ಶನಿವಾರ, ಮೇ 4, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಈ ದೇಶದ ಪಾಸ್ಪೋರ್ಟ್ ಬೇಕೆಂದ್ರೆ 60K ಖರ್ಚು ಮಾಡ್ಬೇಕು!

Twitter
Facebook
LinkedIn
WhatsApp
ಈ ದೇಶದ ಪಾಸ್ಪೋರ್ಟ್ ಬೇಕೆಂದ್ರೆ 60K ಖರ್ಚು ಮಾಡ್ಬೇಕು!
 

ಭಾರತೀಯ (Indian) ರಿಗೆ ವಿದೇಶ (Abroad) ದ ಮೇಲೆ ವಿಶೇಷ ಮೋಹ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ವಿದೇಶಕ್ಕೆ ವಿದ್ಯಾಭ್ಯಾಸಕ್ಕೆಂದು ಹೋದವರು ವಾಪಸ್ ಬರುವುದಿಲ್ಲ. ಅಲ್ಲಿಯೇ ಕೆಲಸ ಹಿಡಿದು ದೇಶ ಮರೆಯುತ್ತಾರೆ. ಇನ್ನು ಕೆಲವರು ಇಲ್ಲಿ ವಿದ್ಯಾಭ್ಯಾಸ ಮುಗಿಸಿ ಉತ್ತಮ ಸಂಬಳವಿದೆ ಎನ್ನುವ ಕಾರಣಕ್ಕೆ ವಿದೇಶಕ್ಕೆ ಹೋಗ್ತಾರೆ. ಮತ್ತೆ ಕೆಲವರು ವಿದೇಶ ಸುತ್ತಿ ಬರಲು ಪ್ರವಾಸಕ್ಕೆ ಹೋಗ್ತಾರೆ. ನೀವು ವಿದೇಶಕ್ಕೆ ಯಾವುದೇ ಕಾರಣಕ್ಕೆ ಹೋಗಿ, ಹೋಗಲು ನಿಮಗೆ ಪಾಸ್ಪೋರ್ಟ್ ಅತ್ಯಗತ್ಯ. ಪಾಸ್ಪೋರ್ಟ್ (Passport ) ಪುಕ್ಕಟ್ಟೆ ಸಿಗೋದಿಲ್ಲ ಎನ್ನುವ ವಿಚಾರ ಕೂಡ ನಿಮಗೆ ತಿಳಿದಿರಬೇಕು. ಬೇರೆ ಬೇರೆ ದೇಶಗಳಲ್ಲಿ ಪಾಸ್ಪೋರ್ಟ್ ಶುಲ್ಕ ಬೇರೆ ಬೇರೆಯಾಗಿರುತ್ತದೆ. 100 ರಿಂದ 160 ಡಾಲರ್‌ಗಳವರೆಗಿನ ಹಲವಾರು ಪಾಸ್‌ಪೋರ್ಟ್‌ಗಳಿವೆ. ಆದ್ರೆ ಕೆಲ ದೇಶಗಳ ಪಾಸ್ಪೋರ್ಟ್ ಇದಕ್ಕಿಂತ ದುಬಾರಿಯಾಗಿದೆ. ಪಾಸ್ಪೋರ್ಟ್ ಪಡೆಯಲು ಹಾಗೂ ನವೀಕರಿಸಲು ಸಾಕಷ್ಟು ಹಣ ವ್ಯಯ ಮಾಡ್ಬೇಕು. ವಿಶ್ವದ ಅತ್ಯಂತ ದುಬಾರಿ ಪಾಸ್ಪೋರ್ಟ್ ಗಳು ಯಾವುವು ಎಂಬುದನ್ನು ನಾವು ಹೇಳ್ತೇವೆ.

 

ವಿಶ್ವದ ದುಬಾರಿ ಪಾಸ್ಪೋರ್ಟ್ :

ಸ್ವಿಟ್ಜರ್ಲೆಂಡ್ : ಸ್ವಿಟ್ಜರ್ಲೆಂಡ್ ಪಾಸ್ಪೋರ್ಟ್ ಬೆಲೆ ಕಡಿಮೆಯೇನಿಲ್ಲ. ಸ್ವಿಸ್ ಪ್ರಜೆಗಳು ಪಾಸ್‌ಪೋರ್ಟ್‌ ಪಡೆಯಲು ಸುಮಾರು 150 ಡಾಲರ್ ಅಂದರೆ ಸುಮಾರು 11578 ರೂಪಾಯಿ ಖರ್ಚು ಮಾಡ್ಬೇಕು.

ಮೆಕ್ಸಿಕೋ : ಮೆಕ್ಸಿಕನ್ ಪಾಸ್‌ಪೋರ್ಟ್ ಅನ್ನು ನವೀಕರಿಸುವ ವೆಚ್ಚ ಸುಮಾರು 170 ಡಾಲರ್ ಆಗಿದೆ. ಭಾರತೀಯ ಕರೆನ್ಸಿಯಲ್ಲಿ ಇದು 13122 ರೂಪಾಯಿಯಾಗುತ್ತದೆ.

ಆಸ್ಟ್ರೇಲಿಯನ್ (Australia) ಪಾಸ್ಪೋರ್ಟ್ : ಆಸ್ಟ್ರೇಲಿಯನ್ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಅಲ್ಲಿನ ನಾಗರಿಕರು 220 ಡಾಲರ್ ಅಂದರೆ ಸುಮಾರು 16981 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ವಿದೇಶದಲ್ಲಿ ವಾಸಿಸುವ ಆಸ್ಟ್ರೇಲಿಯನ್ ನಾಗರಿಕರಿಗೆ ಸಾಗರೋತ್ತರ ಸಂಸ್ಕರಣೆಯ ಹೆಚ್ಚುವರಿ ಶುಲ್ಕವೂ ಇದೆ. ಈ ಕಾರಣದಿಂದಾಗಿ ಯುಎಸ್ ನಲ್ಲಿ ವಾಸಿಸುವ ಆಸ್ಟ್ರೇಲಿಯಾದ ನಾಗರಿಕರಿಗೆ ಈ ವೆಚ್ಚವು 336 ಡಾಲರ್ ಅಂದ್ರೆ ಸುಮಾರು 26000 ರೂಪಾಯಿಯಾಗಿತ್ತದೆ.

ಲಿಚ್ಟೆನ್ಸ್ಟೈನ್ : ಲಿಚ್ಟೆನ್ಸ್ಟೈನ್ ಯುರೋಪ್‌ನಲ್ಲಿ ನಾಲ್ಕನೇ ಅತಿ ಚಿಕ್ಕ ದೇಶವಾಗಿದೆ ಮತ್ತು ಭೂಪ್ರದೇಶದಲ್ಲಿ ವಿಶ್ವದ ಆರನೇ ಚಿಕ್ಕ ದೇಶವಾಗಿದೆ. ಇಲ್ಲಿ ಹೊಸ ಪಾಸ್‌ಪೋರ್ಟ್‌ಗೆ ಶಿಪ್ಪಿಂಗ್ ಶುಲ್ಕ ಸೇರಿದಂತೆ ನಾಗರಿಕರಿಗೆ ಸುಮಾರು 260 ಡಾಲರ್ ವೆಚ್ಚವಾಗುತ್ತದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ 20000 ರೂಪಾಯಿಗಳಿಗಿಂತ ಹೆಚ್ಚು.

ಕ್ಯೂಬಾ (Cuba) : ಕ್ಯೂಬಾದಲ್ಲಿ ಹೊಸ ಪಾಸ್‌ಪೋರ್ಟ್‌ಗಳಿಗೆ ಸುಮಾರು 105 ಡಾಲರ್ ಖರ್ಚು ಮಾಡ್ಬೇಕು. ಇದಲ್ಲದೆ ಪಾಸ್‌ಪೋರ್ಟ್ ನವೀಕರಣಕ್ಕೆ ಹೆಚ್ಚುವರಿ 21 ಡಾಲರ್ ವೆಚ್ಚವಾಗುತ್ತದೆ. 10 ವರ್ಷಗಳ ಕಾಲ ಕ್ಯೂಬನ್ ಪಾಸ್‌ಪೋರ್ಟ್ ಇಟ್ಟುಕೊಳ್ಳುವ ವೆಚ್ಚವು ಸುಮಾರು 270 ಡಾಲರ್ ಆಗುತ್ತದೆ. ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ 20841 ರೂಪಾಯಿ.

ಸಿರಿಯನ್ ಪಾಸ್ಪೋರ್ಟ್ : ಸಿರಿಯಾದ ಹೊರಗೆ ವಾಸಿಸುವ ಸಿರಿಯನ್ ನಾಗರಿಕರು ಹೊಸ ಪಾಸ್‌ಪೋರ್ಟ್‌ಗಾಗಿ 300 ಡಾಲರ್ ಅಥವಾ ಸುಮಾರು 23148 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. 10 ವರ್ಷಗಳ ಕಾಲ ಸಿರಿಯನ್ ಪಾಸ್‌ಪೋರ್ಟ್ ಹೊಂದಲು ಕನಿಷ್ಠ 600 ಡಾಲರ್ ನೀಡಬೇಕು.

ಲೆಬನಾನ್ : ಲೆಬನಾನಿನ ನಿವಾಸಿಗಳಿಗೆ ಪಾಸ್‌ಪೋರ್ಟ್ ಅನ್ನು ನವೀಕರಿಸುವ ವೆಚ್ಚ ಸುಮಾರು 795 ಡಾಲರ್ ಆಗಿದೆ. ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 61342 ರೂಪಾಯಿಗಳು. ಲೆಬನಾನ್‌ನ ಹೊರಗೆ ವಾಸಿಸುವ ನಾಗರಿಕರಿಗೆ ಈ ವೆಚ್ಚವು 600 ಆಗಿದೆ.

ಭಾರತದ ಪಾಸ್ಪೋರ್ಟ್ (Indian Passport) : ಭಾರತದ ನಾಗರೀಕರು ಹೊಸದಾಗಿ ಪಾಸ್ಪೋರ್ಟ್ ಪಡೆಯಲು 1500 – 2000 ರೂಪಾಯಿ ಪಾವತಿಸಬೇಕು. ಇದು ಬೇರೆ ಬೇರೆ ಸೇವೆಗಳಿಗೆ ಭಿನ್ನವಾಗಿರುತ್ತದೆ. 60 ಪೇಜ್ ನ ಬುಕ್ ಗೆ 2 ಸಾವಿರವಾದ್ರೆ 36 ಪೇಜಿನ ಪಾಸ್ಪೋರ್ಟ್ ಗೆ 1500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ