ಶನಿವಾರ, ಮೇ 4, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್

Twitter
Facebook
LinkedIn
WhatsApp
ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್
 

ನವದೆಹಲಿ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಭಾನುವಾರ ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆದರೆ ಹತ್ಯೆಯಾದ ಒಂದು ದಿನದ ಬಳಿಕ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೂಸೆವಾಲಾ ಹತ್ಯೆಗೆ 3 ಎಎನ್-94 ರಷ್ಯಾದ ಸೈನ್ಯದಲ್ಲಿ ಬಳಸುವ ಮಾರಣಾಂತಿಕ ರೈಫಲ್ ಅನ್ನು ಬಳಸಲಾಗಿದೆ. ಕೇವಲ 2 ಸುತ್ತಿನಲ್ಲಿ 30 ಗುಂಡುಗಳನ್ನು ಹಾರಿಸಲಾಗಿದೆ. ಮುಖ್ಯವಾಗಿ ಪಂಜಾಬ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಇದೇ ಮೊದಲ ಬಾರಿಗೆ ಎಎನ್-94 ಭಯಾನಕ ರೈಫಲ್ ಬಳಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ
 

ಹಂತಕರು ಮೂಸೆ ವಾಲಾ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಆಗ ಅವರ ಭದ್ರತೆಯಲ್ಲಿ ನಿಯೋಜಿಸಲಾದ ಎಕೆ-47 ರೈಫಲ್‌ಗಳೊಂದಿಗೆ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ಕಂಡು ಹಿಂದಿರುಗಿದ್ದರು. ನಂತರ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್‌ನಿಂದ ಎಎನ್-94 ರೈಫಲ್ ಅನ್ನು ತಂದಿದ್ದಾರೆ. ಅದರಿಂದಲೇ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ.

AK-47 ಗಿಂತಲೂ ಭಯಾನಕ ರೈಫಲ್: AN-94 ರಷ್ಯಾದ ಆಕ್ರಮಣಕಾರಿ ರೈಫಲ್ ಆಗಿದೆ. ಎಎನ್ ಎಂಬ ಸಂಕ್ಷಿಪ್ತ ರೂಪವು `ಅವ್ಟೊಮತ್ ನಿಕೊನೊವಾ’ ಮಾಡೆಲ್ 1994 ಅನ್ನು ಸೂಚಿಸುತ್ತದೆ. ಎಎನ್-94 ಅನ್ನು ಅದರ ಮುಖ್ಯ ವಿನ್ಯಾಸಕ ಗೆನ್ನಡಿ ನಿಕೊನೊವ್ ಹೆಸರಿಡಲಾಗಿದೆ. ಅವರು ಈ ಹಿಂದೆ ನಿಕೊನೊವ್ ಮೆಷಿನ್ ಗನ್ ಅನ್ನು ವಿನ್ಯಾಸಗೊಳಿಸಿದ್ದರು. 1980 ರಲ್ಲಿ ಎಎನ್-94 ತಯಾರಿಸುವ ಕಾರ್ಯ ಪ್ರಾರಂಭವಾಗಿ 1994 ರಲ್ಲಿ ಪೂರ್ಣಗೊಂಡಿತು.

ನಂತರ 1997ರಲ್ಲಿ ರಷ್ಯಾ ಸೈನ್ಯಕ್ಕೆ ಎಎನ್-47 ರೈಫಲ್ ಅನ್ನು ಸೇರಿಸಲಾಯಿತು. ಈಗಲೂ ರಷ್ಯಾ ಸೈನ್ಯ ಇದನ್ನು ಬಳಸುತ್ತಿದೆ. ಕೆಲವು ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

ಎಎನ್-94 ರೈಫಲ್‌ನ ವಿಶೇಷತೆಗಳೇನು?

  • ಎಎನ್-94 ಒಂದು ಸುತ್ತಿನ ಮೋಡ್‌ನಲ್ಲಿ ನಿಮಿಷಕ್ಕೆ 600 ಗುಂಡುಗಳು ಪೂರ್ಣ ಮೋಡ್‌ನಲ್ಲಿದ್ದರೆ 1,800 ಬುಲೆಟ್‌ಗಳನ್ನು ಹಾರಿಸಬಲ್ಲದು.
  • ಎಕೆ-47 ರೈಫಲ್ 715 ಮೀಟರ್ ವೇಗದಲ್ಲಿ ಗುಂಡು ಹಾರಿದರೆ ಎಎನ್-94 900 ಮೀಟರ್ ವೇಗದಲ್ಲಿ ಅಂದರೆ ಪ್ರತಿ ಸೆಕೆಂಡಿಗೆ 3 ಸಾವಿರ ಅಡಿ ವೇಗದಲ್ಲಿ ಬುಲೆಟ್ ಹಾರುತ್ತದೆ.
  • ಮಾರಣಾಂತಿಕ ರೈಫಲ್ ಆಗಿರುವ ಎಎನ್-94 30 ರಿಂದ 45 ಕಾರ್ಟ್ರಿಡ್ಜ್ ಮ್ಯಾಗಜೀನ್ ಸಾಮರ್ಥ್ಯ ಹೊಂದಿದೆ.
    ಎಎನ್-94 ಅಸಾಲ್ಟ್ ರೈಫಲ್ 3.85 ಕೆಜಿ ತೂಕವಿದ್ದು, 37.1 ಇಂಚಿನಷ್ಟು ಸ್ಟಾಕ್‌ಬಟ್ ಹಾಗೂ 28.7 ಇಂಚಿನಷ್ಟು ಅಗಲವಿರಲಿದೆ, 15.9 ಇಂಚು ಉದ್ದವಿದೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ