ಶನಿವಾರ, ಮೇ 4, 2024
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆಕ್ಸಿಜನ್ ಕೊಡೋಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ: ಸಿದ್ದರಾಮಯ್ಯ

Twitter
Facebook
LinkedIn
WhatsApp
ಆಕ್ಸಿಜನ್ ಕೊಡೋಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಆಕ್ಸಿಜನ್ ಕೊಡುವುದಕ್ಕೆ ಆಗದವರು ಇಂದು ಯೋಗ ಮಾಡಲು ಬಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಿ ಮೋದಿ ಬಂದಿದ್ದಾರೆ. 19/20 ರಲ್ಲಿ ಬಾರಿ ಪ್ರವಾಹ ಬಂದಿತ್ತು. ಆಗ ಪ್ರಧಾನಿಯವರು ಇಲ್ಲಿಗೆ ಬರಲಿಲ್ಲ. ನೊಂದ ಜನರಿಗೆ ಸಾಂತ್ವನ ಹೇಳಲಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಲಿಲ್ಲ. ಈಗ ಅವರಿಗೆ ರಾಜ್ಯದ ನೆನಪಾಗಿದೆ. ಆಕ್ಸಿಜನ್ ಕೊಡುವುದಕ್ಕೆ ಆಗದವರು. ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಮಾತನಾಡಬೇಕು. 40% ಕಮೀಷನ್ ಬಗ್ಗೆ ದೂರು ಕೊಟ್ಟರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬ್ ಅರ್ಬನ್ ಯೋಜನೆ ಹೇಳುತ್ತಲೇ ಬರುತ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳುತ್ತಿದ್ದಾರೆ. ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿ ಲೂಟಿ ಹೊಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಕಿಡಿಕಾರಿದ್ದಾರೆ.

ನಿರುದ್ಯೋಗದ ಬಗ್ಗೆ ಇಲ್ಲಿ ಮಾತನಾಡಲ್ಲ. ಬೆಲೆ ಏರಿಕೆ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ. ಈಗ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿ. ಕೋವಿಡ್ ವೇಳೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದ ಮೇಲೆ ಆಕ್ಸಿಜನ್ ಕೊಟ್ರಾ? ಹೈಕೋರ್ಟ್ ಹೇಳಿದರೂ ಆಕ್ಸಿಜನ್ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್ ಚಾಟಿ ಬೀಸಿದ ಮೇಲೆ ಕೊಟ್ಟರು. ಆಕ್ಸಿಜನ್ ಇಲ್ಲದೇ ಸಾವಿರಾರು ಜನ ಸತ್ತರು. ಚಾಮರಾಜನಗರದಲ್ಲಿ 36 ಜನ ಸಾವನ್ನಪ್ಪಿದ್ದರು. ರಾಜ್ಯದ ಬೇರೆಡೆಯೂ ಆಕ್ಸಿಜನ್ ಇಲ್ಲದೆ ಸತ್ತರು. ಇದಕ್ಕೆಲ್ಲ ಯಾರು ಕಾರಣ ಇದೇ ಮೋದಿಯವರು ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇಶದಲ್ಲಿ ನಿರುದ್ಯೋಗ ಇನ್ನೂ ಹೆಚ್ಚುತ್ತಿದೆ. ಯುವಕರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಹಿಂಸಾತ್ಮಕ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಆದರೆ ನ್ಯಾಯಯುತ ಹೋರಾಟಕ್ಕೆ ಬೆಂಬಲವಿದೆ. ಕೇಂದ್ರದ ಅಗ್ನಿಪಥ್ ಯೋಜನೆಯಲ್ಲಿ ನಾಲ್ಕು ವರ್ಷದವರೆಗೆ ಸೇರಿಸಿಕೊಳ್ಳುತ್ತೇವೆ ಅಂತಾರೆ. ಆದರೆ ನಾಲ್ಕು ವರ್ಷದ ನಂತರ ಪಿಂಚಣಿ ಸಿಗಲ್ಲ. ಹೀಗಾಗಿ ಮುಂದೆ ನಮ್ಮ ಕಥೆ ಹೇಗೆ ಅಂತ ಜನರು ಕೇಳುತ್ತಿದ್ದಾರೆ. ದೇಶದ ಯುವಕರು ಕೇಳುತ್ತಿದ್ದಾರೆ. ಇವರು ಯೋಜನೆ ಬಗ್ಗೆ ಹಠ ಹಿಡಿದು ಕೂತಿದ್ದೇಕೆ? ನಾಲ್ಕು ವರ್ಷದ ನಂತರ ತೆಗೆದುಬಿಡುತ್ತಾರೆ. ಆ ನಂತರ ಅವರಿಗೆ ಕೆಲಸ ಕೊಡಲ್ಲ. ಸೇನೆಗೆ ಸೇರುವವರು ಏನು ಮಾಡಬೇಕು. ನಾಲ್ಕು ವರ್ಷ ಮಾತ್ರ ಕೊಡುತ್ತಾರೆ. 6 ತಿಂಗಳು ತರಬೇತಿಗೆ ಮುಗಿಯುತ್ತದೆ. ಉಳಿಯುವುದು ಮೂರುವರೆ ವರ್ಷ ಮಾತ್ರ. ಉದ್ಯೋಗಿಗಳು ಆಮೇಲೆ ಏನು ಮಾಡಬೇಕು. ರಿಟೈರ್ಡ್ ಬೆನಿಫಿಟ್ ಏನೂ ಸಿಗಲ್ಲ. ಅದಕ್ಕೆ ಹಠ ಹಿಡಿಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಇವತ್ತು ಅಂಬೇಡ್ಕರ್ ವಿವಿ ಉದ್ಘಾಟನೆ ಮಾಡುತ್ತಿದ್ದಾರೆ. ಇದನ್ನು ಜಾರಿಗೆ ತಂದಿದ್ದು ಯಾರು? ನಾವು, ನಮ್ಮ ಅವಧಿಯಲ್ಲೇ ಜಮೀನು ಕೊಟ್ಟು ತಂದಿದ್ದು. ಆದರೆ ಈಗ ಅದನ್ನು ಅವರು ಉದ್ಘಾಟನೆ ಮಾಡುತ್ತಿದ್ದಾರೆ. ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು? ನಾನು, ನಾನು ಅಂತ ಪ್ರತಾಪ್ ಸಿಂಹ ಓಡಾಡುತ್ತಿದ್ದಾರೆ. ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್ ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗುತ್ತಿದೆ. ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!

ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ‌ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ

ಅಂಕಣ