ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಬ್ರು ಸ್ಟಾರ್ ನಟಿಯರ ನಡುವೆ ಜಗಳ ; ರಮ್ಯಾ ಬಗ್ಗೆ ಮೌನ ಮುರಿದ ಅಮೃತಾ ಅಯ್ಯಂಗಾರ್

Twitter
Facebook
LinkedIn
WhatsApp
1 18

ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಜರ್ನಿ ಆರಂಭಿಸಿದ ಅಮೃತಾ ಅಯ್ಯಂಗಾರ್ ಮತ್ತು ಮೋಹಕ ತಾರೆ ರಮ್ಯಾ ಹೇಗೆ ಸ್ನೇಹಿತರು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪದೇ ಪದೇ ಪ್ರಶ್ನೆ ಮಾಡುತ್ತಿರುತ್ತಾರೆ. ಇದಕ್ಕೆ ಅಮೃತಾ ಉತ್ತರ ಕೊಟ್ಟಿದ್ದಾರೆ. 

No photo description available.

‘ಒಬ್ರು ಸ್ನೇಹಿತರ ಮೂಲಕ ನಾನು ರಮ್ಯಾ ಅವರನ್ನು ಭೇಟಿ ಮಾಡಿದ್ದು. ನಾನು ಯಾರೆಂದು ಅವರಿಗೆ ಗೊತ್ತಿತ್ತು ನನ್ನನ್ನು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಆರಂಭಿಸಿದ್ದರು. ಇದೆಲ್ಲಾ ನನಗೆ ಪ್ಯಾನ್ ಮೊಮೆಂಟ್‌ಗಳು. ರಮ್ಯಾ ಅವರನ್ನು ಭೇಟಿ ಮಾಡಿದಾಗ ಹೇಳಿದೆ ನೀವು ನನಗೆ ತುಂಬಾ ಸ್ಫೂರ್ತಿ ತುಂಬುತ್ತೀರಿ ನಿಮ್ಮನ್ನು ನೋಡಿ ಎಷ್ಟೋ ವಿಚಾರಗಳನ್ನು ಕಲಿತಿರುವೆ. ಸಿನಿಮಾಗೆ ಬಂದಾಗ ನೋಡಪ್ಪ ಹೆಸರು ಮಾಡಿದರೆ ರಮ್ಯಾ ಅವರಂತೆ ಹೆಸರು ಮಾಡಬೇಕು ಎಂದು ನಿರ್ಧಾರ ಮಾಡಿದೆ. ಇವತ್ತಿಗೂ ನೋಡಿ ಅವ್ರು ಇಂಡಸ್ಟ್ರಿಗೆ ವಾಪಸ್ ಬರ್ತಾರೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕುತ್ತಾರೆ ಸಿನಿಮಾಗೆ ವಾಪಸ್ ಬರ್ತಾರೆ ಅಂದರೆ  ಜನರು ಕಾಯುತ್ತಾರೆ. ಎಲ್ಲಾ ನಾಯಕಿಯರಿಗೂ ಈ ಪವರ್ ಇರುವುದಿಲ್ಲ. ಆ ಕ್ರೇಶ್‌ನ ಇಷ್ಟು ವರ್ಷ ಆದ್ರೂ ಕಾಪಾಡಿಕೊಂಡಿರುವುದು ಗ್ರೇಟ್.’ ಎಂದು ಖಾಸಗಿ ಸಂದರ್ಶನದಲ್ಲಿ ಅಮೃತಾ ಮಾತನಾಡಿದ್ದಾರೆ.

May be an image of 1 person and jewelry

‘ನಾನು ತುಂಬಾ ಅದೃಷ್ಟ ಮಾಡಿರುವೆ ಏಕೆಂದರೆ ಯಾವತ್ತೂ ಯಾವ ನಾಯಕಿಯರ ಜೊತೆನೂ ಕಾಣಿಸಿಕೊಂಡಿಲ್ಲ ಆದರೆ ನಾನು ನನ್ನ ತಾಯಿ ಜೊತೆ ದುಬೈಗೆ ಹೋಗಿದ್ದಾಗ ಅಲ್ಲಿ ಅವರನ್ನು ಭೇಟಿ ಮಾಡಿದೆ. ರಮ್ಯಾ ಅವರಿಗೆ ನನ್ನ ಜರ್ನಿ ತುಂಬಾನೇ ಇಷ್ಟವಾಗುತ್ತದೆ ಬ್ಯಾಕ್‌ಗ್ರೌಂಡ್‌ ಇಲ್ಲದೆ ನಾನು ಸಿನಿಮಾ ಜರ್ನಿ ಆರಂಭಿಸಿರುವುದು ಎಂದು. ಕಷ್ಟ ಪಡುತ್ತಿರುವೆ ನಿನ್ನ ಕಾಲುಗಳ ಮೇಲೆ ನೀನು ನಿಂತುಕೊಂಡಿರುವೆ ಎಂದು ಖುಷಿಯಿಂದ ಹೇಳುತ್ತಾರೆ. ಮೊನ್ನೆ ಲಂಡನ್‌ಗೆ ಒಟ್ಟಿಗೆ ಹೋಗಿದ್ವಿ..ಅದೆಲ್ಲಾ ನೆನಪು ಮಾಡಿಕೊಂಡರೆ ಒಂದೊಂದು ಕ್ಷಣವೂ ಅಮೂಲ್ಯ ಅನಿಸುತ್ತದೆ ನಿಜಕ್ಕೂ ಅವರ ಜೊತೆ ಇದ್ದೀವಾ ಅನಿಸುತ್ತದೆ. ಹುಡುಗರಿಗೆ ಮಾತ್ರವಲ್ಲ ಹುಡುಗಿಯರಿಗೂ ಫೆವರೆಂಟ್ ರಮ್ಯಾ, ಅವರನ್ನು ನೋಡಿ ಫ್ಯಾನ್ ಮೊಮೆಂಟ್ ಫೀಲ್ ಆಗವುದು ಫಾರ್‌ಎವರ್’ ಎಂದು ಅಮೃತಾ ಹೇಳಿದ್ದಾರೆ.

Amrutha Iyengar Photos [HD]: Latest Images, Pictures, Stills of Amrutha  Iyengar - FilmiBeat

ಸ್ಟಾರ್ ನಾಯಕಿರು ನಡುವೆ enemity ಇದ್ಯಾ?

‘ಇಂಡಸ್ಟ್ರಿಯಲ್ಲಿ ಇಬ್ಬರು ನಟಿಯರ ನಡುವೆ ಜಗಳು ಇರುತ್ತೆ ಅನ್ನೋದು ಸುಳ್ಳು. ಇಂಡಸ್ಟ್ರಿಯಲ್ಲಿರುವ ಪ್ರತಿಯೊಬ್ಬರೂ ನನ್ನ ಸ್ನೇಹಿತರು. ಜಗಳ ಅನ್ನೋ ಪದಕ್ಕೆ ಜಾಗವೇ ಇಲ್ಲ. ರಮ್ಯಾ ಅವರೇ ಬೆಸ್ಟ್‌ ಫ್ರೆಂಡ್ ಆಗಿದ್ದಾರೆ ಅವರು ನಮಗೆ ಸೀನಿಯರ್ ಅವರನ್ನು ನೋಡಿ ಕಲಿಯಬೇಕು ನಾವು ಏಕಂದರೆ ಜ್ಯೂನಿಯರ್ಸ್‌ ಮತ್ತು ಹೊಸ ಕಲಾವಿದರು ಹೊಸ ತಂಡದವರಿಗೆ ತುಂಬಾ ಸಪೋರ್ಟ್ ಮಾಡುತ್ತಾರೆ. ಹಗೆತನದಿಂದ ಏನು ಮಾಡಬೇಕಿಲ್ಲ. ನಾನು ಮಿಲನಾ ಸಿನಿಮಾ ಮಾಡಿದ್ದೀವಿ…ನಾನು ಹೊಟ್ಟೆ ತುಂಬಾ ಊಟ ಮಾಡಬೇಕು ನಿದ್ರೆ ಮಾಡಬೇಕು ಅಂದ್ರೆ ಮೊದಲು ಹೋಗುವುದು ಮಿಲನಾ ಮನೆಗೆ. ಸಪ್ತಮಿ ನಾನು ಒಟ್ಟಿಗೆ ನಟಿಸಿದ್ದೀವಿ, ಸಂಜನಾ ಕೂಡ ಚೆನ್ನಾಗಿದ್ದಾರೆ. ಒಂದು ವಾರ ಪೋನ್ ಮಾಡಿಲ್ಲ ಅಂದ್ರೆ ಮಕ್ಕಳ ರೀತಿ ಮುನಿಸಿಕೊಳ್ಳುವವರು ಇದ್ದಾರೆ ಅಷ್ಟು ಗಟ್ಟಿಯಾಗಿದೆ ನಮ್ಮ ಸ್ನೇಹ’ ಎಂದಿದ್ದಾರೆ ಅಮೃತಾ.

May be an image of 2 people and people standing

ಪಾತ್ರದ ಹಂಬಲ: 

‘ಪ್ರತಿಯೊಬ್ಬ ನಾಯಕಿಗೂ ಪಾತ್ರದ ಹಂಬಲ ಇರುತ್ತದೆ. ಯಾರಿಗೂ ಸಾಕಪ್ಪ ಇಷ್ಟು ಮಾಡಿ ಅನಿಸುವುದಿಲ್ಲ..ಜೀವನದಲ್ಲಿ ಎಷ್ಟೇ ಸಿನಿಮಾ ಮಾಡಿದ್ದರೂ ಪಾತ್ರದ ಹಂಬಲ ಇರಬೇಕು. ದಿನ ವಿಭಿನ್ನ ಪಾತ್ರಗಳನ್ನು ಹುಡುಗಬೇಕು. ಕನ್ನಡ ಸಿನಿಮಾ ರಂಗದಲ್ಲಿ ನಟಿಯರಿಗೆ ಅವಕಾಶ ಕಡಿಮೆ ಇಲ್ಲ ನಿಜ ಹೇಳಬೇಕು ಅಂದ್ರೆ ಬೇರೆ ಭಾಷೆಯಲ್ಲಿ ಕನ್ನಡದವರೇ ಮಿಂಚುತ್ತಿದ್ದಾರೆ. ಅನೇಕ ಸಿನಿಮಾಗಳನ್ನು ಕನ್ನಡವರೇ ಮಿಂಚುತ್ತಿರುವುದು’ ಎಂದು ಅಮೃತಾ ಹೇಳಿದ್ದಾರೆ. 

ಅಮೃತಾ ಅಯ್ಯಂಗಾರ್ ಜೀವನಚರಿತ್ರೆ | Amrutha Iyengar Biography in Kannada -  Filmibeat Kannada

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist