ಬೆಂಗಳೂರು: ಇಂದು (ಭಾನುವಾರ) ಐಪಿಎಲ್ನಲ್ಲಿ(IPL 2024) 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಮುಖಾಮುಖಿಯಾದರೆ, ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(Gujarat Titans) ಮತ್ತು ಪಂಜಾಬ್ ಕಿಂಗ್ಸ್(Punjab Kings) ಸೆಣಸಾಟ ನಡೆಸಲಿದೆ. ಒಟ್ಟಾರೆಯಾಗಿ ಇಂದು ದಿನವಿಡಿ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸಿಗಲಿದೆ.
ಇಂದು ಕೆಕೆಆರ್ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ; ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ..!
ಆರ್ಸಿಬಿ ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ಜೀವಂತರವಿರಿಸಬೇಕಿದ್ದರೆ ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ. ಒಂದೊಮ್ಮೆ ಸೋತರೆ ಟೂರ್ನಿಯಿಂದ ಬಹುತೇಖ ಹೊರಬೀಳಲಿದೆ. ಇದನ್ನೂ ತಪ್ಪಿಸಬೇಕಾದರೆ ಆರ್ಸಿಬಿ ತಂಡ ಕೆಕೆಆರ್ ವಿರುದ್ಧದ ಪಂದ್ಯದಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕಿದೆ. ಆದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತವಿರುತ್ತದೆ.
ಕೆಕೆಆರ್ ತಂಡ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕ ಸಂಪಾದಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಆರ್ಸಿಬಿ ವಿರುದ್ಧ ಸೋತರೂ ಕೂಡ ತಂಡಕ್ಕೆ ಯಾವುದೇ ಹಾನಿಯಾಗದು. ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 3 ಅಥವಾ 4 ಪಂದ್ಯ ಗೆದ್ದರೂ ಸುಲಭವಾಗಿ ಪ್ಲೇ ಆಫ್ಗೇರಬಹುದು.
Then: Friends
— Royal Challengers Bengaluru (@RCBTweets) April 20, 2024
Now: Friends
Tomorrow: Opponents
Day after: Friends 🫂😃
This is @BigBasket_com presents RCB Bold Diaries.#PlayBold #ನಮ್ಮRCB #IPL2024 #KKRvRCB pic.twitter.com/7PY3gMZuDp
ಗ್ರೀನ್ ಜೆರ್ಸಿಯಲ್ಲಿ ಕಣಕ್ಕೆ
ಗೋ ಗ್ರೀನ್ ಅಭಿಯಾನದ ಭಾಗವಾಗಿ ಆರ್ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ(RCB Green Jersey) ಆಡಲಿದೆ. ಆರ್ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಆರ್ಸಿಬಿ ಐಪಿಎಲ್ನಲ್ಲಿ ಹಸಿರು ಜೆರ್ಸಿಯಲ್ಲಿ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದೆ. ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಅದರಲ್ಲೂ ಈ ಬಾರಿ ಆರ್ಸಿಬಿ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಹೀಗಾಗಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸೀತೇ, ಈ ಉಡುಗೆ ಆರ್ಸಿಬಿ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ.