ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಡುಬಿದ್ರಿ: ಅವಳಿ ಗಜಗಾತ್ರದ ವೀರಗಲ್ಲು ಪತ್ತೆ

Twitter
Facebook
LinkedIn
WhatsApp
ACCIDENT Graphic 768x491 3

ಪಡುಬಿದ್ರೆ, ಮಾ 10 : ಪಡುಬಿದ್ರೆಯ ನಂದಿಕೂರು ವಿನಿಂದ ಮುಂದೆಸಾಗಿ ಕೆಲ್ಲಾರು ಪಲಿಮಾರುವಿನ ಅಸ್ತಪಡ್ವೆ ಎಂಬಲ್ಲಿ ಆಟದ ಮೈದಾನದ ಬಳಿ ಆಲದ ಮರದ ಕೆಳಗಡೆ ಎರಡು ಬೃಹತ್ ಗಾತ್ರದ ವೀರಗಲ್ಲು ಪತ್ತೆಯಾಗಿದೆ. ಒಂದು ವೀರಗಲ್ಲು ಸುಮಾರು ಏಳುಫೀಟು ಮತ್ತೊಂದು ಎಂಟು ಫೀಟು ಎತ್ತರವಿದ್ದು ಎರಡು ಫೀಟು ಆಗಲವಿದೆ. ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯ ಉಬ್ಬಿಕೊಂಡ ಚಿತ್ರಗಳು ಈ ವೀರಗಲ್ಲುವಿನಲ್ಲಿ ಕಾಣಸಿಗುತ್ತದೆ.

ತಲೆಬಾಗದಲ್ಲಿ ಸೂರ್ಯ ಚಂದ್ರ , ಕತ್ತಿ ಗುರಾಣಿ, ಸೂಡಿ ಹಾಕಿದಂತೆ ತಲೆಯ ಭಾಗ. ವೀರರು ಬಳಸುವಂತಹ ಮೈ ಹೊದಿಕೆಯ ಬಟ್ಟೆ ಹೊಂದಿರುತ್ತದೆ. ಬಲಕಾಲು ಮುಂದೆ ನಿಂತು ಗುರಾಣಿ ಕತ್ತಿ ಹಿಡಿದು ‌ ಯುದ್ಧಕ್ಕೆ ಆಹ್ವಾನಿಸಿದಂತಿದೆ. ಪುರುಷನ ಚಿತ್ರ ಇರುವ ಶಾಸನ ದಲ್ಲಿ ಬಾಲದಂತಿದೆ. ಈ ಭಾಗದ ಜನರು ಇದನ್ನು ಕೋಟಿಚೆನ್ನೇರು ಅನ್ನುತ್ತಾರೆ. ಅನತಿ ದೂರದಲ್ಲಿ
ದೈವರಾಜ ಕೊಡ್ದಬ್ಬುವಿನ ಸನ್ನಿಧಾನವಿದೆ. ಪ್ರಮುಖ ರಸ್ತೆಯಲ್ಲಿ ಕೋಟಿ ಚೆನ್ನಯರ ಗರಡಿಯೂ ಇದೆ. ಈ ಶಾಸನಗಳು ಸರಕಾರಿ ಜಾಗದಲ್ಲಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನು ಗೋಳಿಮರದ (ಆಲದಮರ) ಕೆಳಗಡೆ ನಿರ್ಜನ ಪ್ರದೇಶವಾದ್ದರಿಂದ ಯಾರು ಇದರ ಕಡೆಗೆಹೋಗುವುದಿಲ್ಲ ಈಗಾಗಲೇ ಬೇಲಿ ಹಾಕಿದ್ದು. ಸ್ವಚ್ಛತೆ ಕಾಣುವುದಿಲ್ಲ. ಉಡುಪಿ ನಿಟ್ಟೂರಿನ ನಿವಾಸಿ ರಾಜೇಶ್ ಅವರಮಾಹಿತಿ ಮೇರೆಗೆ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿಬನ್ನಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಈ ಸಂದರ್ಭದಲ್ಲಿ ಸ್ಥಳೀಯರಾದ ಕೇಶವ ಶೆಟ್ಟಿ ಭಾಸ್ಕರ, ಪ್ರಕಾಶ, ರಮೇಶ, ರಾಘವೇಂದ್ರ ಸತೀಶ್ ಮುಖಾರಿ ವಿಠಲ ಮೇಸ್ತ್ರಿ ಜೊತೆಗಿದ್ದು ಮಾಹಿತಿ ನೀಡಿ ಸಹಕರಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ