ಮಂಗಳೂರು : ನಂತೂರ್ ಸರ್ಕಲ್ ಬಳಿ ಭೀಕರ ಅಪಘಾತ ; ತಂದೆ ಮಗಳು ದುರ್ಮರಣ
Twitter
Facebook
LinkedIn
WhatsApp
ಮಂಗಳೂರು :ಅಪಘಾತ ವೃತ್ತ ಎಂದೇ ಹಣೆಪಟ್ಟಿ ಅಂಟಿಕೊಂಡಿರುವ ನಗರದ ನಂತೂರು ಸರ್ಕಲ್ ನಲ್ಲಿ ಇಂದು 12 ಗಂಟೆ ವೇಳೆಗೆ ಭೀಕರ ಅಪಘಾತ ನಡೆದಿದ್ದು ಸ್ಥಳದಲ್ಲೇ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಇಬ್ಬರು ಸಿಗ್ನಲ್ ಕಾಯುತ್ತಿದ್ದ ವೇಳೆ ಏಕಾಏಕಿ ಬಂದ ಲಾರಿ ದ್ವಿಚಕ್ರ ವಾಹನದ ಮೇಲೆ ಹರಿದಿದ್ದು, ದ್ವಿಚಕ್ರದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ತಂದೆ – ಮಗಳು ಎನ್ನಲಾಗಿದ್ದು ಮೃತರ ವಾಹನದಲ್ಲಿ ದೊರಕಿದ ಮಾಹಿತಿಯಂತೆ ಬಲ್ಮಠದ ಸ್ಯಾಮುವೆಲ್ ಜೇಸುದಾಸ್ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಲಾರಿ ಚಾಲಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದು , ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ನಂತೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.