ಭಾರತಕ್ಕೆ ಮತ್ತೆ 12 ಚೀತಾಗಳ ಆಗಮನ

ಭೋಪಾಲ್: ನಮೀಬಿಯಾದಿಂದ (Namibia) 8 ಚೀತಾಗಳು (Cheetahs) ಬಂದಿಳಿದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ.
ವಾಯು ಸೇನೆಯ C-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾದ 12 ಚೀತಾಗಳು ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ ತಲುಪಿವೆ. ಕಸ್ಟಮ್ಸ್ ಹಾಗೂ ಇತರ ಅನುಮತಿಗಳ ನಂತರ ಅವುಗಳನ್ನು ಎಂ-17 ಚಾಪರ್‌ಗಳಲ್ಲಿ ಸುಮಾರು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ಸಾಗಿಸಲಾಗುತ್ತದೆ.
The 12 cheetahs arriving from South Africa, under the visionary leadership of PM Shri @narendramodi ji to restore our ecological balance, have begun their journey to India.
— Bhupender Yadav (@byadavbjp) February 17, 2023
Indian Air Force's C-17 Globemaster aircraft will get them home tomorrow.
Get ready to welcome them. pic.twitter.com/MRlDejQQlo
ಒಟ್ಟು 7 ಗಂಡು ಮತ್ತು 5 ಹೆಣ್ಣು ಚೀತಾಗಳು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ ಆವರಣಗಳಿಗೆ ಬಿಡುಗಡೆ ಮಾಡಲಿದ್ದಾರೆ.

#WATCH | Indian Air Force’s (IAF) C-17 Globemaster aircraft carrying 12 cheetahs from South Africa lands in Madhya Pradesh’s Gwalior. pic.twitter.com/Ln19vyyLP5
— ANI (@ANI) February 18, 2023
ವನ್ಯಜೀವಿ ಕಾನೂನಿನ ಪ್ರಕಾರ 30 ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಅದಕ್ಕಾಗಿ ಚೀತಾಗಳಿಗೆ ಮಧ್ಯಪ್ರದೇಶದಲ್ಲಿ 10 ಕ್ವಾರಂಟೈನ್ ಆವರಣಗಳನ್ನ ಸಿದ್ಧಪಡಿಸಲಾಗಿದೆ.
ಕಳೆದ ವರ್ಷವೂ ಸಹ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ವಾತಾವರಣಕ್ಕೆ ಹೊಂದಿಕೊAಡ ನಂತರ ಅವುಗಳನ್ನು ಮುಕ್ತವಾತಾವರಣಕ್ಕೆ ಬಿಡಲಾಗಿತ್ತು. ನಮೀಬಿಯಾದಿಂದ ಬಂದ ಚೀತಾಗಳು ಇದೀಗ ಬೇಟೆಯಾಡಲು ಆರಂಭಿಸಿದ್ದು ಶೀಘ್ರದಲ್ಲೇ ಚೀತಾ ಪ್ರವಾಸೋದ್ಯಮ ಆರಂಭಿಸುವ ಮುನ್ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.
ಭಾರತದಲ್ಲಿ 1947ರಲ್ಲಿ ಕೊನೆಯ ಚೀತಾ ಮೃತಪಟ್ಟಿತ್ತು. ಆನಂತರ 1952ರಲ್ಲಿ ಅಳಿದುಹೋದ ಸಂತತಿ ಎಂದು ಘೋಷಿಸಲಾಯಿತು. 2020ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮಗಳು ಚುರುಕುಗೊಂಡವು.