ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

Twitter
Facebook
LinkedIn
WhatsApp
ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್

ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ (Air India) ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಿದೆ.

ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು (Women’s) ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. 

ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ.

ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ