ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಠಾಣ್ ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಹಲ್ಲೆ- ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

Twitter
Facebook
LinkedIn
WhatsApp
releted photos 2

ಬೆಂಗಳೂರು: ಪಠಾಣ್ (Pathaan) ಚಿತ್ರ ನೋಡಲು ತೆರಳಿದ್ದ ಕುಟುಂಬದ ಮೇಲೆ ಜೋಡಿಯೊಂದು ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಘಟನೆ ಮಲ್ಲೇಶ್ವರಂ (Malleshwaram) ಮಂತ್ರಿಮಾಲ್‍ನ (Mantri Square Mall) ಐನಾಕ್ಸ್ (Inox) ಚಿತ್ರಮಂದಿರದಲ್ಲಿ ನಡೆದಿದೆ.

ನಾಗರಾಜ್ ಹಾಗೂ ಅವರ ಪತ್ನಿ ಪ್ರೇಮ, ಮಗಳು, ಅಳಿಯನ ಜೊತೆ ಪಠಾಣ್ ಚಿತ್ರ ನೋಡಲು ತೆರಳಿದ್ದರು. ಚಿತ್ರ ನೋಡುವಾಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಪದೇ ಪದೇ ಕಿರುಚಾಡುತ್ತಿದ್ದರು. ಎದುರು ಸೀಟಿನಲ್ಲಿದ್ದ ಕುಟುಂಬ ಕಿರುಚಾಡದಂತೆ ಮನವಿ ಮಾಡಿದೆ. ಈ ವೇಳೆ ನಾಗರಾಜ್ ಕುಟುಂಬ ಹಾಗೂ ಜೋಡಿಯ ನಡುವೆ ಕಿರಿಕ್ ನಡೆದು ನಂತರ ಸುಮ್ಮನಾಗಿದ್ದರು.

ಸಿನಿಮಾ ಮುಗಿಸಿ ಹೊರಗೆ ಬರುತ್ತಿದ್ದಂತೆ ಜೋಡಿ, ಕುಟುಂಬದೊಂದಿಗೆ ಗಲಾಟೆ ಶುರು ಮಾಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಾಗರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ ಸಹ ತನ್ನ ಹೈ ಹೀಲ್ಡ್ ಚಪ್ಪಲಿಯಿಂದ ಪ್ರೇಮ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.

ಮಗಳು ಅಳಿಯನ ಮೇಲೆ ಸಹ ಜೋಡಿ ಹಲ್ಲೆ ನಡೆಸಿದೆ. ನಾಗರಾಜ್ ಅವರ ಮಗಳ ಖಾಸಗಿ ಅಂಗ ಮುಟ್ಟಿ ಯುವಕ ಅಸಭ್ಯವಾಗಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನಾಗರಾಜ್ ಕುಟುಂಬ ದೂರು ದಾಖಲಿಸಿದೆ. 506, 504, 354 ಸೆಕ್ಷನ್‍ನಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ