ಗುರುವಾರ, ನವೆಂಬರ್ 21, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತಂದೆಯಿಂದಲೇ ಲೈಂಗಿಕ ಕಿರುಕುಳ ಅನುಭವಿಸಿದ್ದರ ಬಗ್ಗೆ ಬಾಯ್ಬಿಟ್ಟ `ಶಾಂತಿ ಕ್ರಾಂತಿ’ ನಟಿ

Twitter
Facebook
LinkedIn
WhatsApp
MV5BNTk1OTUxMzIzMV5BMl5BanBnXkFtZTcwMzMxMjI0Nw@@. V1 1 4

ನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ (Kushboo Sundar) ಬಾಲ್ಯದಲ್ಲಿ ತಂದೆಯಿಂದಲ್ಲೇ (Father) ಕಿರುಕುಳ (Sexually Abused) ಅನುಭವಿಸಿರುವ ಘಟನೆಯನ್ನ ಇದೀಗ ರಿವೀಲ್ ಮಾಡಿದ್ದಾರೆ. ನಟಿ ಕಮ್ ರಾಜಕಾರಣಿಯಾಗಿರುವ ಖುಷ್ಬೂ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆಯನ್ನು ತೆರೆದಿಟ್ಟಿದ್ದಾರೆ.

May be an image of 1 person

ತಮ್ಮ ಬಾಲ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಮಾನಸಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ ಆದರಿಂದ ಇಡೀ ಜೀವನ ಹೆದರಿಕೊಳ್ಳಲು ಆರಂಭಿಸುತ್ತಾರೆ. ನನ್ನ ತಾಯಿ ದಾಂಪತ್ಯ ಬದುಕಿನಲ್ಲಿ ಅತಿ ಹೆಚ್ಚು ನಿಂದನೆಗಳನ್ನು ಎದುರಿಸಿದ್ದರು. ನನ್ನ ತಾಯಿಯ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಹೊಡೆಯುವುದು ಅಪರಾಧ ಆದರೆ ಆ ವ್ಯಕ್ತಿ, ತಮ್ಮ ಜನ್ಮ ಹಕ್ಕು ಎನ್ನುವ ರೀತಿ ವರ್ತಿಸುತ್ತಿದ್ದ. ನಾನು 8 ವರ್ಷದ ಹುಡುಗಿ ಆಗಿದ್ದಾಗ ನನಗೆ ಕಿರುಕುಳ ನೀಡಲು ಆರಂಭಿಸಿದ್ದ. ತಂದೆಯ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿ ಮಾತನಾಡಲು ಧೈರ್ಯ ಬಂದಿದ್ದೇ ನಾನು 15 ವರ್ಷ ಮುಟ್ಟಿದ್ದಾಗ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.

No photo description available.

ಕುಟುಂಬದವರ ಭಯದಿಂದ ಖುಷ್ಬೂ ಕಿರುಕುಳದ ಬಗ್ಗೆ ಹೇಳಿಕೊಳ್ಳಲು ಹೆದರುತ್ತಿದ್ದರಂತೆ. ಕಿರುಕುಳದ ಬಗ್ಗೆ ಹೇಳಿಕೊಂಡರೂ ನನ್ನ ತಾಯಿ ನಂಬುತ್ತಾರೋ ಇಲ್ವೋ ಅನ್ನೋ ಭಯ ನನ್ನಲ್ಲಿತ್ತು ಏಕೆಂದರೆ ಏನೇ ಆದರೂ ನನ್ನ ಪತಿ ದೇವರು ಎನ್ನುವ ಮೈಂಡ್‌ಸೆಟ್ ಅವರದ್ದು. ತಾಳ್ಮೆ ಮೀರಿದ ಮೇಲೆ ನಾನು ತಂದೆ ವಿರುದ್ಧ ಮಾತನಾಡಲು ಶುರು ಮಾಡಿದೆ, ಆಗ ನನಗೆ 15 ವರ್ಷ. ನಮ್ಮ ಬಳಿ ಏನಂದ್ರೆ ಏನೂ ಇರಲಿಲ್ಲ ಆ ಸಮಯದಲ್ಲಿ ನಮ್ಮನ್ನು ಬಿಟ್ಟು ಹೋದರು. ಒಂದು ಹೊತ್ತು ಊಟಕ್ಕೂ ತುಂಬಾ ಯೋಚನೆ ಮಾಡಬೇಕಿತ್ತು. 16 ವರ್ಷದ ಹುಡುಗಿ ಆಗಿದ್ದಾಗ ಜೀವನ ಪಾಠ ಕಲಿಸಿತ್ತು ಎಂದು ಖುಷ್ಬೂ ಹೇಳಿದ್ದಾರೆ. ಈ ಸಂದರ್ಶನದ ಮೂಲಕ ತಾವು ಎದುರಿಸಿದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

No photo description available.

 

ಇನ್ನೂ ಕನ್ನಡದ ರಣಧೀರ, ಶಾಂತಿ ಕ್ರಾಂತಿ, ಮ್ಯಾಜಿಕ್ ಅಜ್ಜಿ, ಜೀವನದಿ, ಪಾಳೆಗಾರ ಚಿತ್ರಗಳಲ್ಲಿ ಖುಷ್ಬೂ ನಟಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ