ಬೆಳ್ತಂಗಡಿ: ಬೈಕ್‌ಗಳ ನಡುವೆ ಅಪಘಾತ - ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವ ಗಂಭೀರ
Twitter
Facebook
LinkedIn
WhatsApp
ಬೆಳ್ತಂಗಡಿ, ಮಾ 30 : ಬೆಳ್ತಂಗಡಿಯ ವಣಾಲು ಮಸೀದಿ ಬಳಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಇನ್ನೊಂದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಳದಂಗಡಿಯ ಕುರ್ದಲಬೆಟ್ಟು ನಿವಾಸಿ ಹೆನ್ಡ್ರಿ ಡಿಸೋಜಾ(62) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೊಂದು ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಂಬಾರು ನಿವಾಸಿ ಕರುಣಾಕರ ಹೆಗ್ಡೆ (60) ಗಂಭೀರ ಗಾಯಗೊಂಡಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇನ್ನು ಹೆನ್ಡ್ರಿ ಡಿಸೋಜಾ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದ್ದು, ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.