ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಟ್ವಿಟ್ಟರ್‌ನಂತೆ ಇನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು

Twitter
Facebook
LinkedIn
WhatsApp
Verify Tick Facebook and Instagram Account

ವಾಷಿಂಗ್ಟನ್: ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಂತೆ (Twitter) ಇದೀಗ ಮೆಟಾ (Meta) ಕೂಡಾ ತನ್ನ ಫೋಟೋ ಹಂಚಿಕೆ ಅಪ್ಲಿಕೇಶನ್‌ಗಳಾದ ಇನ್‌ಸ್ಟಾಗ್ರಾಮ್ (Instagram) ಹಾಗೂ ಫೇಸ್‌ಬುಕ್‌ಗಳಲ್ಲಿ (Verified Account) ವೆರಿಫೈಡ್ ಖಾತೆಗಳಿಗಾಗಿ ಪಾವತಿ ಮಾಡುವ ಯೋಜನೆಯನ್ನು ಘೋಷಿಸಿದೆ.

ಕೆಲ ತಿಂಗಳ ಹಿಂದೆ ಟ್ವಿಟ್ಟರ್ ತನ್ನ ಬಳಕೆದಾರರು ನೀಲಿ ಬಣ್ಣದ ಟಿಕ್ ಮಾರ್ಕ್‌ಗಳನ್ನು (Blue Tick) ಹೊಂದಲು ಪಾವತಿ ಮಾಡುವ ನಿಯಮವನ್ನು ಜಾರಿಗೊಳಿಸಿತ್ತು. ಇತ್ತೀಚೆಗಷ್ಟೇ ಈ ನಿಯಮ ಭಾರತದಕ್ಕೂ ಬಂದಿದೆ. ಇದೀಗ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ಗಳಲ್ಲಿ ವೆರಿಫೈಡ್ ಖಾತೆಗಳಿಗಾಗಿ ಪಾವತಿ ಮಾಡಬೇಕೆಂದು ಮಾತೃ ಸಂಸ್ಥೆಯಾದ ಮೆಟಾ ತಿಳಿಸಿದೆ.

Meta Launches Paid Facebook Instagram Blue Tick Verification

ಮೆಟಾ ಈ ಯೋಜನೆಯನ್ನು ಇದೇ ವಾರದಲ್ಲಿ ಜಾರಿಗೊಳಿಸುವುದಾಗಿ ತಿಳಿಸಿದೆ. ಆರಂಭದಲ್ಲಿ ಈ ಸೇವೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಆರಂಭವಾಗಲಿದ್ದು, ಬಳಿಕ ಶೀಘ್ರದಲ್ಲೇ ಇತರ ದೇಶಗಳಿಗೂ ವಿಸ್ತರಿಸಲಿದೆ.

ಮೆಟಾ ವೆರಿಫೈಡ್ ಖಾತೆಗಳನ್ನು ಹೊಂದಲು ವೆಬ್‌ನಲ್ಲಿ ತಿಂಗಳಿಗೆ 11.99 ಡಾಲರ್ (991 ರೂ.) ಇರಲಿದ್ದು, ಐಒಎಸ್ ಬಳಕೆದಾರರಿಗೆ 14.99 ಡಾಲರ್ (1,239 ರೂ.) ಇರಲಿದೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ಚಂದಾದಾರಿಕೆ ಸೇವೆ ಲಭ್ಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪಾವತಿ ಮಾಡಿ ಚಂದಾದಾರಿಕೆ ಸೇವೆಯನ್ನು ಪಡೆಯಲು ಆಂಡ್ರಾಯ್ಡ್ ಬಳಕೆದಾರರು ಸ್ವಲ್ಪ ಕಾಯಬೇಕಾದ ಸಾಧ್ಯತೆಯಿದೆ. 

How to get verified on Twitter, Facebook, Instagram and TikTok | The US Sun

ಈ ಯೋಜನೆ ಜಾರಿಯಾದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪಾವತಿ ಮಾಡಿ ತಮ್ಮ ಖಾತೆಗಳಲ್ಲಿ ನೀಲಿ ಬಣ್ಣದ ಬ್ಯಾಡ್ಜ್ ಅನ್ನು ಪಡೆಯಬಹುದು. ಮಾಸಿಕ ಪ್ರೀಮಿಯಂ ಪಾವತಿಸುವ ಮೂಲಕ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು. ಈ ಸೇವೆ ಟ್ವಿಟ್ಟರ್‌ನ ಬ್ಲೂ ಟಿಕ್ ಅನ್ನೇ ಹೋಲುತ್ತದೆ.

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಅದರಲ್ಲಿ ಪಾವತಿ ಮಾಡಿ ನೀಲಿ ಟಿಕ್ ಮಾರ್ಕ್ ಅನ್ನು ಪಡೆಯುವ ನೀತಿಯನ್ನು ಜಾರಿಗೊಳಿಸಿದರು. ಇದೀಗ ಟ್ವಿಟ್ಟರ್‌ನಲ್ಲಿ ನೀಲಿ ಟಿಕ್ ಪಡೆಯಲು ಬಳಕೆದಾರರು ವೆಬ್‌ಗಾಗಿ ತಿಂಗಳಿಗೆ 650 ರೂ., ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ 900 ರೂ. ನಿಗದಿಪಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ