ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್ ಟ್ರಕ್ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಕಾರು ಪುಣೆಯಿಂದ ನೆರೆಯ ಕೊಲ್ಲಾಪುರದ ಜಯಸಿಂಗ್ ಪುರಕ್ಕೆ ಹೋಗುತ್ತಿದ್ದಾಗ ಸಾಂಗ್ಲಿಯ ಕಾಸೆಗಾಂವ್ ಪ್ರದೇಶದ ಯೆವಲೆವಾಡಿ ಫಾಟಾ ಪ್ರದೇಶದ ಬಳಿ ಶನಿವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ತೀವ್ರವಾಗಿ ಹಾನಿಗೊಳಗಾದ ಕಾರನ್ನು ಗಮನಿಸಿದಾಗ ಕಾರು ಹೆಚ್ಚಿನ ವೇಗದಲ್ಲಿ ಚಲಿಸುತ್ತಿದೆ ಎಂದು ತೋರುತ್ತದೆ. ಅದರಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಕಾಸೆಗಾಂವ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು
ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು Twitter Facebook LinkedIn WhatsApp ಉಪ್ಪಿನಂಗಡಿ: ಚುನಾವಣ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ “ಈ ಬಾರಿಯೂ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?