ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್’; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ

Twitter
Facebook
LinkedIn
WhatsApp
1 20

ವೈಷ್ಣವಿ ಗೌಡ (Vaishnavi Gowda) ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ನಂತರ ಬಿಗ್ ಬಾಸ್​ಗೆ ಬಂದು ಎಲ್ಲರ ಗಮನ ಸೆಳೆದರು. ಈಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಪ್ರೋಮೋನ ವಾಹಿನಿ ಹಂಚಿಕೊಂಡಿದೆ. ಇದು ಸಾಕಷ್ಟು ಸೌಂಡ್ ಮಾಡುತ್ತಿದೆ. ವೈಷ್ಣವಿ ಗೌಡ ಅವರು ಸೈಲೆಂಟ್ ಅಮ್ಮ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸೀತಾ ನೋಡೋಕೆ ಅಷ್ಟೇ ಪಾಪ ಅಂತೆ!

May be a closeup of 1 person

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸದ್ಯ ಹೊಸ ಪ್ರೋಮೋಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ.

ಕಥಾ ನಾಯಕಿ ಸೀತಾ (ವೈಷ್ಣವಿ) ಹಾಗೂ ಅವಳ ಮಗಳು (ರೀತು ಸಿಂಗ್) ತಮ್ಮ ಪಾಡಿಗೆ ತಾವಿರುತ್ತಾರೆ. ಆಗ ಕಥಾ ನಾಯಕ ರಾಮನ (ಗಗನ್) ಎಂಟ್ರಿ ಆಗುತ್ತದೆ. ಸೀತಾಳ ಮದುವೆ ಆಗಬೇಕು ಎಂದರೆ ಅವಳ ಮಗಳ ಒಪ್ಪಿಗೆ ಪಡೆಯಬೇಕು. ಸದ್ಯಕ್ಕೆ ಪ್ರೋಮೋ ನೋಡಿದವರು ಧಾರಾವಾಹಿ ಕಥೆಯನ್ನು ಈ ರೀತಿ ಊಹಿಸುತ್ತಿದ್ದಾರೆ. ಅಸಲಿ ಕಥೆ ಬೇರೆಯದೇ ಇರಬಹುದೇ ಎಂಬುದನ್ನು ಕಾದು ನೋಡಬೇಕಿದೆ.

Seetha Raama Kannada Serial

‘ಇವಳು ನೋಡೋಕೆ ಪಾಪದವಳ ತರ ಕಾಣಿಸ್ತಾಳೆ. ಆದರೆ ತುಂಬಾ ಡೇಂಜರ್. ಕೋಪ ಬಂದ್ರೆ ಟೀಚರ್​ಗಿಂತ ಜೋರಾಗಿ ಹೊಡಿತಾಳೆ. ಎಷ್ಟು ಉರಿಯತ್ತೆ ಗೊತ್ತಾ? ನೋಡು ಇವಳು ನನ್ನಮ್ಮ. ನಂಗೇ ಇಷ್ಟು ಹೊಡೀತಾಳೆ. ಮದುವೆ ಆದ್ಮೇಲೆ ನಿಂಗೆ ಎಷ್ಟು ಕಾಟ ಕೊಡಬಹುದು. ಯೋಚನೆ ಮಾಡು’ ಎಂದು ಅಮ್ಮನ ಬಗ್ಗೆ ಮಗಳು ಹೇಳುವ ರೀತಿಯಲ್ಲಿ ಪ್ರೋಮೋ ಇದೆ.

May be an image of 1 person, standing and outdoors

‘ಸೀತಾ ರಾಮ’ ಮೊದಲ ಪ್ರೋಮೋ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿದೆ. ಅಂದಿನಿಂದ ಇಂದಿನವರೆಗೆ ಧಾರಾವಾಹಿ ಆರಂಭ ದಿನಾಂಕ ರೀವಿಲ್ ಆಗಿಲ್ಲ. ಈಗ ರಿಲೀಸ್ ಆದ ಹೊಸ ಪ್ರೋಮೋದಲ್ಲೂ ಧಾರಾವಾಹಿಯ ಪ್ರಸಾರದ ದಿನಾಂಕ ಇಲ್ಲ. ದಯವಿಟ್ಟು ಧಾರಾವಾಹಿ ರಿಲೀಸ್ ದಿನಾಂಕ ತಿಳಿಸಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಈ ಮುದ್ದಾದ ಸ್ಟೋರಿನ ನೋಡೋಕೆ ವೀಕ್ಷಕರು ಕಾದಿದ್ದಾರೆ.

May be a closeup of 4 people, people standing and outdoors

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ