ನಾನು ಮೇಕಪ್ ಹಾಕೋದು ಯಾರಿಗೂ ಗೊತ್ತಿಲ್ಲ, ಎಡಿಟ್ ಮಾಡುವಾಗ ಪಿಂಪಲ್ ಕಾಣಿಸುತ್ತದೆ: ಸಾಯಿ ಪಲ್ಲವಿ
ಕಾಲಿವುಡ್ ಬ್ಯೂಟಿ ಸಾಯಿ ಪಲ್ಲವಿ ನಿಜ ಜೀವನದಲ್ಲಿ ಎಷ್ಟು ಸಿಂಪಲ್ ಅಂಡ್ ಹಂಬಲ್ ಅಗಿ ಕಾಣಿಸಿಕೊಳ್ಳುತ್ತಾರೆ ತೆರೆ ಮೇಲೂ ಅಷ್ಟೇ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಕೆಲವರಿಗೆ ಮಚ್ಚೆ ಲಕ್ ತರುತ್ತೆ ಅಂತಾರೆ ಆದರೆ ಸಾಯಿ ಪಲ್ಲವಿಗೆ ಪಿಂಪಲ್ ಲಕ್ ತಂದುಕೊಟ್ಟಿದೆ. ಮೊದಲ ಸಿನಿಮಾ ಪ್ರೇಮಂ ಸಮಯದಲ್ಲಿ ಸಾಯಿ ಪಲ್ಲವಿ ಮುಖದ ತುಂಬಾ ಪಿಂಪಲ್ ಇತ್ತು ಹೀಗಾಗಿ ಮೇಕಪ್ ಬಳಸಲಿಲ್ಲ ಆದರೆ ನ್ಯಾಚುರಲ್ ಲುಕ್ ವೈರಲ್ ಆಗಿ ಈಗ ಪ್ರತಿ ಸಿನಿಮಾದಲ್ಲೂ ಪಲ್ಲವಿ ಮೇಕಪ್ ಹಾಕಿಕೊಳ್ಳುವುದಿಲ್ಲ. ಅನುಪಮಾ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ಮೇಕಪ್‌ಗಳ ಬಗ್ಗೆ ಪಲ್ಲವಿ ಮಾತನಾಡಿದ್ದಾರೆ.
‘ಪ್ರೇಮಂ ಮತ್ತು ಅದಾದ ನಂತರ ಬಂದ ಸಿನಿಮಾಗಳ ಫೋಟೋಶೂಟ್‌ಗೆ ನಾನು ಮೇಕಪ್ ಹಾಕಿಕೊಂಡಿದ್ದೆ. ಸಿನಿಮಾ ಶೂಟಿಂಗ್‌ನಲ್ಲಿ ಅಲ್ಲ. ಸಾಯಿ ಪಲ್ಲವಿ ಮೇಕಪ್ ಹಾಕಿಕೊಂಡರೆ ಹೇಗೆ ಕಾಣಿಸುತ್ತಾರೆ, ಕಣ್ಣಿಗೆ ಲೆನ್ಸ್ ಹಾಕಬೇಕಾ ಪ್ರಯತ್ನ ಪಡೋಣ ಎಂದು ಹಲವು ನಿರ್ದೇಶಕರು ಹೇಳುತ್ತಾರೆ ಟ್ರಯಲ್ ನಡೆದ ನಂತರ ಇಲ್ಲ ಇಲ್ಲ ಬೇಡ ನೀವು ಇರುವ ಹಾಗೆ ಇದ್ದು ಬಿಡಿ ಎನ್ನುತ್ತಾರೆ. ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ಸಿನಿಮಾಗಳಲ್ಲಿ ಪರ್ಟಿಕ್ಯೂಲರ್ attire ಬೇಕಿಲ್ಲ ಏಕೆಂದರೆ ಪಾತ್ರ ಬರೆದಿರುವ ರೀತಿನೇ ಡಿಫರೆಂಡ್ ಶೆಡ್‌ಗಳನ್ನು ಜನರಿಗೆ ತೋರಿಸುತ್ತದೆ.
ಪ್ರತಿಯೊಂದು ಸಿನಿಮಾದಲ್ಲೂ ನಾವು ಡಿಫರೆಂಟ್ ಆಗಿ ಕಾಣಿಸುತ್ತೀವಿ ಅಂದ್ರೆ ಕಥೆ ಮೇಲೆ ಹೋಗುತ್ತದೆ. ವಿಭಿನ್ನವಾಗಿ ಭಾವನೆಗಳನ್ನು ವ್ಯಕ್ತ ಪಡಿಸಿದಾಗ ನಾವು ಡಿಫರೆಂಟ್ ವ್ಯಕ್ತಿಯಾಗಿ ಕಾಣಿಸುತ್ತೀವಿ. ಮೇಕಪ್ ಇಲ್ಲದೆ ನಾನು ಅಭಿನಯಿಸುತ್ತಿರುವೆ ಅಂದ್ರೆ ನನಗೆ ಮಾತ್ರವಲ್ಲ ನಮ್ಮ ನಿರ್ದೇಶಕರಿಗೂ ಒಪ್ಪಿಗೆ ಇದೆ ಎಂದು ಅರ್ಥ’ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.
‘ಶಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ನನ್ನ ಪಾತ್ರ ಹೆಚ್ಚಿಗೆ ಕ್ಲಾಸಿಕಲ್ ಡ್ಯಾನ್ಸ್ ಆಗಿದ್ದ ಕಾರಣ ಮೇಕಪ್ ಹಾಕಿಕೊಳ್ಳಬೇಕಿತ್ತು ಏಕೆಂದರೆ ಆ ಕಲೆಗೆ ಬೆಲೆ ಕೊಡಬೇಕು. ಆದರೆ ಈ ಮೇಕಪ್‌ಗಳನ್ನು ನಾನೇ ಮಾಡಿಕೊಳ್ಳುತ್ತಿದ್ದೆ ಅನ್ನೋದು ಜನರಿಗೆ ಗೊತ್ತಿಲ್ಲ. ನನ್ನ ಮೇಕಪ್ ಆರ್ಟಿಸ್ಟ್‌ಗಳು ಮೇಕಪ್ ಮಾಡುತ್ತಿದ್ದರು ಆದರೂ ಸರಿಯಾಗಿಲ್ಲ ಹೀಗೆ ಬೇಕು ಹಾಗೆ ಬೇಕು ಎಂದು ಹೇಳಿ ಹೇಳಿ ನಾನೇ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಅವರೆಲ್ಲಾ ನನ್ನನ್ನು ತುಂಬಾ ಹೇಟ್ ಮಾಡುತ್ತಾರೆ.
ಈವರೆಗೂ ನಾನು ಅಭಿನಯಿಸಿರುವ ಸಿನಿಮಾಗಳಲ್ಲಿ ನನ್ನ ಹೇರ್‌ಸ್ಟೈಲ್ ಕೇವಲ ಜಡೆ ಅಗಿತ್ತು, ಕ್ಯಾಮೆರಾ ಎದುರು ಬಂದಾಗ ಅಷ್ಟೊಂದು ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ ಹೀಗಾಗಿ ಅಲ್ಲಿ ಅಲ್ಲಿ ಸ್ವಲ್ಪ ಕೂದಲು ಎಳೆದುಕೊಳ್ಳುತ್ತಿದ್ದೆ ಆಗ ನನ್ನ ಹೇರ್ ಸ್ಟೈಲ್ ಆರ್ಟಿಸ್ಟ್ ಬೇಸರ ಮಾಡಿಕೊಳ್ಳುತ್ತಿದ್ದರು ಈಗಷ್ಟೆ ಮೇಕಪ್ ಮಾಡಿರುವೆ ಆಗಲೇ ಕೂದಲು ಹೀಗೆ ಮಾಡಿಕೊಂಡರು ಎಂದು. ಮೇಕಪ್ ಹಾಕಿದ್ದರೂ ಹಾಕದಂತೆ ಕಾಣಿಸಬಾರದು ಎಂದು ಹಲವು ಕಲಾವಿದರು ಇಷ್ಟ ಪಡುತ್ತಾರೆ ಅಂದರೆ ನಾನು ಮೇಕಪ್ ಹಾಕುವುದಿಲ್ಲ ಏಕೆಂದರೆ ನಮ್ಮ ಸಿನಿಮ್ಯಾಟೋಗ್ರಾಫರ್‌ಗಳು ಅಷ್ಟು ಬ್ಯೂಟಿಫುಲ್ ಆಗಿ ಲೈಟಿಂಗ್ ಮಾಡುತ್ತಾರೆ ಹೀಗಾಗಿ ಮೇಕಪ್ ಇಲ್ಲದಿದ್ದರೂ ನಾನು ಚೆನ್ನಾಗಿ ಕಾಣಿಸುತ್ತೀನಿ.
ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಎಡಿಟ್ ಮಾಡುವಾಗ ಮುಖದ ಮೇಲೆ ಮೊಡವೆ ನೋಡಿ ಆಗ ಓ ಆಕೆ ಮೇಕಪ್ ಮಾಡಿಕೊಂಡಿಲ್ಲ ಎಂದು ಗಮನಿಸುತ್ತಾರೆ’ ಎಂದು ಪಲ್ಲವಿ ಹೇಳಿದ್ದಾರೆ.
‘ಬಾಲಿವುಡ್‌ನಲ್ಲಿ ನಾಯಕಿಯರು ಹೀಗೆ ಇರಬೇಕು ಈ ರೀತಿನೇ ಮೇಕಪ್ ಮಾಡಿಕೊಳ್ಳಬೇಕು ಎನ್ನುವ ಒತ್ತಡವಿದೆ ಆದರೆ ನನಗೆ ಆ ಸೈಡ್ ಗೊತ್ತಿಲ್ಲದ ಕಾರಣ ಕೂಲ್ ಅಗಿರುವೆ. ಮೇಕಪ್ ಧರಿಸುವುದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಅಂದ್ರೆ ಧರಿಸುವುದರಲ್ಲಿ ತಪ್ಪಿಲ್ಲ..ಮೇಕಪ್ ಇಲ್ಲದೆ ನಾನು ಕಾನ್ಫಿಡೆಂಟ್ ಆಗಿರುವ ಕಾರಣ ಹೀಗೆ ಇರಲು ಇಷ್ಟ ಪಡುವೆ’ ಎಂದಿದ್ದಾರೆ ಪಲ್ಲವಿ.