ಏಷ್ಯಾ ಖೋ-ಖೋ: ಭಾರತ ಪುರುಷ & ಮಹಿಳಾ ತಂಡಗಳು ಚಾಂಪಿಯನ್!
ನವದೆಹಲಿ(ಮಾ.25): 4ನೇ ಏಷ್ಯನ್ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಚಾಂಪಿಯನ್ ಆಗಿವೆ. ಅಸ್ಸಾಂನ ತಮುಲ್‌ಪುರ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ಪುರುಷರ ತಂಡ ನೇಪಾಳ ವಿರುದ್ಧ ಇನ್ನಿಂಗ್‌್ಸ ಹಾಗೂ 6 ಅಂಕಗಳಿಂದ ಗೆದ್ದರೆ, ಮಹಿಳಾ ತಂಡ ನೇಪಾಳವನ್ನು ಇನ್ನಿಂಗ್‌್ಸ ಹಾಗೂ 33 ಅಂಕಗಳಿಂದ ಬಗ್ಗುಬಡಿಯಿತು.
ಸೆಮಿಫೈನಲ್‌ನಲ್ಲಿ ಭಾರತ ಪುರುಷರು ಶ್ರೀಲಂಕಾವನ್ನು 45 ಅಂಕಗಳಿಂದ ಸೋಲಿಸಿದರೆ, ನೇಪಾಳ ತಂಡವು ಬಾಂಗ್ಲಾದೇಶವನ್ನು 12 ಅಂಕಗಳಿಂದ ಮಣಿಸಿ ಫೈನಲ್‌ಗೇರಿತ್ತು. ಇನ್ನು ಮಹಿಳೆಯರ ವಿಭಾಗದಲ್ಲಿ ಭಾರತ ತಂಡವು ಬಾಂಗ್ಲಾವನ್ನು ಇನ್ನಿಂಗ್‌್ಸ ಹಾಗೂ 49 ಅಂಕ, ನೇಪಾಳ ತಂಡವು ಶ್ರೀಲಂಕಾವನ್ನು ಇನ್ನಿಂಗ್‌್ಸ ಹಾಗೂ 59 ಅಂಕಗಳಿಂದ ಮಣಿಸಿದ್ದವು.
Heartiest congratulations to Team India as both Men’s & Women’s teams won the title of Asian Kho-Kho Champions!!
— Pramod Boro (@PramodBoroBTR) March 23, 2023
The 4th Asian Kho-Kho Championship has been a spectacular display of sportsmanship & athleticism, in which all teams gave their 100%! In the end, the best teams won! pic.twitter.com/WENl9oQnCN
ಟೂರ್ನಿಯಲ್ಲಿ ಭಾರತ, ಬಾಂಗ್ಲಾ, ಭೂತಾನ್, ಇಂಡೋನೇಷ್ಯಾ, ಇರಾನ್, ಮಲೇಷ್ಯಾ, ನೇಪಾಳ, ಸಿಂಗಾಪುರ, ದ.ಕೊರಿಯಾ ಹಾಗೂ ಶ್ರೀಲಂಕಾದ ತಂಡಗಳು ಸ್ಪರ್ಧಿಸಿದ್ದವು.