ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮದ ಪಿ.ತುಕಾರಾಮ್ ಪೂಜಾರಿ ಹಾಗೂ ಗಾಯತ್ರಿ ದೇಸಾಯಿಗೆ ಪಿಟಿಆರ್ ಕಲಾ ಪ್ರಶಸ್ತಿ ಪ್ರಧಾನ.

Twitter
Facebook
LinkedIn
WhatsApp
ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಭ್ರಮದ ಪಿ.ತುಕಾರಾಮ್ ಪೂಜಾರಿ ಹಾಗೂ ಗಾಯತ್ರಿ ದೇಸಾಯಿಗೆ ಪಿಟಿಆರ್ ಕಲಾ ಪ್ರಶಸ್ತಿ ಪ್ರಧಾನ .

ಚಿಕ್ಕಮಗಳೂರು:  ಚಿತ್ರ ಕಲಾವಿದರು ಹಾಗೂ ಜನಪದ ಕಲಾವಿದರಿಗೆ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಕೊಡ ಮಾಡುವ ಗೌರವ ಪಿಆರ್‌ಟಿ ಕಲಾ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಬಂಟ್ವಾಳದ ಪಿ.ತುಕಾರಾಮ್ ಪೂಜಾರಿ ಹಾಗೂ ಧಾರಾವಾಡದ ಗಾಯತ್ರಿ ದೇಸಾಯಿ ಅವರಿಗೆ ಪ್ರಧಾನ ಮಾಡಲಾಯಿತು.
ನಗರದ ಸ್ಕೌಟ್ ಭವನದಲ್ಲಿ ಗುರುವಾರ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ಕನ್ನಡ ಸಂಸ್ಕೃತಿ ಇಲಾಖೆ , ಶಾಂತಿ ನಿಕೇತನ ಚಿತ್ರಕಲಾ ಮಹಾ ವಿದ್ಯಾಲಯ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನ, ಸ್ಪರ್ಧೆ, ಸಂವಾದ ಪಿಆರ್‌ಟಿ ಕಲಾ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಚಿತ್ರಕಲಾ ಸ್ಪರ್ಧೆಯ ಪ್ರೌಢಶಾಲೆ ೯ ನೇ ತರಗತಿ ವಿಭಾಗದಲ್ಲಿ ತೊಗರಿಹಂಕಲ್‌ನ ಜಿ.ಆದರ್ಶ ಪ್ರಥಮ, ಕಡೂರಿನ ಬಿಂದು ದ್ವಿತೀಯ, ಮೂಡಿಗೆರೆ ಜುಬೇದ ತೃತೀಯ. ೧೦ ನೇ ತರಗತಿ ವಿಭಾಗದಲ್ಲಿ ಮಾಚಗೊಂಡನಹಳ್ಳಿಯ ಮಾನಸ ಪ್ರಥಮ, ಮೈಲಿಮನೆ ಹಿತಶ್ರಿ ದ್ವಿತೀಯ, ತರೀಕೆರೆ ಮಹಮದ್ ತೃತೀಯ. ಕಲಾ ಕಾಲೇಜು ವಿಭಾಗದಲ್ಲಿ ಬೆಂಗಳೂರಿನ ವಿವಿ ರಂಗಣ್ಣ ಪ್ರಥಮ, ಮೈಸೂರಿನ ದಿಲೀಪ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಚಿಕ್ಕಮಗಳೂರಿನ ಐಶ್ವರ್ಯ ಅವರಿಗೆ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಅತಿಥಿಗಳು ಪ್ರಧಾನ ಮಾಡಿದರು.
ಪಿಆರ್‌ಟಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಮಾತನಾಡಿ, ಪಿ.ಆರ್.ತಿಪ್ಪೇಸ್ವಾಮಿ ಎಂದರೆ ಅದೊಂದು ಸಂಚಲನಾ, ಆ ಹೆಸರು ಕೇಳಿದರೆ ವಿದ್ಯುತ್ ಪ್ರಹಾರ ಆದಹಾಗೆ. ಓರ್ವ ಚಿತ್ರಕಲಾವಿದ, ಜಾನಪದ ವಿದ್ವಾಂಸ, ಸಾಹಿತಿ, ಸಮಾಜ ಸೇವಕ ಹೀಗೆ ನಾಲ್ಕುವಿಭಾಗಗಳ ಸೇವಾಕಾರ್ಯ ನೋಡಿ ಅವರನ್ನು ಚತುರ್ಮಖ ಬ್ರಹ್ಮ ಎಂದೆ ಕರೆಯಲಾಗುತ್ತಿತ್ತು. ಒಂದೊಂದು ವಿಭಾಗದಲ್ಲೂ ಅವರ ಸಾಧನೆ ದೊಡ್ಡದು ಎಂದರು.

ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂಗಳಲ್ಲಿ ಅವರ ಚಿತ್ರಗಳು ರಾರಾಜಿಸುತ್ತಿದೆ. ಅವರ ಚಿತ್ರಗಳು ರಾಷ್ಟ್ರಕವಿ ಕುವೆಂಪು ಅವರ ಗೋಡೆಯಲ್ಲಿ ಅಲಂಕಾರಗೊಂಡು ಅವರೇ ಪ್ರೇರೇಪಿತರಾಗಿದ್ದರು. ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯವನ್ನು ನೋಡಿದರೆ ಅವರ ಜಾನಪದ ಕ್ಷೇತ್ರದ ಸಾಧನೆ ತಿಳಿಯುತ್ತದೆ. ಸಾಹಿತಿಯಾಗಿ ಅನೇಕ ವ್ಯಕ್ತಿಚಿತ್ರಗಳ ಪುಸ್ತಕ ಬರೆದಿದ್ದಾರೆ ಎಂದು ಹೇಳಿದರು.
ಮನೆಯೇ ವಿದ್ಯಾರ್ಥಿನಿಲಯ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗಿ ಅನೇಕ ವಿದ್ಯಾರ್ಥಿಗಳನ್ನು ವಿದ್ವಾಂಸರನ್ನಾಗಿ ಮಾಡಿದ ಕೀರ್ತಿ ಪಿಆರ್‌ಟಿಗೆ ಸಲ್ಲುತ್ತದೆ ಇಂತಹ ಅಪರೂಪದ ವ್ಯಕ್ತಿ ಹೆಸರಿನಲ್ಲಿ ಸಮಾನ ಮನಸ್ಕರು ಸೇರಿ ಟ್ರಸ್ಟ್ ಮಾಡಿ ಚಿತ್ರಕಲೆ, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಬೇಕೆಂದು ನಿರ್ಧರಿಸಿ ಕಳೆದ ೭ ವರ್ಷಗಳಿಂದ ಮೈಸೂರು, ಚಿತ್ರದುರ್ಗ, ತುಮಕೂರು, ಗುಲ್ಬರ್ಗ, ಬೆಳಗಾಂ, ಚಿಕ್ಕಮಗಳೂರಿನಲ್ಲಿ ಪಿಆರ್ ತಿಪ್ಪೇಸ್ವಾಮಿ ಕಲಾ ಸಂಭ್ರಮ ಮಾಡಲಾಗಿದೆ ಎಂದರು.
ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ದೇಶ ಕಟ್ಟುವಲ್ಲಿ ಯುವಕರ ಪಾತ್ರ ಅವರ ಕ್ರಿಯಾಶೀಲತೆ ಬಹಳ ಮುಖ್ಯ. ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಅವಲೋಕಿಸಿದರೆ ಎರಡು ವಿಧಾನದಲ್ಲಿ ನೀಡುತ್ತಿದ್ದೇವೆ. ಜ್ಞಾನ ಮತ್ತು ವಿಜ್ಞಾನ. ಕಲೆ ಸೇರಿದಂತೆ ಪಠ್ಯಕ್ರಮದಲ್ಲಿ ಮಕ್ಕಳಿಗೆ ಕಲಿಸುವ ವಿಜ್ಞಾನಕ್ಕೆ ಕೊಡುವ ಮಹತ್ವ ಮತ್ತು ತಮ್ಮನ್ನು ಆಮಟ್ಟಕ್ಕೆ ಏರಿಸಿದ ವ್ಯಕ್ತಿಗಳಿಗೆ ಕೊಡುಗೆಯಾಗಿ ಕೊಡುವ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇವಾ ಎಂಬ ಪ್ರಶ್ನೆ ಹಾಕಿಕೊಂಡರೆ ಶೂನ್ಯದ ಭಾವನೆ ಬರುತ್ತದೆ. ಯುವಜನತೆಗೆ ಜ್ಞಾನವನ್ನು ಕಲಿಸುವ ಆಸಕ್ತಿ ಬೆಳೆಸಿ ಶ್ರದ್ದೆ, ಸಂಸ್ಕಾರವನ್ನು ಕಲಿಸಬೇಕು, ಗುರು ಹಿರಿಯರಿಗೆ ಗೌರವ ಕೊಡುವ ವ್ಯವಸ್ಥೆ ಬಿತ್ತಬೇಕೆಂದಾಗ ಪಿಆರ್‌ಟಿ ಮತ್ತು ಅವರ ಸಾಲಿನಲ್ಲಿ ನಿಲ್ಲುವ ಎಲ್ಲಾ ಲಲಿತ ಕಲಾ ಕ್ಷೇತ್ರಗಳ ಕಲಾವಿದರ ಮಹತ್ವವನ್ನು ತಿಳಿ ಹೇಳುತ್ತದೆ ಎಂದರು.

ಸಂಸ್ಕೃತಿ ಚಿಂತಕ ಹಿರೇಮಗಳೂರು ಕಣ್ಣನ್ ಹಾಸ್ಯ ಚಟಾಕಿಯಿಂದಲೆ ಮಾತು ಆರಂಭಿಸಿ, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನೆ ತಿಳಿಯದಿರುವಂತ ವ್ಯವಸ್ಥೆಗೆ ನಾವು ಬಂದಿದ್ದೇವೆ. ಕಾನ್ವೆಂಟ್ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡುವ ರೂಪದಲ್ಲಿ ಇಂಗ್ಲೀಷ್ ಕಲಿಸಿ ಆದರೆ ಗೆಜ್ಜೆ ತೆಗೆದುಹಾಕು, ತಲೆಕೂದಲು ಕತ್ತರಿಸು, ಕೈಬಳೆ ತೆಗಿ, ಹಣೆಯದಳಿಸು ಎಂದು ನಮ್ಮ ಸಂಸ್ಕೃತಿಯನ್ನು ಏಕೆ ಅಳಿಸುತ್ತೀರಾ. ನಿಮಗೆ ಈ ಅಽಕಾರ ಕೊಟ್ಟವರ್‍ಯಾರು ಭಾಷೆ ಕಲಿಸಲು ಅಡ್ಡಿಯಿಲ್ಲ ಆದೆ ಭಾವನೆ ಏಕೆ ತೆಗೆದು ಹಾಕುತ್ತೀರಾ ಎಂದು ಹಲವಾರು ಬಾರಿ ಪ್ರಶ್ನಿಸಿದ್ದೇನೆ ಎಂದು ಭಾಷೆಯ ವೈವಿದ್ಯತೆ ಆಯಾಯ ಪ್ರಾದೇಶಿಕತೆಯ ಮೇಲಿರುತ್ತದೆ ಎಂದರು.
ಪ್ರತಿಷ್ಠಾನದ ಕೋಶಾಧ್ಯಕ್ಷ ಪ್ರೊ.ಎಂ.ಪರಮೇಶ್ವರಯ್ಯ, ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ, ಸಂಚಾಲಕ ರುದ್ರಣ್ಣ ಹರ್ತಿಕೋಟೆ, ನಿರ್ಧೇಶಕ ಚಿಕ್ಕಣ್ಣ, ರೇವಣ್ಣ, ಚಂದ್ರಶೇಖರ್, ಶಾಂತಿ ನಿಕೇತನ ಚಿತ್ರಕಲಾ ಮಹಾ ವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ, ಶಿಲ್ಪಾ ಆಚಾರ್ಯ ಇದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು