ಮೇಲುಕೋಟೆಯಲ್ಲಿ ಪೊಂಗಲ್, ತುಳಸಿ ಪ್ರಸಾದ ಸ್ವೀಕರಿಸಿದ ನಟಿ ರಚಿತಾ ರಾಮ್
ನಟಿ ರಚಿತಾ ರಾಮ್ (Rachita Ram) ಮೇಲುಕೋಟೆಗೆ (Melukote) ತೆರಳಿ ತಮ್ಮ ಮನೆದೇವರು ಚೆಲುವನಾರಾಯಣಸ್ವಾಮಿ (Chaluvanarayanaswamy) ದರ್ಶನ ಪಡೆದಿದ್ದಾರೆ. ನಿನ್ನೆ ಮೇಲುಕೋಟೆಗೆ ಆಗಮಿಸಿದ್ದ ಅವರು ದೇವರ ದರ್ಶನ ಪಡೆದು ಪೊಂಗಲ್ ಮತ್ತು ತುಳಸಿ ಪ್ರಸಾದ ಸ್ವೀಕರಿಸಿದ್ದಾರೆ. ಹಲವು ಕಾಲ ದೇವಸ್ಥಾನದಲ್ಲೇ ಇದ್ದು, ಪ್ರಾರ್ಥಿಸಿದ್ದಾರೆ.
ಈ ವೇಳೆಯಲ್ಲಿ ಮಾತನಾಡಿರುವ ಅವರು ಏಪ್ರಿಲ್ ನಲ್ಲಿ ನಡೆಯುವ ವೈರಮುಡಿ ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗಿ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ನಡೆಯುವ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಬರುವುದಾಗಿ ತಿಳಿಸಿದ್ದಾರೆ.
ದೇವರ ದರ್ಶನ ಮುಗಿಸಿ ಆಚೆ ಬರುತ್ತಿದ್ದಂತೆಯೇ ಅಭಿಮಾನಿಗಳು ಅವರ ಸುತ್ತುವರೆದು ಫೋಟೋ ತಗೆಸಿಕೊಂಡು ಸಂಭ್ರಮಿಸಿದರು. ದೇವರ ದರ್ಶನದ ನಂತರ ಕಲ್ಯಾಣಿಗೂ ಅವರು ತೆರಳಿ ನಾಮಹಾಕಿಸಿಕೊಂಡು ರಾಜಗೋಪುರ ದರ್ಶನ ಮಾಡಲು ತೆರಳಿದರು. ಈ ಸಂದರ್ಭದಲ್ಲಿ ಅರ್ಚಕರಾದ ನಾರಾಯಣ ಪ್ರಸಾದ್ ಭಟ್ಟರ್ ಹಾಗೂ ಇತರರು ಉಪಸ್ಥಿತರಿದ್ದರು. ದೇವಾಲಯದ ಪರಿಚಯವನ್ನು ರಚಿತಾಗೆ ಮಾಡಿಸಿದರು.