ನನಗಿಂತ ಹಾಟ್ ಹೆಂಡತಿ ಬೇಕಿತ್ತಾ ಆದಿಲ್ ಗೆ? : ಏರ್ ಪೋರ್ಟಿನಲ್ಲಿ ರಾಖಿ ಪ್ರಶ್ನೆ

ಅರೆಬರೆ ಬಟ್ಟೆಗಳನ್ನು ಧರಿಸಿಕೊಂಡು ಬೀದಿಗೆ ಇಳಿಯುತ್ತಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ಮದುವೆ ನಂತರ ಡ್ರೆಸ್ ಕೋಡ್ ಬದಲಾಯಿಸಿಕೊಂಡಿದ್ದರು. ಪತಿ ಆದಿಲ್ ಮನೆಯವರಿಗೆ ನಾನು ತೊಡುವ ಬಟ್ಟೆಗಳು ಇಷ್ಟವಾಗುವುದಿಲ್ಲ ಎನ್ನುತ್ತಾ ಮೈತುಂಬಾ ಉಡುಗೆ ತೊಡುತ್ತಿದ್ದರು. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಬುರ್ಕಾ ಕೂಡ ತೊಡಲು ಶುರು ಮಾಡಿದ್ದರು. ಆದಿಲ್ ಕೈ ಕೊಡುತ್ತಿದ್ದಂತೆಯೇ ಮತ್ತೆ ಬದಲಾಗಿದ್ದಾರೆ ರಾಖಿ.
ರಾಖಿ ಫೌಂಡೇಶನ್ ಉದ್ಘಾಟನೆಗಾಗಿ ದುಬೈಗೆ ತೆರಳುತ್ತಿದ್ದ ಅವರು ಕ್ಯಾಮೆರಾ ಕಣ್ಣಿಗೆ ಮತ್ತೆ ಹಳೆ ರಾಖಿಯಂತೆ ಕಂಡರು. ತುಂಡುಡುಗೆಯಲ್ಲೇ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ರಾಖಿ ಕಾಸ್ಟ್ಯೂಮ್ ನೋಡಿದ ಕೆಲವರು ಮತ್ತೆ ರಾಖಿ ಬದಲಾಗಿದ್ದಾರೆ ಎನ್ನುವ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸಿದ ರಾಖಿ, ನಾನು ಮೊದಲನಂತೆ ಆಗಿದ್ದೇನೆ. ಹೀಗೆಯೇ ಇರುತ್ತೇನೆ. ಯಾರಿಗಾಗಿ ನಾನು ಬದಲಾಗಿದ್ದೇನೋ, ಅವರೇ ನನ್ನಿಂದ ದೂರವಾಗಿದ್ದಾರೆ ಎಂದರು.
ತುಸು ತಮಾಷೆಯಾಗಿ ಮತ್ತೆ ಮಾತನಾಡಿದ ರಾಖಿ, ‘ನನ್ನಂತಹ ಹಾಟ್ ಹೆಂಡತಿ ಬಿಟ್ಟು, ಆದಿಲ್ ದೂರ ಹೋಗಿದ್ದಾನೆ. ನನಗಿಂತ ಹಾಟ್ ಹೆಂಡತಿ ಬೇಕಾ?’ ಎಂದು ಪ್ರಶ್ನೆ ಮಾಡಿದರು. ಗಂಡನ ಮೇಲೆ ತುಸು ಅನುಕಂಪವನ್ನೂ ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದರು. ಆದಿಲ್ ಸದ್ಯ ಜೈಲಿನಲ್ಲಿದ್ದಾನೆ. ರಾಖಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಕಾರಣದಿಂದಾಗಿ ಅವರು ರಾಖಿ ಫೌಂಡೇಶನ್ ಶುರು ಮಾಡಿದ್ದಾರಂತೆ.
ಎರಡು ದಿನಗಳ ಕಾಲ ಮೈಸೂರಿನಲ್ಲಿ ಬೀಡು ಬಿಟ್ಟಿದ್ದ ರಾಖಿ, ಮೊನ್ನೆಯಷ್ಟೇ ಮುಂಬೈಗೆ ತೆರಳಿದ್ದರು. ಆದಿಲ್ ಕುಟುಂಬವನ್ನು ಭೇಟಿ ಮಾಡಲು ಮೈಸೂರಿಗೆ ಬಂದಿದ್ದ ರಾಖಿಗೆ, ಆದಿಲ್ ಕುಟುಂಬ ಭೇಟಿಯನ್ನು ನಿರಾಕರಿಸಿತ್ತು. ಅಲ್ಲದೇ, ಮನೆ ಬಾಗಿಲಿಗೆ ಬೀಗ ಹಾಕಿ, ಬೇರೆ ಕಡೆ ಸ್ಥಳಾಂತರಗೊಂಡಿದೆ. ಆದಿಲ್ ಕುಟುಂಬದ ಭೇಟಿ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಮುಂಬೈಗೆ ರಾಖಿ ವಾಪಸ್ಸಾಗಿದ್ದರು.