ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ದುರಂತ- 13 ಜನರಿಗೆ ಗಾಯ

Twitter
Facebook
LinkedIn
WhatsApp
369154 1677835031 1

ಬೆಂಗಳೂರು: ಅವ್ರೆಲ್ಲ ಬೆಳಗ್ಗಿನ ಜಾವದ ಸಿಹಿನಿದ್ದೆಯಲ್ಲಿದ್ದರು. ಆದರೆ ಇಡೀ ಮನೆಯನ್ನು ನಡುಗಿಸುವ ಅದೊಂದು ಸ್ಫೋಟದ ಸದ್ದು ಮನೆಯವರ ನಿದ್ದೆ ಮಾತ್ರವಲ್ಲ ಅವರ ಜೀವಕ್ಕೆ ಕಂಟಕವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ಮನೆಯಲ್ಲಿ 13 ಜನ ವಿಲವಿಲನೇ ಒದ್ದಾಡಿ ನರಳಾಡಿದ್ರು. ಮುಂಜಾವಿನಲ್ಲಿ ಬೆಂಗಳೂರಿನಲ್ಲಿ ನಡೆದ ಸಿಲಿಂಡರ್ ಸ್ಫೋಟ (Cylinder Blast In Mariyappan Palya) ದುರಂತದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 13 ಜನ. ಅದರಲ್ಲೂ 6 ಜನ ಪುಟ್ಟ ಮಕ್ಕಳು. ಸವಿ ಕನಸಿನ ನಿದ್ದೆಯಲ್ಲಿದ್ದ ಮನೆಯವರಿಗೆ ಅದೊಂದು ಸ್ಫೋಟದ ಸದ್ದು ನಡುಗಿಸಿತ್ತು. ಇಂದು ಬೆಳಗ್ಗೆ ಮನೆಯಲ್ಲಿ ಪುಟ್ಟದೊಂದು ಫಂಕ್ಷನ್ ಇಟ್ಟುಕೊಂಡಿದ್ರಿಂದ ಮನೆಯ ತುಂಬಾ ಸಂಬಂಧಿಕರು ಇದ್ರು. ಏಕಾಏಕಿ ಸಿಲಿಂಡರ್ ಸ್ಫೋಟದ ಪರಿಣಾಮ ಇಡೀ ಮನೆಯಲ್ಲಿದ್ದ 13 ಜನ ಗಾಯಗೊಂಡರು. ಮನೆ ಗೋಡೆ ಸ್ಫೋಟದ ರಭಸಕ್ಕೆ ಛಿದ್ರ ಛಿದ್ರಗೊಂಡಿದೆ. ಅಂದ ಹಾಗೆ ಈ ಘಟನೆ ನಡೆದಿದ್ದು ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ. ತಕ್ಷಣ 13 ಜನರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಫೋಟದ ರಭಸಕ್ಕೆ ಮನೆಯ ಫರ್ನಿಚರ್ ಟಿವಿ ಎಲ್ಲವೂ ಸುಟ್ಟು ಕರಕಲಾಗಿದೆ. ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಅಂಬುಲೆನ್ಸ್ ಗೆ ಕರೆ ಮಾಡಿದ್ರೂ ಅಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ. ಇದ್ರಿಂದ ಸಾರ್ವಜನಿಕರು ಆಕ್ರೋಶಗೊಂಡ್ರು. ತುರ್ತು ಪರಿಸ್ಥಿತಿಯಲ್ಲಿ 108 ಕೈಕೊಟ್ಟಿದ್ರಿಂದ ದುಡ್ಡು ಕೊಟ್ಟು ಖಾಸಗಿ ಅಂಬುಲೆನ್ಸ್ ನಲ್ಲಿ ಹೋಗಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದರು.

369154 1677835031 2

ಸದ್ಯ ವಿಕ್ಟೋರಿಯಾ ಆಸ್ಪತ್ರೆ (Victoria Hospital) ಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಗ್ಯಾಸ್ ಏಜೆನ್ಸಿಗೆ ಗ್ಯಾಸ್ ಲೀಕ್ ಸ್ಫೋಟದ ಬಗ್ಗೆ ಗಮನಕ್ಕೆ ತಂದ್ರೂ ಅವರ ಅವರವರ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಅಂತಾ ಕುಟುಂಬಸ್ಥರು ಹೇಳಿದ್ರು. ಒಟ್ಟಾರೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮಹಾ ದುರಂತವೊಂದು ನಡೆದುಹೋಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ