ಬುಧವಾರ, ಮೇ 15, 2024
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಂಬಳಕ್ಕೆ ಒತ್ತು ಕೊಡಿ; ಮೇಲ್ಮನೆಯಲ್ಲಿ ಕರಾವಳಿ ಶಾಸಕರ ಆಗ್ರಹ

Twitter
Facebook
LinkedIn
WhatsApp
ಕಂಬಳಕ್ಕೆ ಒತ್ತು ಕೊಡಿ; ಮೇಲ್ಮನೆಯಲ್ಲಿ ಕರಾವಳಿ ಶಾಸಕರ ಆಗ್ರಹ

ಬೆಂಗಳೂರು: ಮೇಲ್ಮನೆಯಲ್ಲಿ ಮಂಗಳವಾರ ಇಡೀ ಸದನ ಕರಾವಳಿ ಸಂಸ್ಕೃತಿಯ ಪ್ರತೀಕ “ಕಂಬಳ’ ಪರ ಧ್ವನಿಯಾಯಿತು. ಈ ಅಪ್ಪಟ ಗ್ರಾಮೀಣ ಕ್ರೀಡೆ ಮತ್ತು ಓಟಗಾರರ ನೆರವಿಗೆ ಧಾವಿಸುವಂತೆ ಸಭಾಪತಿಗಳಾದಿಯಾಗಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಸರಕಾರವನ್ನು ಒತ್ತಾಯಿಸಿದರು.ಆರಂಭದಲ್ಲಿ ನಿಯಮ 330ರ ಅಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿಷಯ ಪ್ರಸ್ತಾವಿಸಿ, ಕಂಬಳಕ್ಕೆ ತನ್ನದೇ ಆದ ಇತಿಹಾಸವಿದೆ. ಕರಾವಳಿಯಲ್ಲಿ ಕೋಣಗಳು ಕೃಷಿ ಬದುಕಿನ ಅವಿಭಾಜ್ಯ ಅಂಗ. ಕಂಬಳದ ಕೋಣಗಳನ್ನು ಸಾಕುವುದು ಪ್ರತಿಷ್ಠೆ ಎಂದರು.
ಜಾತಿ, ಧರ್ಮ ಮರೆತು ನಡೆಯುವ ಕ್ರೀಡೆ ಎನ್ನುವುದೇ ಕಂಬಳದ ವಿಶೇಷ. ಇಂದು ವಾರ್ಷಿಕ 200 ಸಾಂಪ್ರದಾಯಿಕ ಮತ್ತು 20 ಆಧುನಿಕ ಕಂಬಳಗಳು ನಡೆಯುತ್ತಿವೆ. ಇವುಗಳ ವೀಕ್ಷಣೆಗೆ 75 ಸಾವಿರದಿಂದ ಒಂದು ಲಕ್ಷ ಜನ ಸೇರುತ್ತಾರೆ. ಆಧುನಿಕ ಕಂಬಳದಲ್ಲಿ ಭಾಗವಹಿಸುವ ಒಂದು ಜೋಡಿ ಕೋಣಗಳ ಸಾಕಾಣಿಕೆ ವೆಚ್ಚ ವಾರ್ಷಿಕ 10-12 ಲಕ್ಷ ರೂ. ಆಗುತ್ತದೆ. ಕಂಬಳ ಓಟ ಗಾರರು ಉಸೇನ್‌ ಬೋಲ್ಟ್ ದಾಖಲೆಯನ್ನು ಸರಿಗಟ್ಟಿದ ಉದಾಹರಣೆಗಳೂ ಇವೆ. ಸರಕಾರ ನೆರವಿಗೆ ಧಾವಿಸಬೇಕಿದೆ ಎಂದು ಆಗ್ರಹಿಸಿದರು.

ಕಂಬಳ ಆಯೋಜನೆಗೆ ಸರಕಾರದಿಂದ ಸಹಾಯ ಧನ ನೀಡಬೇಕು. ಕಂಬಳದ ಓಟಗಾರ ರಿಗೆ ತರಬೇತಿ, ಕೌಶಲಾಭಿವೃದ್ಧಿಗೆ ವಾರ್ಷಿಕ ಕನಿಷ್ಠ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡ ಬೇಕು. ಕರಾವಳಿಯ ಎರಡು ಜಿಲ್ಲೆಗಳಿಗೆ ಕಂಬಳ ಆಯೋಜಕರನ್ನು ಒಳಗೊಂಡ ಕಂಬಳ ಸಮಿತಿ ರಚಿಸಬೇಕು. ಮೂಡುಬಿದರೆಯಲ್ಲಿ ಕಂಬಳ ಮ್ಯೂಸಿಯಂ ಸ್ಥಾಪನೆಗೆ 2 ಕೋ.ರೂ. ಮೀಸಲಿಡಬೇಕು. ಓಟಗಾರರಿಗೆ ವಿಮೆ, ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ವೀಕ್ಷಕ ರಿಗೆ ಮೂಲಸೌಕರ್ಯ ಹಾಗೂ ಕಂಬಳ ತಾಣಗಳಿಗೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಕಂಬಳಕ್ಕೆ ಪ್ರೋತ್ಸಾಹ ಸರಕಾರದ ಕರ್ತವ್ಯ
ಕಂಬಳ ಮಾತ್ರ ಅಲ್ಲ; ಕರಾವಳಿ ಎಂದರೆ ಯಕ್ಷಗಾನ, ಕೋಳಿ ಅಂಕ, ಪಾಡªನ ಸೇರಿದಂತೆ ಹಲವು ಸಂಸ್ಕೃತಿಗಳ ಸಮ್ಮಿಲನ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ನಶಿಸಿ ಹೋಗುತ್ತಿವೆ. ಇವುಗಳನ್ನು ಉಳಿಸುವುದು ಸರಕಾರದ ಕರ್ತವ್ಯ ಎಂದು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ದನಿಗೂಡಿಸಿದರು.

ಕಂಬಳವನ್ನು ದಸರಾ ಕ್ರೀಡಾಕೂಟದಲ್ಲಿ ಸೇರಿಸಬೇಕು. ಮಂಡ್ಯ, ಮೈಸೂರು ಸುತ್ತ ಭತ್ತದ ಗದ್ದೆಗಳಿವೆ. ಸರಕಾರ ಮನಸ್ಸು ಮಾಡಿದರೆ ಅಲ್ಪಾವಧಿಯಲ್ಲೇ ಕಂಬಳಕ್ಕೆ ಅಗತ್ಯವಿರುವ ಕೆಸರು ಗದ್ದೆ ಗಳನ್ನು ತಯಾರು ಮಾಡಬಹುದು ಎಂದು ಉಪನಾಯಕ ಡಾ| ಕೆ. ಗೋವಿಂದರಾಜು ಅಭಿಪ್ರಾಯ ಪಟ್ಟರು. ಸರಕಾರವು ಪ್ರತೀ ಕಂಬಳಕ್ಕೆ 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ನ ಹರೀಶ್‌ ಕುಮಾರ್‌ ಆಗ್ರಹಿಸಿದರು.

ಕಂಬಳಕ್ಕೆ ಪ್ರೋತ್ಸಾಹ ನೀಡುವುದು ಸರಕಾರದ ಕರ್ತವ್ಯ ಎಂದು ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್‌ ಹೇಳಿದರು. ಕಂಬಳದ ಆಯೋಜನೆ ದುಬಾರಿಯಾಗಿದೆ. ಇದಕ್ಕೆ ಸರಕಾರ ಸಹಾಯ ಮಾಡಬೇಕು ಎಂದು ಜೆಡಿಎಸ್‌ನ ಭೋಜೇಗೌಡ ಒತ್ತಾಯಿಸಿ ದರು. ಕಂಬಳದ ಕೋಣಗಳನ್ನು, ಅಂಕದ ಕೋಳಿಗಳನ್ನು ಸಾಕುವುದು ಕರಾವಳಿ ಭಾಗದ ಕುಟುಂಬಗಳಿಗೆ ಪ್ರತಿಷ್ಠೆಯಾಗಿದೆ. ಈ ಕ್ರೀಡೆಗಳು ಉಳಿಯಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಶಿಸಿದರು.

ಅಧಿವೇಶನ ಮುಗಿದೊಡನೆ ಸಭೆ
ಕಂಬಳವನ್ನು ಪ್ರೋತ್ಸಾಹಿಸಲು ಸಭಾಪತಿ ಯವರ ನೇತೃತ್ವದಲ್ಲಿ ಸಂಬಂಧಪಟ್ಟ ಮೇಲ್ಮನೆ ಸದಸ್ಯರು ಮತ್ತು ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ| ಕೆ.ಸಿ. ನಾರಾಯಣಗೌಡ ತಿಳಿಸಿದರು.

ನಿಯಮ 330ರಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಪ್ರಸ್ತಾವಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಕಂಬಳಕ್ಕೆ ಹೆಚ್ಚು ಶಕ್ತಿ ತುಂಬಲು ಸರಕಾರ ಬದ್ಧವಾಗಿದೆ ಎಂದರು. ಕಂಬಳಕ್ಕೆ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ.

“ಕರ್ನಾಟಕ ಕ್ರೀಡಾ ರತ್ನ’, “ಕ್ರೀಡಾ ಪೋಷಕ’ ಪ್ರಶಸ್ತಿಗಳನ್ನು ಕಂಬಳದ ಬೆಳವಣಿಗೆಗೆ ಗಣನೀಯ ಕೊಡುಗೆ ಕೊಟ್ಟಿರುವವರಿಗೆ ನೀಡಿ ಗೌರವಿಸ ಲಾಗುತ್ತಿದೆ. ಮೂಡುಬಿದಿರೆಯಲ್ಲಿ “ಕೋಟಿ-ಚೆನ್ನಯ’ ಜೋಡುಕರೆ ನಿರ್ಮಾಣ ಮಾಡಲಾಗಿದ್ದು, ವೀಕ್ಷಕರ ಗ್ಯಾಲರಿಯ ಸಹಿತ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳದ 5 ಎಕರೆಯಲ್ಲಿ “ಲವ-ಕುಶ’ ಕಂಬಳ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ವಿವರಿಸಿದರು

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ