ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾಜಿ ಸೈನಿಕನ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆ- ಮೂವರು ಭ್ರಷ್ಟ ಅಧಿಕಾರಿಗಳು ಜೈಲುಪಾಲು

Twitter
Facebook
LinkedIn
WhatsApp

ಮಾಜಿ ಸೈನಿಕರೊಬ್ಬರ ಬಳಿಯೇ ಲಂಚಕ್ಕೆ ಬೇಡಿಕೆಯಿಟ್ಟು ಮೂವರು ಲೋಕಾಯುಕ್ತ ಬಲೆಗೆ ಬಿದ್ದಿರೋ ಪ್ರಸಂಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ವೈಜಕೂರು ಕಂದಾಯ ವೃತ್ತದ ಗ್ರಾಮ ಸಹಾಯಕ ಎನ್.ಪ್ರಕಾಶ್ ಹಾಗೂ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡೋ ಸರ್ಕಾರಿ ಭೂಮಾಪಕ ಪಿ.ಎನ್ ನಾಗರಾಜ್ ಹಾಗೂ ರೈತ ಮುಖಂಡ ಕದಿರೇಗೌಡ ಎಂಬವರೇ ಲೋಕಾಯಕ್ತ ಪೊಲೀಸರ ಟ್ರ್ಯಾಪ್‍ಗೆ ಸಿಕ್ಕಿಬಿದ್ದ ಭ್ರಷ್ಟರು.

ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಿನಾಯಕ ಬಡಾವಣೆಯ ನಿವಾಸಿ ಶಿವಾನಂದ ರೆಡ್ಡಿ ಮಾಜಿ ಸೈನಿಕನಾಗಿದ್ದು, ಮಾಜಿ ಸೈನಿಕ ಖೋಟಾದಡಿ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ರು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಜಮೀನು ಮಂಜೂರಾಗಿಲ್ಲ. ಇದರಿಂದ ಬೇಸತ್ತ ರೈತ ಮುಖಂಡ ಕದಿರೇಗೌಡ ಬಳಿ ಹೋಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಆದರೆ ಈ ಕದಿರೇಗೌಡ (Kadire Gowda) ಗ್ರಾಮ ಸಹಾಯಕ ಪ್ರಕಾಶ್ ಹಾಗೂ ಭೂಮಾಪಕ ನಾಗರಾಜ್ ಜೊತೆ ಡೀಲ್ ಮಾತನಾಡಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ಮಾಜಿ ಸೈನಿಕ ಶಿವಾನಂದರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಲೋಕಾಯಕ್ತ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಾನಂದರೆಡ್ಡಿ 1987ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ್ದು, 1999ರಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವಾಗ ಅಪಘಾತವಾಗಿ ಬಲಗಾಲಿಗೆ ಗಂಭೀರ ಗಾಯವಾದ ಕಾರಣ ಸೇವೆಯಿಂದ ನಿವೃತ್ತಿಯಾಗಿದ್ರು. ಸ್ವಂತ ಊರಲ್ಲಿ ಕೃಷಿ ಮಾಡ್ಕೊಂಡು ಬದುಕು ಸಾಗಿಸೋಣ ಅಂತ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಜಮೀನು ಪಡೆಯಲು ಪ್ರತಿಭಟನೆ, ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಮಾಡಿದ್ರೂ ಸರ್ಕಾರ ಹಾಗೂ ಆಧಿಕಾರಿಗಳು ಮಾತ್ರ ಜಮೀನು ಮಂಜೂರು ಮಾಡಿಕೊಡಲಿಲ್ಲ, ಬದಲಾಗಿ ಈಗ 10 ಲಕ್ಷಕ್ಕೆ ಲಂಚಕ್ಕೆ ಪೀಡಿಸಿ, 5 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದು, ಮಾಡಿದ್ದುಣ್ಣೋ ಮಹರಾಯ ಅಂತ ತಕ್ಕಶಾಸ್ತಿ ಆಗಿದೆ.

ಒಟ್ಟಾರೆ ಮಾಜಿ ಸೈನಿಕ (Ex-soldier) ಅನ್ನೋ ಕನಿಷ್ಟ ಗೌರವ ಕೊಡದೆ ಲಂಚದ ಹಣಕ್ಕಾಗಿ ಹಾತೊರೆದ ಭ್ರಷ್ಟ ಅಧಿಕಾರಿಗಳು ಇದೀಗ ಜೈಲು ಪಾಲಾಗಿದ್ದಾರೆ. ಹೀಗೆ ಲಂಚ ಬಾಕ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಆಗಿರುವ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ