
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಹಿಳೆಯನ್ನು ಕತೀಜಾ ಕೂಬ್ರ (29) ಎಂದು ಗುರುತಿಸಲಾಗಿದೆ. ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕತೀಜಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.
ಪತಿ ಮಹೆಬೂಬ್ ಪರೀಷ್ ಪತ್ನಿಯನ್ನ ಹೊಡೆದು ನೇಣು ಹಾಕಿರೋ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಕತೀಜಾ ಗಂಡ, ಮಾವ ಮತ್ತು ನಾದಿನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪನ್ನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಸದುಗುಂಟೆಪಾಳ್ಯ ಪೊಲೀಸರು (Sadduguntepalya Police) ತನಿಖೆ ನಡೆಸುತ್ತಿದ್ದಾರೆ.
ಮೃತ ಮಹಿಳೆ ತಂದೆ ಜಾವೀದ್ ವುಲ್ಲಾ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿ, ಮದುವೆಯಾದಾಗಿನಿಂದ ಮಗಳ ಜೊತೆ ಯಾವಾಗ್ಲೂ ಜಗಳ ಅಗುತಿತ್ತು. ನನ್ನ ಅಳಿಯನಿಗೆ ಇನ್ನೋರ್ವ ಮಹಿಳೆಯ ಜೊತೆ ಸಂಬಂಧವಿತ್ತು. ಹಾಗಾಗಿ ನನ್ನ ಮಗಳನ್ನ ಅಳಿಯನೇ ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಗಂಡನ ಮನೆಯವರೇ ಕೊಲೆ ಮಾಡಿ ನೇಣು ಹಾಕಿದ್ದಾರೆ. ಮದುವೆಯಾದಾಗಿನಿಂದ ಪ್ರತಿನಿತ್ಯ ಜಗಳ ಅಗುತಿತ್ತು. ಹಾಗಾಗಿ ಅವನೇ ಕೊಂದಿದ್ದಾನೆ. ನನ್ನ ಮಗಳಿಗೆ ಪ್ರತಿನಿತ್ಯ ಹೊಡೆಯೋದು ಮಾಡ್ತಿದ್ದ. ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist