ಶುಕ್ರವಾರ, ಮೇ 17, 2024
ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಐದೂ ರಾಜ್ಯಗಳಲ್ಲಿ ಬಿಜೆಪಿಯದ್ದೇ ಗೆಲುವು: ಪ್ರಧಾನಿ ಮೋದಿ ವಿಶ್ವಾಸ

Twitter
Facebook
LinkedIn
WhatsApp
ಐದೂ ರಾಜ್ಯಗಳಲ್ಲಿ ಬಿಜೆಪಿಯದ್ದೇ ಗೆಲುವು: ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ:  ಬಿಜೆಪಿ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರ ಜತೆಗೆ ಕಾಂಗ್ರೆಸ್‌ನಿಂದ ಪಂಜಾಬ್‌ನನ್ನು ಬಿಜೆಪಿ ಕಿತ್ತುಕೊಳ್ಳಲಿದೆ ಎಂದು ಹೇಳಿದರು.
ಸುದ್ದಿಸಂಸ್ಥೆ ಎಎನ್‌ಐಗೆ ನೀಡಿರುವ ಸಂದರ್ಶನ ನೀಡಿರುವ ಅವರು, ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತೆ ಚುನಾಯಿತವಾಗುವುದಿಲ್ಲ ಎಂಬ ನಿಲುವನ್ನು ರಾಜ್ಯದ ಜನರು ಯಾವತ್ತೋ ಕಸದಬುಟ್ಟಿಗೆ ಎಸೆದಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂಬದು ಈ ಬಾರಿ ಸುಳ್ಳಾಗಲಿದೆ ಎಂದರು.


ವಂಶಾಡಳಿತವು ಪ್ರಾಜಾಪ್ರಭುತ್ವದ ದೊಡ್ಡ ಶತ್ರು. ಒಂದೇ ಕುಟುಂಬದ ಹಲವು ತಲೆಮಾರುಗಳು ಅಧಿಕಾರದಲ್ಲಿದ್ದರೆ ಅಲ್ಲಿ ವಂಶ ಪರಾಂಪರ್ಯ ವಿರುತ್ತದೆ ಹೊರತು ಕ್ರಿಯಾಶೀಲತೆ ಇರುವುದಿಲ್ಲ. ಜಮ್ಮು- ಕಾಶ್ಮೀರ, ಹರಿಯಾಣ, ಜಾರ್ಖಂಡ್‌, ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಇಂಥ ರಾಜಕಾರಣಕ್ಕೆ ವಿಪುಲ ಉದಾಹರಣೆಗಳಿವೆ ಎಂದರು.
ಚುನಾವಣೆಗಳು ಮುಕ್ತ ವಿಶ್ವವಿದ್ಯಾಲಯದಂತೆ. ಇವುಗಳಿಂದ ಅನೇಕ ಸಂಗತಿಗಳು ಕಲಿಯಲು ಸಿಗುತ್ತದೆ. ಆತ್ಮಾವಲೋಕನಕ್ಕೆ ಅವಕಾಶ ಸಿಗುತ್ತಿದೆ. ಆಯ್ಕೆಯಾದ ಪಕ್ಷಗಳು ವ್ಯಾಪಾರ ಮಾಡಬಾರದು ಬಡಜನರಿಗೆ ಅನುಕೂಲವಾಗುಂತಹ ಕೆಲಸ ಮಾಡಬೇಕು ಎಂದರು.


ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಅಗುತ್ತದೆ. ತನಿಖೆ ಸರಿಯಾದ ಜಾಡಿನಲ್ಲೇ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರ ಹಿತಕ್ಕಾಗಿ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದೆವು, ಆದರೆ, ರಾಷ್ಟ್ರ ಹಿತದ ದೃಷ್ಟಿಯಿಂದ ಅವುಗಳನ್ನು ಹಿಂಪಡೆಯಬೇಕಾಯಿತು ಎಂದ ಮೋದಿ, ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದರಲ್ಲಿ ಹುರುಳಿಲ್ಲ. ಅವುಗಳು ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಭ್ರಷ್ಟರನ್ನು ಬಯಲಿಗೆ ತರುತ್ತಿವೆ ಎಂದು ಹೇಳಿದರು.
ಭಂಟಿಡಾದಲ್ಲಿನ ಭದ್ರತಾ ಲೋಪ ಕುರಿತು ನಾನು ಈಗ ಏನೇ ಹೇಳಿಕೆ ನೀಡಿದರೂ ಅದು ಪಂಜಾಬ್‌ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅವರು (ರಾಹುಲ್‌ ಗಾಂಧಿ) ಸಂಸತ್‌ಗೆ ಚಕ್ಕರ್‌ ಹಾಕುತ್ತಾರೆ. ಕೇಳುವ ತಾಳ್ಮೆಯಂತೂ ಮೊದಲೇ ಇಲ್ಲ. ಇಂಥವರಿಗೆ ಹೇಗೆ ಪ್ರತಿಯಿಸಲಿ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು