ಶುಕ್ರವಾರ, ಮೇ 3, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಡತನದಿಂದ ಕ್ರಿಕೆಟ್ ಗೆ ಪಾದರ್ಪಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ ಕ್ರಿಕೆಟರ್ ರಿಂಕು ಸಿಂಗ್

Twitter
Facebook
LinkedIn
WhatsApp
WhatsApp Image 2023 04 10 at 15.44.25

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL) ಅದೆಷ್ಟೊ ಯುವ ಆಟಗಾರರಿಗೆ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ಮಿಂಚಿನ ಸಂಚಲನ ಮೂಡಿಸಿದ ಆಟಗಾರರು ಭಾರತ ಕ್ರಿಕೆಟ್ ತಂಡಕ್ಕೆ ಕಾಲಿಟ್ಟ ಅನೇಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇಂದು ವಿಶ್ವದ ಶ್ರೇಷ್ಠ ಬೌಲರ್ ಆಗಿ ಗುರುತಿಸಿಕೊಂಡಿರುವ ಜಸ್​​ಪ್ರೀತ್ ಬುಮ್ರಾ (Jasprit Bumrah) ಕೂಡ ಬೆಳಕಿಗೆ ಬಂದಿದ್ದು ಇದೇ ಐಪಿಎಲ್​ನಿಂದ. ಅಲ್ಲದೆ ಯುಜ್ವೇಂದ್ರ ಚಹಲ್, ಉಮ್ರಾನ್ ಮಲಿಕ್ ಮಾತ್ರವಲ್ಲದೆ ದಿನೇಶ್ ಕಾರ್ತಿಕ್​ಗೆ ಎರಡನೇ ಇನ್ನಿಂಗ್ಸ್ ಶುರುವಾಗಿದ್ದು ಕೂಡ ಇದೇ ಐಪಿಎಲ್​ನಿಂದ. ಹೀಗೆ ಅನೇಕರು ಐಪಿಎಲ್ ಮೂಲಕ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿ ತಮ್ಮ ಸಾಮರ್ಥ್ಯ ತೋರ್ಪಡಿಸಿ ಸ್ಟಾರ್ ಆಗಿದ್ದಾರೆ. ಐಪಿಎಲ್ ಮೂಲಕ ಹಲವು ಆಟಗಾರರು ತಮ್ಮ ಜೀವನವನ್ನೇ ಬದಲಿಸಿಕೊಂಡಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ರಿಂಕು ಸಿಂಗ್  (Rinku Singh).

ಭಾನುವಾರ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಶುರುವಾಗುವವರೆಗೆ ರಿಂಕು ಸಿಂಗ್ ಎಂಬ ಹೆಸರು ಕ್ರಿಕೆಟ್ ಲೋಕದಲ್ಲಿ ಹೆಚ್ಚಿನವರಿಗೆ ಪರಿಚಿತವಿರಲಿಲ್ಲ. ಆದರೆ, ಈ ಪಂದ್ಯ ಅಂತ್ಯವಾದಾಗ ರಿಂಕು ಜಗತ್ ಪ್ರಸಿದ್ಧಿ ಪಡೆದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್​ಗೆ ಕೊನೆಯ ಓವರ್​ನಲ್ಲಿ 5 ಸತತ ಸಿಕ್ಸರ್ ಸಿಡಿಸಿ ಜಯ ತಂದಿಟ್ಟು ರಾತ್ರೋ ರಾತ್ರಿ ಹೀರೋ ಆಗಿರುವ ರಿಂಕು ಸಿಂಗ್ ಹಿನ್ನಲೆ ಕೇಳಿದರೆ ನೀವು ಅಚ್ಚರಿ ಪಡುತ್ತೀರಿ.

ಬಡ ಕುಟುಂಬದಿಂದ ಬೆಳಕಿಗೆ ಬಂದ ಪ್ರತಿಭೆ:

ರಿಂಕು ಅವರು ಉತ್ತರ ಪ್ರದೇಶದ ಆಲಿಗಢದಲ್ಲಿ 1997 ರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಕಷ್ಟವನ್ನು ಅನುಭವಿಸಿ ಬೆಳೆದವರು. ರಿಂಕು ತಂದೆ ಸಿಲಿಂಡರ್​ ವಿತರಕ. ಮನೆಮನೆಗೆ ತೆರಳಿ ಗ್ಯಾಸ್‌ ಸಿಲಿಂಡರ್‌​​​ಗಳನ್ನು ಹಂಚುತ್ತಿದ್ದರು. ರಿಂಕು ಅಣ್ಣ ಆಟೋ ಡ್ರೈವರ್. ತಂದೆಗೆ ರಿಂಕು ಎಂದರೆ ಅಚ್ಚುಮೆಚ್ಚಂತೆ. ಒಮ್ಮೆ ರಿಂಕು ಗಾಯಕ್ಕೆ ತುತ್ತಾಗಿದ್ದಾಗ ಇದರಿಂದ ನೊಂದಿದ್ದ ಅವರ ತಂದೆ 2-3 ದಿನಗಳ ಕಾಲ ಊಟ ಮಾಡಿರಲಿಲ್ಲವಂತೆ. ರಿಂಕುಗೆ ಚಿಕ್ಕಂದಿನಿಂದ ಕ್ರಿಕೆಟರ್ ಆಗಬೇಕೆಂಬ ಆಸೆ ಇತ್ತು. ಆದರೆ, ಹಣದ ಅವಶ್ಯಕತೆ ಇದ್ದಿದ್ದರಿಂದ ಅವರು ಸೇರಿದ್ದು ಕಸ ಗುಡಿಸುವ ಕೆಲಸಕ್ಕೆ. ಕೋಚಿಂಗ್ ಸೆಂಟರ್​​ ಒಂದರಲ್ಲಿ ಕಸ ಗುಡಿಸಿ ಒರೆಸುವ ಕೆಲಸಕ್ಕೆ ಸೇರಿಕೊಂಡು ಬಳಿಕ ಮೈದಾನಕ್ಕಿಳಿಯಲು ಮುಂದಾದರು. ಆರಂಭದಲ್ಲಿ ಇದಕ್ಕೆ ವಿರೋಧಿಸಿದ್ದ ರಿಂಕು ತಂದೆ ಏಟನ್ನೂ ಕೂಡ ತಿಂದಿದ್ದರಂತೆ.

2017 ರಲ್ಲಿ ಐಪಿಎಲ್​ಗೆ ಪದಾರ್ಪಣೆ:

ಅಂಡರ್​​​-16 ಹಾಗೂ ಕಾಲೇಜು ಮಟ್ಟದಲ್ಲಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಂಕು, ರಣಜಿ ಟ್ರೋಫಿಗೆ ಆಯ್ಕೆಯಾದರು. ದೇಶಿಯ ಕ್ರಿಕೆಟ್‌ನಲ್ಲಿ​ ಅದ್ಭುತ ಪ್ರದರ್ಶನ ನೀಡಿದ ಬೆನಲ್ಲೇ ಐಪಿಎಲ್‌ನಲ್ಲಿ ಆಡುವ ಅವಕಾಶಕ್ಕೆ ಕಾದರು. ಅದರಂತೆ ದೇಶಿ ಕ್ರಿಕೆಟ್‌ನಲ್ಲಿನ ಪ್ರತಿಭೆಯನ್ನು ಪರಿಗಣಿಸಿ ರಿಂಕು ಸಿಂಗ್‌ ಅವರನ್ನು ಮೊದಲಿಗೆ 2017 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ (ಈಗಿನ ಪಂಜಾಬ್‌ ಕಿಂಗ್ಸ್) 10 ಲಕ್ಷ ರೂ. ಗಳಿಗೆ ಖರೀದಿಸಿತ್ತು. ಬಳಿಕ 2018 ರಲ್ಲಿ 80 ಲಕ್ಷ ರೂ. ಗೆ ರಿಂಕು ಅವರನ್ನು ಕೆಕೆಆರ್​ ಪ್ರಪ್ರಥಮವಾಗಿ ಹರಾಜಿನಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೂ ರಿಂಕು ಸಿಂಗ್‌ ಕೋಲ್ಕತಾ ನೈಟ್‌ ರೈಡರ್ಸ್ ಪರ ಆಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ರಿಂಕು ಇಂದು ಕೆಕೆಆರ್​ನ ಕೀ ಬ್ಯಾಟರ್ ಆಗಿದ್ದಾರೆ.

ನಿಷೇಧಕ್ಕೆ ಒಳಗಾಗಿದ್ದ ರಿಂಕು:

2019 ರಲ್ಲಿ ರಿಂಕು ಸಿಂಗ್‌ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿಷೇಧ ಮಾಡಿದ್ದ ವಿಷಯ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಏಕೆಂದರೆ ಬಿಸಿಸಿಐ ಅನುಮತಿ ಇಲ್ಲದೆ ರಿಂಕು ವಿದೇಶಿ ಟಿ20 ಟೂರ್ನಿಯೊಂದರಲ್ಲಿ ಆಡಿದ್ದರು. ಬಿಸಿಸಿಐ ನಿಯಮದ ಪ್ರಕಾರ, ಭಾರತೀಯ ಆಟಗಾರರು ಭಾರತ ಬಿಟ್ಟು ಹೊರಗಡೆ ಯಾವುದೇ ಲೀಗ್‌ ಆಡಲು ಅನುಮತಿ ಇಲ್ಲ. ಇದರ ಹೊರತಾಗಿಯೂ ರಿಂಕು ಸಿಂಗ್ ಆಡಿದ್ದರಿಂದ ಬಿಸಿಸಿಐ ಮೂರು ತಿಂಗಳ ಕಾಲ ಬ್ಯಾನ್ ಮಾಡಿತ್ತು. ಇಲ್ಲಿಂದ ರಿಂಕು ಕ್ರಿಕೆಟ್​ನಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಪಣತೊಟ್ಟು ಕಠಿಣ ಪರಿಶ್ರಮ ಪಟ್ಟಿದ್ದರು. ಬಳಿಕ 2022ರ ಟೂರ್ನಿಯಲ್ಲಿ ರಿಂಕು ಗಮನಾರ್ಹ ಪ್ರದರ್ಶನ ತೋರಿದ್ದರು. ಇದೀಗ ಐಪಿಎಲ್ 2023 ರಲ್ಲೂ ಇವರ ಭರ್ಜರಿ ಪ್ರದರ್ಶನ ಮುಂದುವರೆಯುತ್ತಿದೆ.

ಟೀಮ್ ಇಂಡಿಯಾ ಪರ ಆಡುವ ಆಸೆ:

ಟೀಮ್ ಇಂಡಿಯಾ ಸೇರಿಕೊಳ್ಳುವ ಆಸೆಯಿಂದ ರಿಂಕು ಅವರು ತಮ್ಮ ಬ್ಯಾಟಿಂಗ್‌ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಕೆಆರ್​ ಅಕಾಡೆಮಿಯಲ್ಲಿ ಕೆಕೆಆರ್​ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಲಹೆ ಪಡೆದುಕೊಂಡಿದ್ದರು. ರಾಷ್ಟ್ರೀಯ ತಂಡದ ಪರ ಆಡುವುದಕ್ಕೂ ಮುನ್ನ ಮೊದಲ ಹೆಜ್ಜೆಯಾಗಿ ರಿಂಕು ಉತ್ತರ ಪ್ರದೇಶಕ್ಕಾಗಿ 2018-19 ರಣಜಿ ಟ್ರೋಫಿ ಆಡಿದರು. ರಣಜಿಯಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ (10 ಇನ್ನಿಂಗ್ಸ್‌ಗಳಲ್ಲಿ 953 ರನ್) ಆಟಗಾರ ಎನಿಸಿಕೊಂಡರು. ಇಲ್ಲಿಯವರೆಗೆ ರಿಂಕು ಅವರು 40 ಪ್ರಥಮ ದರ್ಜೆ, 50 ಲಿಸ್ಟ್-ಎ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಂಟು ಶತಕಗಳು ಮತ್ತು 41 ಅರ್ಧಶತಕಗಳೊಂದಿಗೆ 6,016 ರನ್ ಗಳಿಸಿದ್ದಾರೆ. ಇದೀಗ ಐಪಿಎಲ್​ನಲ್ಲೂ ಅಬ್ಬರಿಸುತ್ತಿರುವ ಇವರು ಬೇಗನೆ ಭಾರತ ತಂಡಕ್ಕೆ ಆಯ್ಕೆಯಾಗುತ್ತಾರ ಎಂಬುದು ನೋಡಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ