ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ

Twitter
Facebook
LinkedIn
WhatsApp
whatsapp 1664434487

ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ಯಾವಾಗಿನಿಂದ ಹೆಚ್ಚಳವಾಯಿತೋ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು, ಅವರು ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ. ಇಂತಹ ವಂಚನೆಗೆ ಪ್ರಮುಖ ಬ್ಯಾಂಕ್‌ಗಳ ಗ್ರಾಹಕರೇ ಒಳಗಾಗಿದ್ದಾರೆ. ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು ಹೆಚ್ಚಾಗಿ ವರದಿಯಾಗಿದೆ.

ಇದೀಗ ಭಾರತ ಸರ್ಕಾರ ಭಾರತೀಯ ಬಳಕೆದಾರರಿಗೆ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್‌ನಲ್ಲಿ (Whatsapp Message) ಕಳುಹಿಸಲಾಗುತ್ತಿದೆ.

ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ವಾಟ್ಸಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ರೀಚಾರ್ಜ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಅನ್ನು ಪಡೆಯಬಹುದು ಎಂದು ನಕಲಿ ಸಂದೇಶದಲ್ಲಿ (Fake Message) ತಿಳಿಸಲಾಗುತ್ತಿದೆ.

ಆದರೆ ಈ ಸಂದೇಶಗಳು ಸಂಪೂರ್ಣ ನಕಲಿಯಾಗಿದ್ದು, ಅಂತಹ ಯಾವುದೇ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ ಎಂದು ಪಿಬಿಐ (ಪತ್ರಿಕಾ ಮಾಹಿತಿ ಬ್ಯೂರೋ) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.

ವಂಚನೆಗಳಿಂದ ದೂರ ಉಳಿಯುವುದು ಹೇಗೆ?
ವಾಟ್ಸಪ್ ಮೂಲಕ ಬರುವ ಇಂತಹ ವಂಚನೆಗಳಿಗೆ ಬೀಳುವುದು ಸುಲಭ. ಮುಖ್ಯವಾಗಿ ಜನರು ತಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಬರುವ ಇಂತಹ ನಕಲಿ ಸಂದೇಶಗಳನ್ನು ತಕ್ಷಣವೇ ನಂಬಿಬಿಡುತ್ತಾರೆ. ಆದರೆ ಇವು ನಕಲಿ ಹೌದೋ ಅಲ್ಲವೋ ಎಂಬುದನ್ನು ಕಂಡು ಹಿಡಿಯಲು ನೀವು ಕೆಲವು ಹಂತಗಳನ್ನು ಅನುಸರಿಸಿ.

ಮೊದಲನೆಯದಾಗಿ ಸಂದೇಶದ ಭಾಷೆಗೆ ಗಮನ ಕೊಡಿ. ಅಂತಹ ಸಂದೇಶಗಳ ಭಾಷೆ ಸಾಮಾನ್ಯವಾಗಿ ಪರಿಪೂರ್ಣವಾಗಿರುವುದಿಲ್ಲ. ಅವುಗಳಲ್ಲಿ ಹೆಚ್ಚಾಗಿ ವ್ಯಾಕರಣ ದೋಷಗಳು ಇರುತ್ತವೆ. ಅಧಿಕೃತ ಸಂದೇಶಗಳು ಸಾಮಾನ್ಯವಾಗಿ ಭಾಷೆ ಮತ್ತು ವಾಕ್ಯ ರಚನೆಯ ವಿಷಯದಲ್ಲಿ ಸ್ಪಷ್ಟವಾಗಿರುತ್ತದೆ. ಸಂದೇಶವನ್ನು ನಂಬಲರ್ಹವಲ್ಲದ ಮೂಲದಿಂದ ಬರೆಯಲಾಗಿದೆ ಎಂಬುದಕ್ಕೆ ಇದು ಅತ್ಯಂತ ಸ್ಪಷ್ಟವಾದ ಸಂಕೇತವಾಗಿರುತ್ತದೆ.

ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುವ ಯಾವುದೇ ಸಂದೇಶವನ್ನು ನೀವು ಎಚ್ಚರಿಕೆಯಿಂದ ನೋಡಬೇಕು. ಲಿಂಕ್ ಸ್ವತಃ ಅಧಿಕೃತವಲ್ಲದ ಮೂಲದಿಂದ ಬಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡುವುದನ್ನು ನೀವು ತಡೆಯಲೇ ಬೇಕು. ಅದೇ ರೀತಿ ನೀವು ಇತರರಿಗೂ ಮಾಡಲು ಹೇಳಿ. ಕೆಲವು ಬಾರಿ ಸರಳವಾಗಿ ನೀವು ಗೂಗಲ್ ಸರ್ಚ್ ಮಾಡಿದರೆ ಸಾಕು. ಈ ಸಂದೇಶ ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ