ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್ : ವೈರಲ್ ಆದ ಫೋಟೋ
ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಮತ್ತು ಪರಿಣೀತಿ ಬುಧವಾರ ಮತ್ತು ಗುರುವಾರ ಬೇರೆ ಬೇರೆ ಹೋಟೆಲ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲದೇ, ಇಬ್ಬರೂ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಪದೇ ಪದೇ ಹೋಟೆಲ್ ಗಳಲ್ಲೇ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ.
ಮೂಲಗಳ ಪ್ರಕಾರ ರಾಘವ್ ಚಡ್ಡಾ ಹಾಗೂ ಪರಿಣೀತಿ ಒಂದೇ ಕಾಲೇಜಿನಲ್ಲಿ ಓದಿದವರಂತೆ. ಅಲ್ಲದೇ, ಹಲವು ದಿನಗಳಿಂದಲೂ ಅವರು ಸ್ನೇಹಿತರು. ಆಗಾಗ್ಗೆ ಇಬ್ಬರೂ ಹೀಗೆ ಸಿಗುತ್ತಲೇ ಇರುತ್ತಾರಂತೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎನ್ನುವವರು ಇದ್ದಾರೆ. ಜೊತೆಗೆ ಪರಿಣೀತಿ ಮತ್ತು ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವವರು ಇದ್ದಾರೆ.
ಬುಧವಾರ ಗುರುಗ್ರಾಮ ಹೋಟೆಲ್ ನಲ್ಲಿ ಈ ಜೋಡಿ ರಾತ್ರಿ ಊಟ ಮಾಡಿದ್ದರೆ, ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅನುಮಾನಕ್ಕೆ ಕಾರಣರಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಈ ಜೋಡಿ ಡಿನ್ನರ್ ಮಾಡಿದ್ದಕ್ಕೆ ನಾನಾ ಕಾರಣಗಳನ್ನು ಹುಡುಕುತ್ತಿರುವುದಂತೂ ಸತ್ಯ.