ಇಂಡಿಗೋ ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ - ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು
Twitter
Facebook
LinkedIn
WhatsApp
ಮುಂಬೈ, ಮಾ 21 : ಬ್ಯಾಂಕಾಕ್‌ನಿಂದ ನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮ್ಯಾನ್ಮಾರ್‌ನ ರಂಗೂನ್ (ಯಾಂಗೂನ್) ಗೆ ತಿರುಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಬ್ಯಾಂಕಾಕ್‌ನಿಂದ ಮುಂಬೈಗೆ ಕಾರ್ಯನಿರ್ವಹಿಸುತ್ತಿದ್ದ ವಿಮಾನದಲ್ಲಿ ವೈದ್ಯಕೀಯ ತುರ್ತುಸ್ಥಿತಿಯ ಕಾರಣ ರಂಗೂನ್‌ಗೆ ತಿರುಗಿಸಲಾಗಿತ್ತು, ಆದರೆ ವಿಮಾನ ಲ್ಯಾಂಡ್ ಆದ ಬಳಿಕ ವಿಮಾನ ನಿಲ್ದಾಣದ ವೈದ್ಯಕೀಯ ತಂಡವು ಪ್ರಯಾಣಿಕ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಇನ್ನು ಇಂಡಿಗೋ ಪ್ರಯಾಣಿಕನೊಬ್ಬ ವಿಮಾನದಲ್ಲಿ ಪ್ರಯಾಣ ಮಧ್ಯದಲ್ಲಿಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದ್ದು, ಈ ಹಿಂದೆ ಮಾರ್ಚ್ 17 ರಂದು ರಾಂಚಿ-ಪುಣೆ ಇಂಡಿಗೋ ವಿಮಾನದಲ್ಲಿಯೂ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.