ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಗನ ಹತ್ಯೆಗೆ ತಂದೆಯಿಂದ್ಲೇ 10 ಲಕ್ಷ ಸುಪಾರಿ- ವಾಟ್ಸಪ್ ಫೋಟೋದಿಂದ ತಗ್ಲಾಕ್ಕೊಂಡ ಅಪ್ಪ

Twitter
Facebook
LinkedIn
WhatsApp
ಮಗನ ಹತ್ಯೆಗೆ ತಂದೆಯಿಂದ್ಲೇ 10 ಲಕ್ಷ ಸುಪಾರಿ- ವಾಟ್ಸಪ್ ಫೋಟೋದಿಂದ ತಗ್ಲಾಕ್ಕೊಂಡ ಅಪ್ಪ

ಹುಬ್ಬಳ್ಳಿ: ಮಗ ತಪ್ಪು ಮಾಡಿದರೆ ತಂದೆಯಾದಾತ ಅಬ್ಬಬ್ಬಾ ಎಂದರೆ ಬೈದು ಬುದ್ಧಿ ಹೇಳಬಹುದು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಾಲ್ಕು ತದುಕಿ ತಪ್ಪು ತಿದ್ದಿ-ತೀಡಬಹುದು. ದೀರ್ಘಕ್ಕೆ ಹೋದರೆ ಮನೆಯಿಂದ ಹೊರ ಹಾಕಬಹುದು. ಆದರೆ ಹುಬ್ಬಳ್ಳಿಯ ಈ ಉದ್ಯಮಿ ಮಾಡಿರೋ ಕುಕೃತ್ಯಕ್ಕೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಹೌದು. ಹುಬ್ಬಳ್ಳಿ (Hubballi) ಯ ಖ್ಯಾತ ಉದ್ಯಮಿ ಭರತ್ ಜೈನ್ ತನ್ನ ಮಗ ಅಖಿಲ್ ಜೈನ್ ನಿನ್ನೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಕಳೆದ ಮೂರು ದಿನಗಳಿಂದ ಪೊಲೀಸರು ಹುಡುಕಾಡುತ್ತಿದ್ದ ಶವ, ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಸುಪಾರಿ ಕಿಲ್ಲರ್ಸ್ ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ದೇವಿಕೊಪ್ಪ ಗ್ರಾಮದ ಹೊರವಲಯದಲ್ಲಿ ಅಖಿಲ್ ಜೈನ್ ಶವ ಹೂತು ಹಾಕಿದ್ದಾರೆ. ಮಗನ ಕೊಲೆಗೆ ತಂದೆ ಭರತ್ ಜೈನ್ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಸುಪಾರಿ ಕಿಲ್ಲರ್ಸ್ ಕೊಲೆ ಮಾಡಿ ಭರತ್ ಜೈನ್ ವಾಟ್ಸಪ್‍ (Whatsapp) ಗೆ ಒಂದು ಫೋಟೋ ಕಳಿಸಿದ್ರು. ಅದರಿಂದಲೇ ಭರತ್ ಜೈನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ.

ಫೋಟೋ ಜಾಡು ಹಿಡಿದು ಹೊರಟ ಪೊಲೀಸರಿಗೆ ಶವ ಕಬ್ಬಿನ ಗದ್ದೆಯಲ್ಲಿರೋದು ಪತ್ತೆಯಾಗಿದೆ. ವಾಟ್ಸಪ್‍ಗೆ ಬಂದಿರೋ ಫೊಟೋದ ಗುರುತು ಹಾಗೂ ಅಲ್ಲಿ ಗುಂಡಿ ಅಗೆದಿರೋ ಗುರುತುಗಳಿಂದ ಶವ ಇಲ್ಲೇ ಹೂತಿದ್ದಾರೆ ಅನ್ನೋದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಹುಬ್ಬಳ್ಳಿಯ ಹಿರಿಯ ಅಧಿಕಾರಿಗಳ ಟೀಮ್ ಕಬ್ಬಿನ ಗದ್ದೆ ತುಂಬಾ ಸರ್ಪಗಾವಲು ಹಾಕಿದೆ. ಇಂದು ಗುಂಡಿಯಿಂದ ಶವ ಹೊರ ತೆಗೆಯಲಿದ್ದಾರೆ.

ಕುಡಿತದ ದಾಸನಾಗಿದ್ದ ಅಖಿಲ್ ಜೈನ್: ತಂದೆ ಭರತ್ ಜೈನ್ ಸೇರಿ ಐವರ ವಿರುದ್ಧ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಭರತ್ ಜೈನ್ ಮಾಹದೇವ ನಾಲವಾಡ್, ಸಲೀಮ್ ಸಲಾವುದ್ದೀನ್, ರೆಹಮಾನ್ ಹಾಗೂ ಓರ್ವ ಅಪರಿಚಿತನ ವಿರುದ್ಧ ದೂರು ದಾಖಲಾಗಿದೆ. ಭರತ್ ಜೈನ್ ಮಗ ಅಖಿಲ್ ಕುಡಿದು ಬಂದು ತಂದೆಗೆ ಕೊಲೆ ಬೆದರಿಕೆ ಹಾಕಿದ್ದನಂತೆ ಅಲ್ಲದೆ ನಿತ್ಯ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಸುಪಾರಿ ಕೊಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಭರತ್ ಜೈನ್ (Businessman Bharat Jain) ಹೆಸರಾಂತ ಉದ್ಯಮಿ, ಮಗನ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ ಅನ್ನೋದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಇನ್ನೊಂದು ಕಡೆ ಅಖಿಲ್ ಕೊಲೆಗೆ ಕ್ಯಾಸಿನೋ ಕಾರಣ ಎನ್ನಲಾಗಿದೆ. ಯಾಕಂದ್ರೆ ಕ್ಯಾಸಿನೋದಲ್ಲಿ ಸುಮಾರು ಐದರಿಂದ ಆರು ಕೋಟಿ ಅಖಿಲ್ ಸಾಲ ಮಾಡಿದ್ದ. ಸಾಲಗಾರರ ಕಿರಿಕಿರಿ ಜಾಸ್ತಿಯಾಗಿತ್ತು ಅನ್ನೋ ಅನುಮಾನವೂ ಇದೆ. ಇದಲ್ಲದೆ ಅಖಿಲ್ ಡ್ರಗ್ ಅಡಿಕ್ಟ್ ಆಗಿದ್ದ ಅನ್ನೋ ಮಾತುಗಳು ಕೇಳಿ ಬರ್ತಿದ್ದು, ಮರ್ಯಾದೆಗೆ ಅಂಜಿ ಭರತ್ ಜೈನ್ ಮುಂದೆ ನಿಂತು ಮಗನನ್ನ ಕೊಲೆ ಮಾಡಿದ್ನಾ ಅನ್ನೋದು ಅನುಮಾನ. ಆದರೆ ಪೊಲೀಸರು ಸುಪಾರಿ ಕೊಲೆ ಎಂದು ದಾಖಲಿಸಿಕೊಂಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಕಳೆದ ಮೂರು ದಿನಗಳಿಂದಲೂ ಅಖಿಲ್ ಜೈನ್ ಕೊಲೆ ಪ್ರಕರಣ ಹುಬ್ಬಳ್ಳಿಯಲ್ಲಿ ಸದ್ದು ಮಾಡ್ತಿದೆ. ಇದುವರೆಗೂ ಪೊಲೀಸ್ ಅಧಿಕಾರಿಗಳು ಯಾವುದನ್ನೂ ಬಹಿರಂಗ ಪಡಿಸಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ