ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಲುಗಳ ಸ್ವಾಧೀನ ಕಳೆದುಕೊಂಡ ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ

Twitter
Facebook
LinkedIn
WhatsApp
ಕಾಲುಗಳ ಸ್ವಾಧೀನ ಕಳೆದುಕೊಂಡ ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ವರ

ವಧುವನ್ನು ಎತ್ತಿಕೊಂಡೇ ಸಪ್ತಪದಿ ತುಳಿದ ಅಪರೂಪದ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮಹಾವೀರ್ ಸಿಂಘ್​ ಮತ್ತು ಪಟಾನ್​ನ ರೀನ್​ಲಾಬಾ ಅವರ ನಿಶ್ಚಿತಾರ್ಥ ನಡೆದಿತ್ತು. ಆದರೆ ರೀನ್​ಲಾಬಾ ಅಪಘಾತಕ್ಕೆ ಒಳಗಾದರು. ಇದರಿಂದ ಅವರ ಕೆಳಭಾಗ ಪಾರ್ಶ್ವವಾಯುವಿಗೆ ತುತ್ತಾಗಿ ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಆಗ ತನ್ನ ಕುಟುಂಬ ಈ ಮದುವೆಯನ್ನು ನಿರಾಕರಿಸಿದರೂ ಮಹಾವೀರ್ ಮಾತ್ರ ರೀನ್​ಲಾಬಾ ಅವರೊಂದಿಗೇ ಮದುವೆಯಾಗಬೇಕೆಂದು ಹಠ ಹಿಡಿದರು. ಇದೀಗ ಅವರ ಮದುವೆ ಯಶಸ್ವಿಯಾಗಿ ನೆರವೇರಿದೆ.

ಇವರಿಬ್ಬರ ನಿಶ್ಚಿತಾರ್ಥ ಪರಸ್ಪರ ಕುಟುಂಬದ ಒಪ್ಪಿಗೆಯ ಮೇರೆಗೆ ಗುಜರಾತ್​ನ ಪಟಾನ್​ನಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು. ನಂತರ ಎರಡೂ ಕುಟುಂಬದವರ ಬಾಂಧವ್ಯವೂ ವೃದ್ಧಿಸಿತು. ಆರು ತಿಂಗಳ ಹಿಂದೆ ಮದುವೆಯ ದಿನಾಂಕವನ್ನು ಗೊತ್ತುಪಡಿಸಲಾಯಿತು. ಆದರೆ, ರೀನ್​ಲಾಬಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ಧಾಗ ಅಕಸ್ಮಾತ್ ಆಗಿ ಬಿದ್ದರು. ಆಗ ಬೆನ್ನುಹುರಿಗೆ ತೀವ್ರ ಗಾಯವಾಯಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ದೇಹದ ಕೆಳಭಾಗಕ್ಕೆ ಚಿಕಿತ್ಸೆ ಫಲಿಸಲಿಲ್ಲ.

ಮಹಾವೀರ್​ನ ಕುಟುಂಬದವರು ಮದುವೆ ನಿಲ್ಲಿಸುವುದಾಗಿ ಹೇಳಿದಾಗ ರೀನ್​ಲಾಬಾನ ಪೋಷಕರು ಚಿಂತೆಗೀಡಾದರು. ಆದರೆ ಮಹಾವೀರ್​ ತನ್ನ ಹುಟ್ಟುಹಬ್ಬದ ದಿನ ಅಂದರೆ ಅಕ್ಟೋಬರ್​ 31ರಂದು, ತಾನು ಮದುವೆಯಾಗುವುದಾದರೆ ರೀನ್​ಲಾಬಾರನ್ನೇ ಎಂದರು. ನಂತರ ಡಿಸೆಂಬರ್ 1ರಂದು ತನ್ನ ಕುಟುಂಬದವರ ವಿರೋಧದ ಮಧ್ಯೆಯೇ ಅಹಮದಾಬಾದ್​ನಲ್ಲಿ ಮದುವೆಯಾದರು. ಅಂತೂ ರೀನ್​ಲಾಬಾರನ್ನು ಎತ್ತಿಕೊಂಡೇ ಸಪ್ತಪದಿ ತುಳಿದರು ಮಹಾವೀರ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ