ಬುಧವಾರ, ಮೇ 8, 2024
ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾವೇರಿ ಸೀಮೆಯನ್ನು ಜೋಡಿಸಿದ ಯಾತ್ರೆ ; ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್ ‘ಹವಾ’

Twitter
Facebook
LinkedIn
WhatsApp
ಕಾವೇರಿ ಸೀಮೆಯನ್ನು ಜೋಡಿಸಿದ ಯಾತ್ರೆ ; ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್ ‘ಹವಾ’

ಮೈಸೂರು: ಮೊಳಗಿದ ‘ಜೋಡೊ ಜೋಡೊ ಭಾರತ್‌ ಜೋಡೊ’ ಘೋಷಣೆ, ಹಾರಾಡಿದ ಕಾಂಗ್ರೆಸ್‌ ಬಾವುಟಗಳು, ನಾಯಕರ ಫ್ಲೆಕ್ಸ್‌-ಕಟೌಟ್‌ಗಳ ಭರಾಟೆ, ಸಾವಿರಾರು ಕಾರ್ಯಕರ್ತರು ಭಾಗಿ, ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್‌ ಹವಾ. ಮಸೀದಿ, ಚರ್ಚ್ ಹಾಗೂ ಮಂದಿರಕ್ಕೆ ಭೇಟಿ.
ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ’ ಯಾತ್ರೆಯು ನಗರದಲ್ಲಿ ಸಂಚರಿಸಿದಾಗ ಕಂಡುಬಂದ ವಿಶೇಷಗಳಿವು. ವಿವಿಧ ಜನಪದ ಕಲಾತಂಡಗಳು ಮೆರುಗು ಹೆಚ್ಚಿಸಿದವು. ಅಲ್ಲಲ್ಲಿ ಸಮಾಜದ ವಿವಿಧ ವರ್ಗದವರಿಗೆ ರಾಹುಲ್‌ ಜೊತೆಯಲ್ಲಿ ನಡೆಯುವುದಕ್ಕೆ ಪಕ್ಷದವರು ಅವಕಾಶ ಮಾಡಿಕೊಡುತ್ತಿದ್ದರು. ಹೀಗೆ ಅವಕಾಶ ಪಡೆದವರು ಫೋಟೊ ತೆಗೆಸಿಕೊಂಡು ಪುಳಕ ಅನುಭವಿಸಿದರು. ಯುವಕರು, ವಿದ್ಯಾರ್ಥಿನಿಯರು, ಕಾರ್ಯಕರ್ತರು ಹಾಗೂ ಮುಖಂಡರು ನಾಯಕರೊಂದಿಗೆ ಮೊದಲ ಸಾಲಿನಲ್ಲಿ ಸಾಗಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ರಾಜ್ಯದಲ್ಲಿ ನಾಲ್ಕನೇ ದಿನವಾದ ಸೋಮವಾರ ಕಾವೇರಿ ಸೀಮೆಯನ್ನು ಕಾರ್ಯಕರ್ತರು ನಡಿಗೆಯೊಂದಿಗೆ ಜೋಡಿಸಿದರು. ಜಿಲ್ಲೆಯ ನಂಜನಗೂಡು ತಾಲ್ಲೂಕಿನಿಂದ ಬಂದು ಇಲ್ಲಿ ತಂಗಿದ್ದ ಯಾತ್ರೆಯು ಸೋಮವಾರ ಬೆಳಿಗ್ಗೆ 6.20ರ ಸುಮಾರಿಗೆ ಹಾರ್ಡಿಂಜ್‌ ವೃತ್ತದಿಂದ ಪ್ರಾರಂಭಗೊಂಡಿತು. ಜಯಚಾಮರಾಜೇಂದ್ರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಮುಖಂಡರು, ಅಶೋಕ ರಸ್ತೆಯಲ್ಲಿ ಹೆಜ್ಜೆ ಹಾಕಿದರು. ಮಾರ್ಗ ಮಧ್ಯದಲ್ಲಿ ಹಾಸಮ್ ಮಸೀದಿಗೆ ತೆರಳಿದ ರಾಹುಲ್‌ ಅವರನ್ನು ಅಲ್ಲಿನ ಮುಖಂಡರು ಸಂಭ್ರಮದಿಂದ ಬರಮಾಡಿಕೊಂಡರು.

ಬಳಿಕ ವಿಶ್ವವಿಖ್ಯಾತ ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ ನೀಡಿದ ರಾಹುಲ್, ಅದರ ವಾಸ್ತುಶಿಲ್ಪಕ್ಕೆ ಮಾರು ಹೋದರು. ಅಲ್ಲಿಂದ, ಅಶೋಕ ರಸ್ತೆಯಲ್ಲಿ ಸಾಗಿದ ಯಾತ್ರೆಯು ಫೌಂಟೇನ್‌ ವೃತ್ತ-ಎಲ್‌ಐಸಿ ವೃತ್ತದ ಮೂಲಕ ಬನ್ನಿಂಟಪ ಮುಖ್ಯ ರಸ್ತೆ ತಲುಪಿತು. ಜೆಎಸ್‌ಎಸ್‌ ವೈದ್ಯಕೀಯ ಕಾಲೇಜುಗಳ ಎದುರಿನ ರಸ್ತೆಯಲ್ಲಿ ಸಾಗಿ ಮಣಿಪಾಲ್‌ ಆಸ್ಪತ್ರೆಯ ಮುಂದೆ ಹಾದು ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಲುಪಿತು. ಮಣಿಪಾಲ್ ಆಸ್ಪತ್ರೆಯ ಎದುರು ಮುಸ್ಲಿಂ, ಕ್ರೈಸ್ತ ಸಮಾಜದ ಮುಖಂಡರು ಮತ್ತು ಪ್ರತಿನಿಧಿಗಳು ರಾಹುಲ್‌ಗೆ ಹೂವು ನೀಡಿ ಸ್ವಾಗತ ಕೋರಿದರು.

ಕೆ.ಆರ್.ಮಿಲ್ ಕಾಲೊನಿ, ಸಿದ್ದಲಿಂಗಪುರ, ನಾಗನಹಳ್ಳಿ ಗೇಟ್ ಮೂಲಕ ಕಳಸ್ತವಾಡಿ ಗೇಟ್‌ ಬಳಿ ಮಂಡ್ಯ ಜಿಲ್ಲೆಯನ್ನು ಯಾತ್ರೆಯು ಪ್ರವೇಶಿಸಿತು. ಮಾರ್ಗ ಮಧ್ಯದಲ್ಲಿ ರಾಹುಲ್ ಮತ್ತು ನಾಯಕರು ನಾಗನಹಳ್ಳಿ ಗೇಟ್‌ನಲ್ಲಿರುವ ‘ಕಸ್ತೂರಿ ನಿವಾಸ’ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದರು. ಯಾತ್ರಿಗಳು ಶ್ರೀರಂಗಪಟ್ಟಣದ ಪರಿವರ್ತನ ಶಾಲೆಯವರೆಗೂ ನಡೆದು ವಿಶ್ರಾಂತಿ ಪಡೆದರು. ಉಪಾಹಾರದ ನಂತರ ಪಾದಯಾತ್ರೆ ಮುಂದುವರಿಸಿದ ರಾಹುಲ್ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಸಹ ಯಾತ್ರಿಕರನ್ನು ಕೂಡಿಕೊಂಡರು.

ಕಾವೇರಿ ಸೀಮೆಯನ್ನು ಜೋಡಿಸಿದ ಯಾತ್ರೆ ; ಸಾಂಸ್ಕೃತಿಕ ನಗರಿಯಲ್ಲಿ ರಾಹುಲ್ ‘ಹವಾ’

ಬಳಿಕ ವಾಹನದಲ್ಲಿ ಮರಳಿದ ಅವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ನಂತರ ವಾಹನದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿಗೆ ತೆರಳಿ ಪಾದಯಾತ್ರೆ ಮುಂದುವರಿಸಿದರು.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಮುಖಂಡರಾದ ಪಿ.ಚಿದಂಬರಂ, ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಶಾಸಕರಾದ ಕೃಷ್ಣ ಭೈರೇಗೌಡ, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಎಚ್‌.ಪಿ.ಮಂಜುನಾಥ್, ಲಕ್ಷ್ಮಿ ಹೆಬ್ಬಾಳಕರ, ಸಲೀಂ ಅಹಮದ್, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮೊದಲಾದವರು ಹೆಜ್ಜೆ ಹಾಕಿದರು. ಮಂಡ್ಯ ಜಿಲ್ಲೆ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಕೂಡಿಕೊಂಡರು, ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ