ಕಾಸರಗೋಡು: ಕಣಜದ ಹುಳು ದಾಳಿ - ಕಾರ್ಮಿಕ ಮೃತ್ಯು
Twitter
Facebook
LinkedIn
WhatsApp
ಕಾಸರಗೋಡು, ಏ : ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕರೋರ್ವರು ಮೃತಪಟ್ಟ ದಾರುಣ ಘಟನೆ ಏ.13ರ ಬುಧವಾರ ಮಧ್ಯಾಹ್ನ ಚಿತ್ತಾರಿಕಾಲ್ ನಲ್ಲಿ ನಡೆದಿದೆ.
ಚಿತ್ತಾರಿಕಾಲ್ ಕಂಬಲ್ಲೂರಿನ ಬಿಟೋ ಜೋಸೆಫ್ (35) ಮೃತಪಟ್ಟವರು. ಸಂಬಂಧಿಕ ರೋರ್ವರ ಮನೆಯಲ್ಲಿ ಈ ಘಟನೆ ನಡೆದಿದೆ.
ಪೈಂಟಿಂಗ್ ಕೆಲಸದ ಸಂದರ್ಭದಲ್ಲಿ ಜೋಸೆ ಫ್ ರವರ ಮೇಲೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಮನೆಯವರು ಹಾಗೂ ಪರಿಸರವಾಸಿಗಳು ಪರಿಯಾರಂ ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.