ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನಿಸಿದ್ದಾರೆ’

Twitter
Facebook
LinkedIn
WhatsApp
‘ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನಿಸಿದ್ದಾರೆ’
 

ಬೆಂಗಳೂರು: ಚಡ್ಡಿ ಹಾಕುವವರು ಮಿಲಿಟರಿಯಲ್ಲಿ, ಪೊಲೀಸ್ ವ್ಯವಸ್ಥೆಯಲ್ಲೂ ಹಿಂದೆ ಇದ್ದರು. ಕರ್ಮಚಾರಿಗಳೂ ಚಡ್ಡಿ ಹಾಕುತ್ತಾರೆ. ರೈತರೆಲ್ಲರೂ ಚಡ್ಡಿ ಧರಿಸುತ್ತಾರೆ. ಚಡ್ಡಿ ಹಾಕುವ ಎಲ್ಲರನ್ನೂ ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ.

ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ವತಿಯಿಂದ ಇಂದು “ಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಅವರ ಮನೆಗೆ ತಲುಪಿಸುವ ಆಂದೋಲನ”ದಲ್ಲಿ ಅವರು ಮಾತನಾಡಿದರು. ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ಗಾಂಧಿ ಭವನದಿಂದ ಸಿದ್ದರಾಮಯ್ಯರವರ ಮನೆಗೆ ತೆರಳುವ ಕಾರ್ಯಕ್ರಮ ಇದಾಗಿತ್ತು.

 

ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರು ಇತ್ತೀಚೆಗೆ ಚಡ್ಡಿ ಸುಡುವ ಆಂದೋಲನ ಮಾಡುವುದಾಗಿ ತಿಳಿಸಿದ್ದರು. ಆರೆಸ್ಸೆಸ್ ಅಥವಾ ಬಿಜೆಪಿಯನ್ನು ಗುರಿ ಮಾಡಿ ಹೀಗೆ ಹೇಳಿದ್ದಾರೆ. ಆರೆಸ್ಸೆಸ್‍ನವರು ಪ್ಯಾಂಟ್ ಹಾಕಲು ಆರಂಭಿಸಿ ಆರೇಳು ವರ್ಷಗಳಾಗಿವೆ. ಕಾಲ ಬಂದಂತೆ ನಾವು ಬದಲಾಗಿದ್ದೇವೆ. ಚಡ್ಡಿ ಎಂಬುದು ಮಾನವಕುಲದ ಗೌರವ ಕಾಪಾಡುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದವರ ಎಲ್ಲವನ್ನೂ ಕಿತ್ತುಕೊಂಡಿದ್ದು, ಇರುವ ಚಡ್ಡಿಯನ್ನು ಮಾತ್ರ ಸುಟ್ಟು ನೀವ್ಯಾಕೆ ಬೆತ್ತಲಾಗುತ್ತೀರಿ ಎಂದು ಕೇಳಿದ್ದೆವು. ಆದರೂ ಅದನ್ನು ಕೇಳದೆ ಚಡ್ಡಿ ಸುಟ್ಟಿದ್ದಾರೆ. ಎಸ್‍ಸಿ ಮೋರ್ಚಾವು ರಾಜ್ಯದಾದ್ಯಂತ ಸಿದ್ದರಾಮಯ್ಯನವರ ಹೆಸರಿನಲ್ಲಿ ಚಡ್ಡಿಗಳನ್ನು ಸಂಗ್ರಹಿಸುತ್ತಿದೆ. ಸಾಂಕೇತಿಕವಾಗಿ ನಾವು ಇವತ್ತು ಚಡ್ಡಿಗಳನ್ನು ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.

ಇದು ಬಿಜೆಪಿ ಚಡ್ಡಿಯಲ್ಲ ಎಂದ ಅವರು, ಚಡ್ಡಿ ತಯಾರಿಕೆ ಹಿಂದಿನ ಶ್ರಮವನ್ನು ಅವರು ತಿಳಿದುಕೊಳ್ಳಬೇಕು. ಜನರು ಕೋವಿಡ್ ಸಾಂಕ್ರಾಮಿಕದ ಬಳಿಕ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಚಡ್ಡಿ ಸುಟ್ಟರೂ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಚಡ್ಡಿ ಸುಡಬೇಕು. ಇಲ್ಲವಾದರೆ ಮಾಲಿನ್ಯ ಉಂಟು ಮಾಡಿದ ಸಿದ್ದರಾಮಯ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‍ನವರಿಗೆ ಬೇರೇನೂ ಕೆಲಸ ಇಲ್ಲ. ಇನ್ನು ಚಡ್ಡಿ ಸುಟ್ಟುಕೊಂಡೇ ಇರಲಿ ಎಂದರಲ್ಲದೆ, ಈ ದೇಶದ ಗೌರವವನ್ನೂ ಈ ಚಡ್ಡಿ ಕಾಪಾಡುತ್ತದೆ. ಆರೆಸ್ಸೆಸ್‍ನಂಥ ಸಂಘಟನೆ ಇರದಿದ್ದರೆ ನಿಮ್ಮ ಚಡ್ಡಿ ಉಳಿಯುತ್ತಿರಲಿಲ್ಲ ಎಂದು ನುಡಿದರು. ಕಾಂಗ್ರೆಸ್ ಇದುವರೆಗೆ ದೇಶದಲ್ಲಿ ಅಧಿಕಾರದಲ್ಲಿ ಇರುತ್ತಿದ್ದರೆ ಅವರವರ ಚಡ್ಡಿಯನ್ನು ಅವರವರೇ ಹುಡುಕಾಡಿ ನೋಡಿಕೊಳ್ಳಬೇಕಾಗುತ್ತಿತ್ತು ಎಂದರು

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಅಂಕಣ