ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭೀಕರ ಅಪಘಾತ: ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

Twitter
Facebook
LinkedIn
WhatsApp
mandya accident death

ಮಂಡ್ಯ: ಬೆಂಗಳೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಚಲಿಸುತ್ತಿದ್ದ ಡಸ್ಟ್ ತುಂಬಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ(Nagamangala) ತಾಲೂಕಿನ ತಿರುಮಲಾಪುರ ಬಳಿ ನಡೆದಿದೆ. ಹೇಮಂತ್, ನವೀನ್, ಶರತ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವು. ಮೃತದೇಹಗಳು ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಸ್ಥಳಕ್ಕೆ ಬೆಳ್ಳೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತ: ಬೈಕ್‌ ಹಿಂಬದಿ ಸವಾರ ಸಾವು

ಕಲಾದಗಿ: ಬೆಳಗಾವಿ ರಾಯಚೂರು ರಾಜ್ಯ ಹೆದ್ದಾರಿ ರಸ್ತೆ ಮುರುನಾಳ ಆರ್‌ಸಿ ಬಳಿ ರಸ್ತೆಯಲ್ಲಿ ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ ಹೊಡೆದು ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಮುಧೋಳ ತಾಲೂಕಿನ ಚತ್ರಭಾನುಕೋಟಿಯ ಮುಂಜುನಾಥ ಕಾಳವ್ವ ಮಾದರ (26) ಮೃತ ವ್ಯಕ್ತಿ. ಚತ್ರಭಾನುಕೋಟೆಯಿಂದ ಬಾಗಲಕೋಟೆ ಕಡೆಗೆ ತೆರಳುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ ಬೈಕ್‌ಗೆ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಗಂಭಿರ ಗಾಯಗೊಂಡು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಕಲಾದಗಿ ಪೊಲೀಸ್‌ ಠಾಣೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಕಾಡುಕೋಣ ಮಾಂಸ ಸಾಗಾಟದ ಕಾರು ಮರಕ್ಕೆ ಡಿಕ್ಕಿ: ಆರೋಪಿಗಳು ಪರಾರಿ!

ನಾಪೋಕ್ಲು (ಜೂ.4) : ಸಮೀಪದ ಕಕ್ಕಬ್ಬೆ ಕುಂಜೀಲ ಗ್ರಾಮದಿಂದ ಶುಕ್ರವಾರ ರಾತ್ರಿ ಅಕ್ರಮವಾಗಿ ಕಾಡುಕೋಣ ಮಾಂಸ ಸಾಗಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಆರೋಪಿಗಳು ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಾಡುಕೋಣ ಮಾಂಸ(boar meat)ವನ್ನು ಕೇರಳ ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ವೇಗನಾರ್‌ ಕಾರಿನಲ್ಲಿ ಸಾಗಾಟ ಮಾಡಲು ಆರೋಪಿಗಳು ಯತ್ನಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಆರೋಪಿಗಳನ್ನು ಬೆನ್ನಟ್ಟಿಕೊಂಡು ಬಂದ ಇಲ್ಲಿನ ಪೊಲೀಸರು, ಮೇಕೇರಿಯ ಸುಭಾಸ್‌ ನಗರದ ಬಳಿ ತಲುಪಿದಾಗ ಚಾಲಕನ ಅತೀ ವೇಗದಿಂದ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿರುವ ಕಾರನ್ನು ಪತ್ತೆ ಹಚ್ಚಿದ್ದಾರೆ. ನಾಪೋಕ್ಲು ಠಾಣಾ ಪೊಲೀಸರು ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ವಾಹನ ಸಮೇತ ಚೀಲಗಳಲ್ಲಿ ತುಂಬಿದ್ದ 50 ಕೆಜಿ ಕಾಡುಕೋಣ ಮಾಂಸವನ್ನು ವಶ ಪಡಿಸಿಕೊಂಡಿದ್ದು ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕ ರಾಮರಾಜನ್‌, ಹೆಚ್ಚುವರಿ ಪೊಲೀಸ್‌ ಉಪನಿರೀಕ್ಷಕರಾದ ಸುಂದರರಾಜ್‌ ಅವರ ನಿರ್ದೇಶನದಂತೆ ಡಿವೈಎಸ್ಪಿ ಜಗದೀಶ್‌, ವೃತ್ತ ನಿರೀಕ್ಷಕ ಶೇಖರ್‌ ಅವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾನಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದು ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಯಿತು.  ಪೊಲೀಸರು ರವಾನಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ