ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

Twitter
Facebook
LinkedIn
WhatsApp
ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

ಬಾಗಲಕೋಟೆ: ದೆಹಲಿಯ (Newdelhi) ಲಿವಿಂಗ್ ರಿಲೇಷನ್‌ಶಿಪ್ ಗೆಳತಿ ಶ್ರದ್ಧಾವಾಕರ್ ಹತ್ಯೆ ಕೇಸ್‌ನಂತೆ (Shraddha Walker) ಬಾಗಲಕೋಟೆಯಲ್ಲಿ ನಡೆದಿರುವ ಹತ್ಯೆಯೊಂದು (Murder) ಸಾರ್ವಜನಿಕರನ್ನ ಬೆಚ್ಚಿ ಬೀಳಿಸಿದೆ.

ಬಾಗಲಕೋಟೆಯ ಮುಧೋಳ ನಗರದಲ್ಲಿ ಪಾಪಿ ಮಗನೊಬ್ಬ ತನ್ನ ತಂದೆಯನ್ನ ಕೊಂದು 20 ತುಂಡುಗಳಾಗಿ ಕತ್ತರಿಸಿ, ಕೊಳವೆ ಬಾವಿಗೆ ಬಿಸಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪರಶುರಾಮ ಕುಳಲಿ (54) ಕೊಲೆಯಾದ ವ್ಯಕ್ತಿ. ಇವರ ಮಗ ವಿಠ್ಠಲ ಕುಳಲಿ(21) ಕೊಲೆ ಆರೋಪಿ ಆಗಿದ್ದಾನೆ.

ಕಳೆದ ಮಂಗಳವಾರ (ಡಿಸೆಂಬರ್ 6)ರಂದು ಹತ್ಯೆ ನಡೆದಿದೆ ಎನ್ನಲಾಗಿದೆ. ತಂದೆ ಕುಡಿದ ಮತ್ತಿನಲ್ಲಿ ಮಗನಿಗೆ ಬೈಯ್ಯೋದು, ಹಲ್ಲೆ ಮಾಡೋದು ಮಾಡ್ತಿದ್ದರು. ಇದರಿಂದ ರೋಸಿ ಹೋಗಿದ್ದ ಮಗ, ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ಕೊಳವೆ ಬಾವಿಗೆ ಹಾಕಲು ಹೋಗಿದ್ದಾನೆ. ಕೊಳವೆ ಬಾವಿಗೆ ದೇಹ ಇಳಿಯದೇ ಇದ್ದಾಗ, ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಕೊಳವೆ ಬಾವಿಗೆ ಹಾಕಿದ್ದಾನೆ. 

ಇದೀಗ ಕೊಲೆ ರಹಸ್ಯ ಬಯಲಾಗಿದೆ. ಜೆಸಿಬಿಯಿಂದ (JCB) ಕೊಳವೆ ಬಾವಿ ಅಗೆದು ಮೃತದೇಹದ ಭಾಗಗಳನ್ನ ಪೊಲೀಸರು (Mudhol Police) ಹೊರ ತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ಮಗನನ್ನ ಪೊಲೀಸರು ಬಂಧಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ