ಶುಕ್ರವಾರ, ಮೇ 3, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಪ್ಪಿನಂಗಡಿ: ಪೆರ್ನೆ ಟ್ಯಾಂಕರ್ ದುರಂತಕ್ಕೆ ಹತ್ತು ವರ್ಷ- ಅಚ್ಚಳಿಯದೆ ಉಳಿದ ಕಹಿ ನೆನಪು

Twitter
Facebook
LinkedIn
WhatsApp
44996461 493101667837391 8618735242527637504 n 8

ಪುತ್ತೂರು, ಏ 10 : ಉಪ್ಪಿನಂಗಡಿ ಸಮೀಪದ ಪೆರ್ಣೆ ಎಂಬಲ್ಲಿ 2013ರ ಏಪ್ರಿಲ್ 9ರಂದು ಸಂಭವಿಸಿದ ಭೀಕರ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ವಿವಿಧ ಕುಟುಂಬಗಳ 13 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡು 10 ವರ್ಷಗಳು ಕಳೆದರೂ, ದುರಂತದ ಮಾನಸಿಕ ಗಾಯ ಇನ್ನೂ ಮಾಸಿಲ್ಲ.

ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಾಟದ ಟ್ಯಾಂಕರ್ ಪೆರ್ನೆ ತಿರುವಿನಲ್ಲಿ ಅಪಘಾತಕ್ಕೀಡಾಗಿ ಮಗುಚಿ ಬಿತ್ತು. ಈ ಪರಿಣಾಮ ಅನಿಲ ಸೋರಿಕೆಯುಂಟಾಗಿ ಅಗ್ನಿ ಸ್ಪರ್ಶಗೊಂಡ ಕಾರಣ ಬೆಂಕಿಯ ಕೆನ್ನಾಲಿಗೆಯು ಪರಿಸರದಾದ್ಯಂತ ವ್ಯಾಪಿಸಿ ಮನೆ, ಅಂಗಡಿಯೊಳಗಿದ್ದ ಜನರೆಲ್ಲಾ ಬೆಂಕಿಗೆ ಸಿಲುಕಿದರು. ಇದರಿಂದಾಗಿ ಮಹಿಳೆ ಮಕ್ಕಳನ್ನು ಒಳಗೊಂಡಂತೆ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಾಳುಗಳ ಪೈಕಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಸಿಲುಕಿ ಮೈಯಲ್ಲಿದ್ದ ಬಟ್ಟೆ ಬರೆಯೆಲ್ಲಾ ಸುಟ್ಟು , ಮೈ ಚರ್ಮ ಸುಟ್ಟು ಜೀವ ಉಳಿಸಲು ಯುವಕನೋರ್ವ ಹೆದ್ದಾರಿಯಲ್ಲಿ ಓಡೋಡಿ ಬರುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದು ವಿಡಿಯೋ ಚಿತ್ರೀಕರಣದಲ್ಲಿ ಸೆರೆಯಾಗಿತ್ತು.

ಇನ್ನು ಗ್ರಾಮದ ದೈವವೊಂದರ ಆರಾಧನೆ ನಿಂತಿರುವುದರಿಂದ ಕೆಲ ಸಮಯದಲ್ಲೇ ಗ್ರಾಮದಲ್ಲಿ ಭೀಕರವಾದ ಅನಾಹುತವೊಂದು ಸಂಭವಿಸಲಿದೆ ಎಂಬ ಪ್ರಶ್ನಾ ಚಿಂತನೆಯಲ್ಲಿ ವ್ಯಕ್ತಗೊಂಡ ಎಚ್ಚರಿಕೆಯ ಬೆನ್ನಲ್ಲೇ ಈ ಅವಘಡ ಸಂಭವಿಸಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ