ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಟ್‌ನಲ್ಲಿ ಗೆಲ್ಲಬೇಕೆಂದು ಬೇಕಾಬಿಟ್ಟಿ ಐರನ್‌ ಟ್ಯಾಬ್ಲೆಟ್‌ ತಿಂದ ಬಾಲಕಿ ಸಾವು

Twitter
Facebook
LinkedIn
WhatsApp
istockphoto 1046020190 612x612 1

ಕೊಯಮತ್ತೂರು: ಬೆಟ್ ಕಟ್ಟೋದು ಅಂದ್ರೆ ಜನರಿಗೆ ಅದೇನೋ ಕ್ರೇಜ್‌. ಬೆಟ್‌ ಕಟ್ಟೋದು, ಅದರಲ್ಲಿ ಗೆಲ್ಲೋದು ಅಂದ್ರೆ ಮಜಾ. ಹೀಗಾಗಿಯೇ ಸುಮ್‌ ಸುಮ್ನೆ ಬೆಟ್ ಕಟ್ಟೋದು, ಪನಿಶ್‌ಮೆಂಟ್ ಕೊಡೋದು ಎಲ್ಲಾ ಮಾಡ್ತಾನೆ ಇರ್ತಾರೆ. ಅದರಲ್ಲೂ ಶಾಲಾ, ಕಾಲೇಜ್‌ನಲ್ಲಿ ಓದೋ ಮಕ್ಕಳಿಗೆ ಅದೇನ್ ಕ್ರೇಜು ಗೊತ್ತಿಲ್ಲ. ಮಾತೆತ್ತಿದ್ರೆ ಸಾಕು ಬೆಟ್ಸಾ, ಚಾಲೆಂಜಾ ಅಂದ್ಬಿಡ್ತಾರೆ. ಗಿಫ್ಟ್‌, ಪನಿಶ್‌ಮೆಂಟ್ ಫಿಕ್ಸ್ ಮಾಡಿ ಆಟಾನೂ ಆಡ್ತಾರೆ. ಹಾಗೆ ಮಾಡೋಕೆ ಇಲ್ಲೊಂದೆಡೆ ಬಾಲಕಿ ಸಾವನ್ನಪ್ಪಿದ್ದಾಳೆ. ಬೆಟ್ ಗೆಲ್ಲೋಕೆ ಹೋಗಿ ಬಾಳೇ ಬರಡಾಗಿದೆ. ಕೊಯಮತ್ತೂರಿನಲ್ಲಿ ಬೆಟ್‌ನಲ್ಲಿ ಗೆಲ್ಲಬೇಕೆಂದು ಬೇಕಾಬಿಟ್ಟಿ ಕಬ್ಬಿಣದ ಮಾತ್ರೆ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ. 

ಊಟಿ ಶಾಲೆಯ ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬರಾದ 13 ವರ್ಷದ ಬಾಲಕಿ (Girl) ಅತಿಯಾದ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದಾಳೆ. ಆಕೆಯನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಯಕೃತ್ತು ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಗಿ ವೈದ್ಯರ ಮಾಹಿತಿ
ಸಪ್ಲಿಮೆಂಟ್‌ನ ಅತಿಯಾದ ಸೇವನೆಯಿಂದ ಉಂಟಾದ ಲಿವರ್ ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಮತ್ತೊಬ್ಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಊಟಿ ಪುರಸಭೆಯಿಂದ ನಡೆಸಲ್ಪಡುವ ಉರ್ದು ಮಾಧ್ಯಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಬೆಟ್‌ನಲ್ಲಿ ಹೆಚ್ಚು ಕಬ್ಬಿಣದ ಮಾತ್ರೆಗಳನ್ನು (Iron tablets) ಸೇವಿಸಿ ಶಾಲೆಯಲ್ಲಿ ಪ್ರಜ್ಞಾಹೀನರಾಗಿದ್ದರು. ರಾತ್ರಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಸಿಎಂಸಿಎಚ್) ಕರೆತರುವಾಗ ವಿದ್ಯಾರ್ಥಿಗಳ ಸ್ಥಿತಿ ಸಹಜವಾಗಿತ್ತು. ಆದರೆ ಹುಡುಗಿಯೊಬ್ಬಳಿಗೆ ತೀವ್ರ ಯಕೃತ್ತು ಹಾನಿಯಾಗಿದ್ದು, ತಕ್ಷಣದ ಯಕೃತ್ತಿನ ಕಸಿ ಮಾಡಬೇಕಾಗಿರುವುದರಿಂದ ಚೆನ್ನೈಗೆ ಕಳುಹಿಸಿ ಕೊಡಲಾಯಿತು. 

ಚೆನ್ನೈಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಸೇಲಂ ಬಳಿ ಬಂದಾಗ ಆಕೆಯ ಸ್ಥಿತಿ ಹದಗೆಟ್ಟಿದೆ ಎಂದು ನಮಗೆ ತಿಳಿಸಲಾಯಿತು. ಆಕೆಯನ್ನು ಸೇಲಂ ಜಿಎಚ್‌ಗೆ ಕರೆದೊಯ್ಯಲಾಯಿತು ಮತ್ತು ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದಾಳೆ (Death) ಎಂದು ಘೋಷಿಸಲಾಯಿತು ಎಂದು ಸಿಎಂಸಿಎಚ್ ಡೀನ್ ಡಾ ಎ ನಿರ್ಮಲಾ ಹೇಳಿದ್ದಾರೆ. ಇಬ್ಬರು ಹುಡುಗಿಯರ ಸ್ಥಿತಿ ಸ್ಥಿರವಾಗಿದೆ, ಆದರೆ ಇನ್ನೂ ಒಬ್ಬ ಹುಡುಗಿಗೆ ಯಕೃತ್ತು ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ ಆರೋಗ್ಯ ಸೇವೆಗಳ ಉಪ ನಿರ್ದೇಶಕ ಪಿ ಬಾಲುಸಾಮಿ ಮಾತನಾಡಿ, ಸಂತ್ರಸ್ತೆ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಬ್ಬಿಣದ ಮಾತ್ರೆ ಯಾವಾಗ ತಿನ್ನಬೇಕು?
ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ರಕ್ತಹೀನತೆಯ ಸಮಸ್ಯೆ ಎದುರಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಅನೀಮಿಯಾ ಸಮಸ್ಯೆ ಎಂದೂ ಕರೆಯಲಾಗುತ್ತದೆ. ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದರೆ, ಅನಾರೋಗ್ಯ ಸಮಸ್ಯೆ ಕಾಡಲು ಶುರುವಾಗಬಹುದು. ಹೀಗಾಗಿ ಇಂಥಾ ಸಮಸ್ಯೆ ಕಾಡಬಾರದು ಅಂದ್ರೆ ಕೆಲವೊಂದು ಆರೋಗ್ಯಕಾರಿ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಅಥವಾ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡಿದೆ ಕಬ್ಬಿಣದ ಮಾತ್ರೆಗಳನ್ನು ನುಂಗುವಂತೆ ಸಹ ವೈದ್ಯರು ಸಲಹೆ ನೀಡುತ್ತಾರೆ.

ಅದಲ್ಲದೆ ನಿರ್ಧಿಷ್ಟ ಕಾರಣವಿಲ್ಲದೆ ಕಬ್ಬಿಣದ ಮಾತ್ರೆ ಮಾತ್ರವಲ್ಲ ಇತರ ಯಾವುದೇ ಸಪ್ಲಿಮೆಂಟ್‌ನ್ನು ತೆಗೆದುಕೊಳ್ಳಬಾರದು. ಇಂಥಾ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ತಪ್ಪದೇ ವೈದ್ಯರ ಜೊತೆ ಸಮಾಲೋಚನೆ ನಡೆಸಬೇಕು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ