ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಜ್ವರ ಬಂದು ಅಮ್ಮ ಮಲಗಿದ್ದಾಳೆ ಅಂತಾ ಮೃತದೇಹದ ಜೊತೆ ಎರಡು ದಿನ ಕಳೆದ ಮಗ!

Twitter
Facebook
LinkedIn
WhatsApp
releted photos 2 6

ಬೆಂಗಳೂರು: ಹಾಸಿಗೆ ಹಿಡಿದಿದ್ದ ತಾಯಿ (Mother) ಮಲಗಿರಬೇಕು ಅಂತಾ ತನ್ನ ತಾಯಿಯ ಹೆಣದ ಬಳಿಯೇ ಮಗ ಎರಡು ದಿನ ಮಲಗಿದ್ದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.

ಮೃತದೇಹ ವಾಸನೆ ಬರೋದಕ್ಕೆ ಶುರುವಾದಾಗ ಅಕ್ಕಪಕ್ಕದವರನ್ನ ಕರೆದು ಹುಡುಗ ತೋರಿಸಿದ್ದಾನೆ. ಈ ವೇಳೆ ತಾಯಿ ಅಣ್ಣಮ್ಮ ಸತ್ತಿರೋದು ಗೊತ್ತಾಗಿದೆ.

ಏನಿದು ಘಟನೆ..?: ಇಳಂಗೋವನ್ ಹಾಗೂ ಅಣ್ಣಮ್ಮ ದಂಪತಿ ಆರ್.ಟಿ.ನಗರ (RT Nagar Police Station) ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಗಂಗಾನಗರ ಐದನೇ ಕ್ರಾಸ್ ನಲ್ಲಿ ಸಣ್ಣದೊಂದು ಸ್ವಂತ ಸೀಟಿನ ಮನೆಯಲ್ಲಿ ವಾಸವಿದ್ರು. ದಂಪತಿಗೆ 14 ವರ್ಷದ ಸೂರ್ಯ ಅನ್ನೊ ಮಗ ಇದ್ದಾನೆ. ಸುಖವಾಗಿದ್ದ ಸಂಸಾರದಲ್ಲಿ ಅನಾರೋಗ್ಯ ಅನ್ನೋದು ಇಡೀ ಕುಟುಂಬವನ್ನೇ ಕಾಡಿತ್ತು. ಅಷ್ಟೇ ಅಲ್ಲದೆ ಹೃದಯ ವಿದ್ರಾವಕ ಘಟನೆಗೂ ಸಾಕ್ಷಿಯಾಗಿದೆ.

 

ಎಂಟು ತಿಂಗಳ ಹಿಂದಷ್ಟೇ ಪತಿ ಇಳಂಗೋವನ್ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು. ಅಂದಿನಿಂದ ತಾಯಿ ಮತ್ತು 14 ವರ್ಷದ ಮಗ ಇಬ್ಬರೇ ಮನೆಯಲ್ಲಿದ್ರು. ತಾಯಿಗೆ ಸ್ಟ್ರೋಕ್ ಆಗಿ ಮಾತು ಕೂಡ ಬಂದ್ ಆಗಿತ್ತು. ತಂದೆಯ ಸ್ನೇಹಿತರ ನೆರವಿನೊಂದಿಗೆ ಅಮ್ಮ, ಮಗ ಬದುಕು ಕಟ್ಟಿಕೊಂಡಿದ್ರು. 14 ವರ್ಷದ ಮಗನೇ ಅಡುಗೆ ಮಾಡಿ ಹಾಕ್ತಿದ್ದ. ಅಲ್ಲದೇ ಹೆಚ್ಚಾಗಿ ಮನೆಯಿಂದ ಹೊರಗೂ ಬರ್ತಾ ಇರಲಿಲ್ಲ. 

ಫೆಬ್ರವರಿ 26 ರಂದು ರಾತ್ರಿ ಮಲಗಿದ್ದಲ್ಲಿಯೇ ತಾಯಿ ಅಣ್ಣಮ್ಮ ಮೃತಪಟ್ಟಿದ್ದಾಳೆ. ಈ ವಿಚಾರ ಮಗ ಸೂರ್ಯನಿಗೆ ತಿಳಿಯಿತೊ ಇಲ್ವೋ ಗೊತ್ತಿಲ್ಲ. ಆದರೆ ತಾಯಿ ಜೊತೆಗೆನೇ ಎರಡು ಕಾಲ ಕಳೆದಿದ್ದಾನೆ. ಮನೆಯಿಂದ ಹೊರಗೆ ಬರ್ತಿದ್ದ ಆತ, ಊಟ ತಿಂಡಿ ತೆಗೆದುಕೊಂಡು ಮತ್ತೆ ಮನೆ ಸೇರ್ಕೊತಿದ್ದ. ತಾಯಿ ಪಕ್ಕದಲ್ಲೇ ಮಲಗಿಕೊಂಡಿದ್ದ. ಹೀಗಿರ್ಬೇಕಾದ್ರೆ ಫೆಬ್ರವರಿ 28 ರಂದು ಸ್ವತಃ ಮಗನೇ ತನ್ನ ತಂದೆಯ ಸ್ನೇಹಿತರಿಗೆ ತಾಯಿ ಮಾತಾಡ್ತಿಲ್ಲ ಅಂತಾ ಹೇಳಿದ್ದಾನೆ. ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.

ಘಟನೆಯಿಂದ ಏರಿಯಾ ಜನರೆಲ್ಲ ಶಾಕ್ ಆಗಿದ್ದಾರೆ. ತಾಯಿಯ ಮೇಲಿನ ಅತಿಯಾದ ಪ್ರೀತಿಯೋ ಅಥವಾ ಸತ್ತಿದ್ದಾಳೆ ಅನ್ನೋ ವಿಚಾರ ಆ ಮಗನಿಗೆ ಗೊತ್ತಾಗ್ಲಿಲ್ವೊ ಏನೋ. ಎರಡು ದಿನ ಮೃತದೇಹದ ಜೊತೆಗೆ ಕಳೆದಿದ್ದು ನಿಜಕ್ಕೂ ನಾಗರೀಕ ಸಮಾಜದ ಮನಕಲಕುವಂತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist