ಗುರುವಾರ, ಮಾರ್ಚ್ 28, 2024
ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ-ಓವೈಸಿ ವಿರುದ್ದ ಸಾನಿಯಾ ಮಿರ್ಜಾಗೆ ಟಿಕೆಟ್? ಏನಿದು ಕಾಂಗ್ರೆಸ್ ಪ್ಲ್ಯಾನ್.!-ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ..!-ನಳೀನ್ ಕುಮಾರ್ ಕಟೀಲ್ ಗೆ ಟಿಕೆಟ್ ಕೈ ತಪ್ಪಿದರೂ ಮಹತ್ವದ ಹುದ್ದೆ ಕೊಟ್ಟ ಹೈಕಮಾಂಡ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಿನ್ನ ಬೆಳ್ಳಿಯ ದರ ತೀವ್ರ ಏರಿಕೆಯತ್ತ - ತಿಳಿದುಕೊಳ್ಳಿ ಇಂದಿನ ದರಗಳು

Twitter
Facebook
LinkedIn
WhatsApp
Making charges on gold jewellery

ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಬಹುತೇಕ ಮಹಿಳೆಯರು ಬಂಗಾರದ ಪ್ರಿಯರು. ಈ ಹಿನ್ನೆಲೆ, ಚಿನ್ನ , ಬೆಳ್ಳಿ ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಮೂಡುವುದಂತೂ ಗ್ಯಾರಂಟಿ. ಆದರೆ, ಕೇಂದ್ರ ಬಜೆಟ್ 2023 ರಲ್ಲಿ ಚಿನ್ನ, ಬೆಳ್ಳಿಯ ಅಬಕಾರಿ ಸುಂಕ ಹೆಚ್ಚಳ ಮಾಡಿದ ಬಳಿಕ ಆಭರಣ ಪ್ರಿಯರಿಗೆ ಮತ್ತಷ್ಟು ಶಾಕ್‌ ಕಾದಿದೆ. ಆದರೂ, ಶುಭ ಸಮಾರಂಭಗಳು ದೇಶದಲ್ಲಿ ಹೆಚ್ಚು ನಡೆಯುವುದರಿಂದಲೂ ಆಭರಣ ವಹಿವಾಟು ನಡೆಯುತ್ತಲೇ ಇರುತ್ತದೆ

ಇಂದು ದೇಶದಲ್ಲಿ (India) ಬಂಗಾರದ ದರ ತೀವ್ರ ಏರಿಕೆಯಾಗಿದೆ. ಹಾಗೆ, ದೇಶಾದ್ಯಂತ ಬೆಳ್ಳಿ ಬೆಲೆಯಲ್ಲಿ ಸಹ ಭಾರಿ ಏರಿಕೆಯಾಗಿದೆ. ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ ನೋಡಿ..

ಒಂದು ಗ್ರಾಂ ಚಿನ್ನ (1GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,535
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,037

ಎಂಟು ಗ್ರಾಂ ಚಿನ್ನ (8GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 44,280
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 48,296

ಹತ್ತು ಗ್ರಾಂ ಚಿನ್ನ (10GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 55,300
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 60,370

ನೂರು ಗ್ರಾಂ ಚಿನ್ನ (100GM)
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,53,500
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 6,03,700

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.      55,350 ಆಗಿದ್ದು, ನಿನ್ನೆಗಿಂತ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 55,600, ರೂ. 55,300 ಹಾಗೂ ರೂ. 55,300 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶನಿವಾರ 55,450 ರೂ. ಆಗಿದ್ದು, ಬೆಲೆಯಲ್ಲಿ ಹೆಚ್ಚಾಗಿದೆ.

ಇಂದಿನ ಬೆಳ್ಳಿ ದರ
ಇನ್ನು, ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಬೆಳ್ಳಿ ದರದಲ್ಲಿ ಸಹ ಭಾರಿ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ – ಇಳಿಕೆಯಾದಂತೆಯೂ ಚಿನ್ನ – ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. 

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್
ದೇಶಾದ್ಯಂತ ಇಂದು ಬಂಗಾರದ ದರದಲ್ಲಿ ಏರಿಕೆಯಾಗಿದ್ದು, ಅದೇ ರೀತಿ ಬೆಳ್ಳಿ ದರದಲ್ಲಿ ಸಹ ತೀವ್ರ ಹೆಚ್ಚಾಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 744, ರೂ. 7,440 ಹಾಗೂ ರೂ. 74,400 ಗಳಾಗಿವೆ. ಇನ್ನು, ದೇಶದ ಇತರೆ ಪ್ರಮುಖ ನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,400 ಆಗಿದ್ದು, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ರೂ. 72,100 ಹಾಗೂ ಕೋಲ್ಕತ್ತದಲ್ಲಿ ಸಹ 1 ಕೆಜಿ ಬೆಳ್ಳಿ ದರ ರೂ. 72,100 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಕೆಜಿ ಬೆಳ್ಳಿ ದರ 72,100 ರೂ. ಆಗಿದ್ದು, ದೇಶಾದ್ಯಂತ ಬೆಳ್ಳಿ ದರದಲ್ಲಿ ಹೆಚ್ಚಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ