋದರ ಕಾಶೀನಾಥ ವಾಡೇದ್‌.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ