ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾಗಾಲ್ಯಾಂಡ್‌ನಲ್ಲಿ ಗೆದ್ದು ಇತಿಹಾಸ ರಚಿಸಿದ ಹೆಕಾನಿ ಜಕ್ಲೌ, ಇವರು ಮೊದಲ ಮಹಿಳಾ ಶಾಸಕಿ!

Twitter
Facebook
LinkedIn
WhatsApp
turkey train 07 2

ನಾಗಾಲ್ಯಾಂಡ್(ಮಾ.02): ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ವಿಧಾಸಭಾ ಚುನಾವಣೆಗಳ ಫಲಿತಾಂಶ ಬಹುತೇಕ ಹೊರಬಿದ್ದಿದೆ.ಮೆಘಾಲಯದಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ನಾಗಾಲ್ಯಾಂಡ್ ಹಾಗೂ ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಸ್ಪಷ್ಟಬಹುತ ಪಡೆದಿದೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಕೂಟ 36ಕ್ಕೂ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಸ್ಪಷ್ಟಬಹುಮತ ಪಡೆದಿರುವ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಕಸರತ್ತಿನ ಚಿತ್ತ ಹರಿಸಿದೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಇತಿಹಾಸ ರಚನೆಯಾಗಿದೆ. ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆಗೆ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮೈತ್ರಿಕೂಟದ ಹೆಕಾನಿ ಜಕ್ಲೌ ಈ ಸಾಧನೆ ಮಾಡಿದ್ದಾರೆ.

ಬಿಜೆಪಿ ಮೈತ್ರಿ ಪಕ್ಷವಾಗಿರುವ ಎನ್‌ಡಿಪಿಪಿ ಅಭ್ಯರ್ಥಿ ಹೆಕಾನಿ ಜಕ್ಲೌ ನಾಗಾಲ್ಯಾಂಡ್‌ನ ದಿಮಾಪುರ್ 3ನೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರಾಮ್ ವಿಲಾಸ್ ಅವರ ಲೋಕ್ ಜನಶಕ್ತಿ ಪಾರ್ಟಿಯ ಎಝೆಟೋ ಝಿಮೊಮಿ ವಿರುದ್ಧ 1,536 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಹೆಕಾನಿ ಜಕ್ಲೌ 14,395 ಮತಗಳನ್ನು ಪಡೆದಿದ್ದಾರೆ. ಎದುರಾಳಿ ಅಭ್ಯರ್ಥಿ ಝಿಮೋಮಿ 12,859 ಮತಗಳನ್ನು ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿರುವ ಹೆಕಾನಿ ಇದೀಗ ಹೊಸ ಅಧ್ಯಾಯ ಬರೆದಿದ್ದಾರೆ.

ನಾಗಾಲ್ಯಾಂಡ್‌ನಿಂದ ಮಹಿಳಾ ನಾಯಕಿರು ಮುನ್ನಲೆಗೆ ಬಂದಿರುವುದು ತೀರಾವಿರಳ. ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಕಾನಿ ಸೇರಿದಂತೆ ಸಾಲ್ಹೌಟು ಕ್ರುಸೆ, ಹುಕಾಲಿ ಸೆಮಾ, ರೊಸಿ ಥಾಮ್ಸನ್ ನಾಲ್ವರು ಮಹಿಳೆಯರು ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಇದರಲ್ಲಿ ಹೆಕಾನಿ ಗೆಲುವು ದಾಖಲಿಸಿ ಮೊದಲ ಬಾರಿಗೆ ನಾಗಾಲ್ಯಾಂಡ್ ವಿಧಾನಸಭೆ ಪ್ರವೇಶಿಸುತ್ತಿರುವ ಮಹಿಳಾ ನಾಯಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಗಾಲ್ಯಾಂಡ್‌ನಿಂದ ವಿಧಾನಸೌಧ ಹಾಗೂ ಲೋಕಸಭೆಗೆ ಆಯ್ಕೆಯಾದ ನಾಯಕಿರು ಹುಡಿಕಿದರೂ ಸಿಗುವುದು ಕಷ್ಟ. ಕಾರಣ 1977ರಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ ಮೂಲಕ ಸ್ಪರ್ಧಿಸಿದ ರಾನೊ ಮೆಸೆ ಶಾಜಿಯಾ ಲೋಕಸಭೆ ಪ್ರತಿನಿಧಿಸಿದ್ದರು. ರಾನೊ ನಾಗಾಲ್ಯಾಂಡ್‌ನ ಮೊದಲ ಸಂಸದೆ ಮಾತ್ರವಲ್ಲ, ಮೊದಲ ಯಶಸ್ವಿ ಮಹಿಳಾ ರಾಜಕೀಯ ನಾಯಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರ ಬಳಿಕ ಕಳೆದ ವರ್ಷ ಬಿಜೆಪಿ ಪಕ್ಷ ಎಸ್ ಪಂಗ್ಯೊಂಗ್ ಕೊನ್ಯಾಕ್ ಅವರನ್ನು ರಾಜ್ಯಸಭೆಗೆ ಕಳುಹಿಸಿತ್ತು. ಕೊನ್ಯಾಕ್ ನಾಗಾಲ್ಯಾಂಡ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇದೀಗ ಹೆಕಾನಿ ನಾಗಾಲ್ಯಾಂಡ್ ವಿಧಾನಸಭೆಗೆ ಪ್ರವೇಶ ಪಡೆಡಿದ್ದಾರೆ. ಇದೀಗ ರಾಜ್ಯಸಭೆ ಹಾಗೂ ವಿಧಾನಸಭೆಯಲ್ಲಿ ತಲಾ ಒಬ್ಬೊಬ್ಬರು ನಾಗಾಲ್ಯಾಂಡ್ ಮಹಿಳೆಯರು ಅವಕಾಶ ಪಡೆದಿದ್ದಾರೆ. ಇನ್ನು ಎನ್‌ಡಿಪಿಪಿ ಪಕ್ಷದ  ಸಾಲ್ಹೌಟು ಕ್ರುಸೆ ಫಲಿತಾಂಶ ಹೊರಬಿದ್ದಿಲ್ಲ. ಸದ್ಯದ ಮಟ್ಟಿಗೆ ಕ್ರುಸೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಫೆಬ್ರವರಿ 27 ರಂದು ನಾಗಾಲ್ಯಾಂಡ್ ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್‌ನಲ್ಲಿ ಶೇಕಡಾ 74ರಷ್ಟು ಮತದಾನವಾಗಿತ್ತು. ನಾಗಾಲ್ಯಾಂಡ್‌ನಲ್ಲಿ 60 ವಿಧಾಸಭಾ ಕ್ಷೇತ್ರಗಳಿವೆ. ಇದರಲ್ಲಿ ಒಂದು ಕ್ಷೇತ್ರದಿಂದ ಅವಿರೋಧ ಆಯ್ಕೆ ನಡೆದಿತ್ತು. ಹೀಗಾಗಿ 59 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್‌ನಲ್ಲಿ ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಈ ಬಾರಿಯೂ ಸ್ಪಷ್ಟ ಬಹುಮತ ಪಡೆದಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ