ಕೋರಿ ರೊಟ್ಟಿ ಮಂಗಳೂರು-ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಜನಪ್ರಿಯ ಖಾದ್ಯ. ಇದರ ರುಚಿಗೆ ಮರುಳಾಗದವರು ಯಾರು ಇಲ್ಲ. ಸಿನಿಮಾ ನಟ-ನಟಿಯರಿಂದ ಹಿಡಿದು ರಾಷ್ಟ್ರ- ವಿದೇಶದಿಂದಲೂ ಜನಮೆಚ್ಚುಗೆ ಗಳಿಸಿದೆ. ಅಕ್ಕಿ ರೊಟ್ಟಿ ಅನ್ನು ಸಾಮಾನ್ಯವಾಗಿ ಚಿಕನ್ ಗ್ರೇವಿ ಯೊಂದಿಗೆ ಸವಿಯುತ್ತಾರೆ. ಇದು ತುಂಬಾ ತೆಳುವಾಗಿದ್ದು, ರುಚಿಕರವಾಗಿರುತ್ತದೆ. ಮದುವೆ, ಮದುರಂಗಿ, ಹಬ್ಬದ ದಿನದಲ್ಲಂತೂ ಎಲ್ಲಿಲ್ಲದ ಬೇಡಿಕೆ.
ಆದರೆ ತಿಳುವಾದ ಅಕ್ಕಿ ರೊಟ್ಟಿ ತಯಾರಿಸಲು ನುರಿತ ಕೆಲಸಗಾರರ ಕೊರತೆ ಇತ್ತೀಚಿಗೆ ವಿಪರೀತ ಏರಿದ್ದು ಅಧಿಕ ಉಷ್ಣತೆಯಲ್ಲಿ ಕೆಲಸ ಮಾಡಲು ಕೆಲಸಗಾರರು ಹಿಂದೇಟು ಹಾಕುತ್ತಿದ್ದು ಇದಕ್ಕೆ ಕಾರಣ. ಇತ್ತೀಚಿಗೆ ಕ್ಯಾಶ್ಯೂ ಸೇಲ್ಸ್ (ಗೇರು ಬೀಜದ ಸಿಪ್ಪೆ), ಪ್ಲಾಸ್ಟಿಕ್, ಅಕ್ಕಿ ಹಾಗೂ ಇತರ ಕಚ್ಚಾವಸ್ತುಗಳ ದರ ವಿಪರೀತ ಏರಿದ್ದು, ಸಾಗಟದ ವೆಚ್ಚ ಉತ್ಪಾದನಾ ವೆಚ್ಚಕ್ಕಿಂತ ಅಧಿಕವಾಗಿರುವುದು ಉದ್ಯಮ ರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚಿಗೆ ಉಡುಪಿ- ದಕ್ಷಿಣ ಕನ್ನಡ ಅಕ್ಕಿ ರೊಟ್ಟಿ ತಯಾರಿಕ ಸಂಘಟನೆಯೊಂದು ಸ್ಥಾಪಿತವಾಗಿದ್ದು ನಷ್ಟದಿಂದ ನಡೆಯುತ್ತಿದ್ದ ವ್ಯವಹಾರಕ್ಕೆ ಚೇತರಿಕೆ ನೀಡುವ ಸಲುವಾಗಿ ದರ ಏರಿಕೆಯ ಬಗ್ಗೆ ಚಿಂತಿಸಲಾಗಿದೆ. ಅದರಂತೆ ಮಾರ್ಚ್ ತಿಂಗಳ 15 ನೇ ತಾರೀಖಿ ನಿಂದ ಕರಾವಳಿಯಾದ್ಯಂತ ಅಕ್ಕಿ ರೊಟ್ಟಿಯ ದರ ಏರಿಕೆಯಾಗಲಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist