ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗಾಲ್ಫ್ ಕ್ಲಬ್‌ ಆವರಣದ ಶ್ರೀಗಂಧದ ಮರ ಕಳ್ಳತನ: ತಮಿಳುನಾಡಿನ ಗ್ಯಾಂಗ್​ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ

Twitter
Facebook
LinkedIn
WhatsApp
ಗಾಲ್ಫ್ ಕ್ಲಬ್‌ ಆವರಣದ ಶ್ರೀಗಂಧದ ಮರ ಕಳ್ಳತನ: ತಮಿಳುನಾಡಿನ ಗ್ಯಾಂಗ್​ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ

ಆಗಸ್ಟ್ 1ರಂದು ಗಾಲ್ಫ್ ಆವರಣದಲ್ಲಿ ಎರಡು ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿತ್ತು. ಒಂದು ಮರವನ್ನು ಕಡಿದು ಸಾಗಿಸಲಾಗಿತ್ತು. ಆದರೆ ಮತ್ತೊಂದು ಮರವನ್ನು ಕಡಿದು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ ಪೆಕ್ಟರ್ ಶಿವಸ್ವಾಮಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.

ಹಳೇ ಕಳ್ಳರ ವಿಚಾರಣೆ
ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರ ತಂಡ ಯಾರು ಕೃತ್ಯ ಎಸಗಿರಬಹುದೆಂಬ ಲೆಕ್ಕಾಚಾರ ಹಾಕಿದ್ದರು.. ಈ ಹಿಂದೆ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿ ಜೈಲಿಗೆ ಹೊಗಿ ವಾಪಾಸ್ ಬಂದ ಆಸಾಮಿಗಳ ವಿಚಾರಣೆಗೊಳಪಡಿಸಿದ್ದಾರೆ.. ನಂತರ ಆ ವ್ಯಕ್ತಿಗಳನ್ನೇ ಕರೆತಂದು ಮರಗಳನ್ನು ಕಡಿದ ಸ್ಟೈಲ್ ಯಾರದ್ದು ಎನ್ನುವ ಬಗ್ಗೆ ಮಾಹಿತಿ ಕೇಳಿದಾಗ ಆಸಾಮಿಗಳು ತಾವು ಕಂಡಂತ ನಾಲ್ಕೈದು ಮರಗಳ್ಳರ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಶಿವಸ್ವಾಮಿ ತಮಿಳುನಾಡಿನ ಗೊವಿಂದ ಸ್ವಾಮಿ ಅಂಡ್ ಟೀಮ್ ಬೆಂಗಳೂರಿಗೆ ಆಗಸ್ಟ್ 1ರಂದು ಬಂದು ಹೊದ ಬಗ್ಗೆ ಮೊಬೈಲ್ ನ ಟೆಕ್ನಿಕಲ್ ಮಾಹಿತಿಯಿಂದ ಪಕ್ಕ ಮಾಡಿಕೊಳ್ಳುತ್ತಾರೆ. ನಂತರ ಗೊವಿಂದಸ್ವಾಮಿ ಸೇರಿದಂತೆ ಆ ಗ್ಯಾಂಗ್ ನ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಗ್ಯಾಂಗ್​ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಈ ಗ್ಯಾಂಗ್ ನ ಪ್ರಮುಖರಾದ ಗೊವಿಂದಸ್ವಾಮಿ, ಮಾದ, ವೆಂಕಟೇಶ, ರಾಮಚಂದ್ರ, ವಾಸೀಂ ಬೇಗ್, ವರದರಾಜು, ರಾಮಚಂದ್ರಪ್ಪ ಹಾಗೂ ನಂಜೇಗೌಡನನ್ನು ಬಂಧಿಸಿ ಸುಮಾರು 3 ಕೋಟಿ ಮೌಲ್ಯದ 147 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಹಾಗೂ 730 ಕೆ.ಜಿ. ಶ್ರೀಗಂಧದ ಮರದ ತುಂಡನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಂಟು ಮಂದಿಯಲ್ಲಿ ಐವರು ತಮಿಳುನಾಡಿನವರು ಮತ್ತು ಉಳಿದ ಮೂವರು ಕರ್ನಾಟಕದವರು.

ಸದ್ಯ ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10 ಪ್ರಕರಣಗಳು ಪತ್ತೆಯಾಗಿವೆ.  ಈ ಆರೋಪಿಗಳು ನಗರದಲ್ಲಿ ಅಷ್ಟೇ ಅಲ್ಲದೇ, ಕಾಡಿನಲ್ಲೂ ತಮ್ಮ ಕೃತ್ಯಗಳನ್ನು ಎಸಗಿರೊದು ಪತ್ತೆಯಾಗಿದೆ.. ಬನ್ನೇರುಘಟ್ಟ ಅರಣ್ಯಕ್ಕೆ ತೆರಳುತಿದ್ದ ಈ ಗ್ಯಾಂಗ್ ಒಂದು ವಾರ ಉಳಿದು ಕೊಂಡು ಮರಗಳನ್ನು ಟಾರ್ಗೆಟ್ ಮಾಡಿ ಕಡಿಯುವ ಕೆಲಸ ಮಾಡುತಿದ್ದರು.. ತನಿಖೆ ವೇಳೆ ಕಾಡಿನಲ್ಲಿ ಈವರೆಗೂ ಸಾವಿರಾರು ಮರಗಳನ್ನು ಕಳವು ಮಾಡಿರೊ ಬಗ್ಗೆ ಮಾಹಿತಿ ಸಿಕ್ಕಿವೆ.

ಆರೋಪಿಗಳೆಲ್ಲರೂ ನಿತ್ಯ ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದು, ಸದಾಶಿವನಗರ, ಜಯನಗರ, ಮಡಿವಾಳ, ಕೆಆರ್ ಪುರಂ, ಯಶವಂತಪುರ, ಕೆಂಗೇರಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆ. ತುಮಕೂರಿನ ಪಾವಗಡ ಸಮೀಪದ ಆಂಧ್ರಪ್ರದೇಶದ ಮಡಕಶಿರಾದಲ್ಲಿರುವ ಶ್ರೀಗಂಧದ ಎಣ್ಣೆ ತಯಾರಿಕಾ ಕಾರ್ಖಾನೆಯಿಂದ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಶ್ರೀಗಂಧವನ್ನು ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ