ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ಸಾವು
Twitter
Facebook
LinkedIn
WhatsApp
ಕಾರವಾರ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ (Student) ಸಾವನ್ನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ.
ಧನ್ಯಾ ಗೌಡ ಕಂಚಾಳ ಮೃತಪಟ್ಟ ವಿದ್ಯಾರ್ಥಿನಿ. 8ನೇ ತರಗತಿ ಓದುತ್ತಿರುವ ಈಕೆ ಸಿದ್ದಾಪುರದ ಹರ್ಲಗುಂಡಿ ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಧನ್ಯಾ ಹರ್ಲಗುಂಡಿ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದಳು. ಹೊಳೆ ಆಳವಿದ್ದರಿಂದ ಈಜು ಬಾರದೇ ಮುಳುಗಿದ್ದಾಳೆ.
ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.